ಬಿಸಿ ಬಿಸಿ ಸುದ್ದಿ

ಮನೆ ನಳ ಸಂಪರ್ಕ ಕುರಿತು ವಿಶೇಷ ಗ್ರಾಮಸಭೆ

ಕಲಬುರಗಿ: ಜಿಲ್ಲೆ ಜೇವರ್ಗಿ ತಾಲೂಕಿನ ಹರನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಚಿನಾಳ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಲಬರುಗಿ ಹಾಗೂ ರೂಢಾ ಸಂಸ್ಥೆ,ಧಾರವಾಡ ರವರ ಸಂಯುಕ್ತಾಶ್ರಯದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ  ಹಂಚಿನಾಳ ಎಸ್ ಗ್ರಾಮದಲ್ಲಿ‌  ಮನೆ ನಳ ಸಂಪರ್ಕ ನೀಡಲು ವಿಶೇಷ ಗ್ರಾಮ ಸಭೆ ಏರ್ಪಡಿಸಲಾಗಿತ್ತು.

ಹಂಚಿನಾಳ ಗ್ರಾಮದಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು , ಸದರಿ ಕಾಮಗಾರಿ ಕೈಗೊಳ್ಳಲು ಗ್ರಾಮಸ್ಥರ ಸಹಭಾಗಿತ್ವ ಅಗತ್ಯವೆಂದು ಹಾಗೂ ಸಮುದಾಯ ವಂತಿಕೆ ಅವಶ್ಯಕವೆಂದು ಜಲಜೀವನ ಮಿಷನ್ ಯೋಜನೆಯ ಡಿ.ಪಿ.ಎಂ ಡಾ.ರಾಜು ಕಂಬಾಳಿಮಠ ತಿಳಿಸಿದರು ಹರನೂರು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಮಹಾದೇವ ದ್ಯಾಮ ರವರು ಮಾತನಾಡುತ್ತ ಯೋಜನೆ ಸಫಲತೆಗೆ ಗ್ರಾಮಸ್ಥರ ಸಹಕಾರ ಅತ್ಯಗತ್ಯವೆಂದರು ಈಗಾಗಲೇ ಊರಿನ ನೈರ್ಮಲ್ಯತೆಗಾಗಿ ಶೌಚಾಲಯ,ಇಂಗುಗುಂಡಿ ನಿರ್ಮಿಸಲಾಗಿದ್ದು , ಇನ್ನು ಬೇಡಿಕೆ ಇದ್ದಲ್ಲಿ ಮಾಡಿ ಕೊಡಲಾಗುವುದು ಎಂದರು.

ರೂಡಾ ಸಂಸ್ಥೆ  ತಂಡ ನಾಯಕರಾದ ಸಂತೋಷ ಮೂಲಗೆ ರವರು ಮಾತನಾಡಿ  ಗ್ರಾಮದಲ್ಲಿ ಪ್ರತಿಯೊಬ್ಬರಿಗೂ ಮುಂದಿನ ದಿನಗಳಲ್ಲಿ ಪ್ರತಿ ಹಂತದಲ್ಲಿ ಯೋಜನೆ ಕುರಿತು ತರಬೇತಿ ನೀಡಲಾಗುವುದೆಂದರು. ಗ್ರಾಮೀಣ ಕುಡಿಯುವ ನೀರು ಇಲಾಖೆಯ ಇಂಜೀನಿಯರ್ ಬಿಲಾಲ್ ಸತ್ತಾರ್  ರವರು ಕಾರ್ಯಾತ್ಮಕ ನಳದ ರಚನೆ ಮತ್ತು ವಿನ್ಯಾಸ್ ಬಗ್ಗೆ ತಿಳಿಸಿದರು ,ಸಂಪನ್ಮೂಲ ವ್ಯಕ್ತಿ ಶ್ರವಣ ಕುಮಾರ ಅಕ್ಕಿಮನಿ ಮತ್ತು , ಮಾತನಾಡುತ್ತ   ಶಾಲೆ, ಅಂಗನವಾಡಿ ಗಳಿಗೆ ನಳ ಸಂಪರ್ಕವನ್ನು ವಿಶೇಷ 100 ದಿನಗಳ ಕಾರ್ಯಕ್ರಮದಲ್ಲಿ ಇದೇ ಸಂದರ್ಭದಲ್ಲಿ ಇಂಜೀನಿಯರ್ ರಾಜಕುಮಾರ ರವರು  ಗ್ರಾಮ ನಕ್ಷೆ ಹಾಕಿ ಯೋಜನೆ ಬಗ್ಗೆ ತಿಳಿಸಿದರು.

ಊರಿನ ಮುಖಂಡರಾದ ದಾವುಜಪ್ಪ ,ತಿಪ್ಪಣ್ಣ ಗೌಡ,ಯಮನಪ್ಪ, ಮೌನೇಶಗೌಡ ಸಮುದಾಯ ವಂತಿಕೆ ಕೊಡಲು ಒಪ್ಪಿದರು, ಶಾಲಾ ಶಿಕ್ಷಕರಾದ ಶಿವಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

5 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

5 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

8 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

8 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

8 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

8 hours ago