ಬಿಸಿ ಬಿಸಿ ಸುದ್ದಿ

ಅರಿಷಡ್ವರ್ಗ ಚಿತ್ರದ ಮೂಲಕ ನಾಯಕ ನಟನಾದ ಸುರಪುರ ಯುವಕ ಮಹೇಶ ಬಂಗ್

ಸುರಪುರ: ಕನ್ನಡ ಚಿತ್ರ ರಂಗದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಅವಕಾಶ ಸಿಗುವುದಿಲ್ಲ ಎನ್ನುವ ಮಾತಿತ್ತು,ಅದನ್ನು ಸುಳ್ಳಾಗಿಸುವ ಇಟ್ಟಿನಲ್ಲಿ ಸುರಪುರ ನಗರದ ಯುವಕ ಕನ್ನಡ ಚಲನ ಚಿತ್ರರಂಗದಲ್ಲಿ ನಾಯಕ ನಟನಾಗಿ ಬೆಳೆಯುತ್ತಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.

ಸುರಪುರ ನಗರದ ಉದ್ಯಮಿ ಕಮಲಕಿಶೋರ ಬಂಗ್ ದಂಪತಿಗಳ ಸುಪುತ್ರನಾದ ಮಹೇಶ ಬಂಗ್ ಈಗ ಕನ್ನಡ ಚಿತ್ರ ರಂಗದಲ್ಲಿ ನಾಯಕ ನಟನಾಗಿ ಮಿಂಚುತ್ತಿದ್ದಾನೆ.ಕಳೆದ ಆರೇಳು ವರ್ಷಗಳ ಹಿಂದೆ ಬೆಂಗಳೂರಿಗೆ ಹೋದ ಮಹೇಶ ಬಂಗ್ ಕನ್ನಡ ಚಿತ್ರರಂಗ ಸೇರಬೇಕೆಂಬ ಆಸೆಯಿಂದ ನಟನಾ ತರಬೇತಿ ಶಾಲೆಯನ್ನು ಸೇರಿ ಕೆಲ ವರ್ಷಗಳ ಕಾಲ ತರಬೇತಿ ಪಡೆದು ನಂತರ ಮೊದಲಿಗೆ ಹಿಂದಿ ಧಾರವಾಹಿಯೊಂದರಲ್ಲಿ ನಟನೆಯ ಅವಕಾಶ ಪಡೆದು ನಂತರ ಕನ್ನಡ ಧಾರವಾಹಿಯೊಂದರಲ್ಲಿ ಅವಕಾಶ ಲಭಿಸಿದಾಗ ಮರಳಿ ಬೆಂಗಳೂರಿಗೆ ಬಂದು ನಟನೆಯಲ್ಲಿ ತೊಡಗಿದ್ದಾನೆ.

ಧಾರವಾಹಿಯ ನಟನೆಯ ನಂತರ ಬೆಳ್ಳಿ ತೆರೆಯತ್ತ ಮುಖ ಮಾಡಿದ ಮಹೇಶ ಬಂಗ್ ಚಲನ ಚಿತ್ರದಲ್ಲಿ ನಟನೆಗೆ ಮುಂದಾಗಿದ್ದಾನೆ.ಮಹೇಶ ಬಂಗ್ ನಾಯಕ ನಟನಾಗಿ ನಟಿಸಿರುವ ಅರಿಷಡ್ವರ್ಗ ಎನ್ನುವ ಕನ್ನಡ ಚಿತ್ರವೊಂದು ಈಗ ತೆರೆಗೆ ಸಿದ್ಧವಾಗಿದೆ.ಅನೇಕ ಜನ ಸ್ಯಾಂಡಲ್‌ವುಡ್‌ನ ಹಿರಿಯ ಕಲಾವಿದರನ್ನೊಳಗೊಂಡ ಅರಿಷಡ್ವರ್ಗ ಚಿತ್ರ ಸದ್ಯ ತೆರೆಯ ಮೇಲೆ ಬರಲಿದೆ.ಇದರಿಂದಾಗಿ ತನ್ನ ಅನೇಕ ವರ್ಷಗಳ ಕನಸಾಗಿದ್ದ ಕನ್ನಡ ಚಿತ್ರ ರಂಗ ಸೇರುವ ಕನಸು ನನಸಾಗಿದೆ ಎಂದು ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾನೆ ಮಹೇಶ ಬಂಗ್.
ಅರಿಷಡ್ವರ್ಗ ಚಿತ್ರ ಬಿಡುಗಡೆಯ ಹಂತದಲ್ಲಿರುವಾಗಲೆ ಅದರ ಟ್ರೈಲರ್ ವೀಕ್ಷಿಸಿದ ಅನೇಕ ಅಭಿಮಾನಿಗಳು ಕನ್ನಡ ಚಿತ್ರ ರಂಗಕ್ಕೆ ಮತ್ತೊಬ್ಬ ಪ್ರತಿಭಾನ್ವಿತ ನಟ ಉದಯಿಸಿದ್ದಾನೆ ಎಂದು ಖುಷಿಗೊಂಡಿದ್ದಾರೆ.

ಅರಿಷಡ್ವರ್ಗ ಚಿತ್ರದ ಬೃಹತ್ ಗಾತ್ರದ ಬ್ಯಾನರ್ ಒಂದನ್ನು ಸಿನೆಮಾ ಥಿಯೇಟರ್ ಮುಂದೆ ಹಾಕಿ ಅದಕ್ಕೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುವ ಮೂಲಕ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.ಕನ್ನಡ ಚಿತ್ರ ರಂಗದಲ್ಲಿ ಸುರಪುರ ನಗರದಿಂದ ಹೋಗಿ ನಟನೆಯ ಮೂಲಕ ನಾಯಕನಾಗಿ ಬೆಳೆಯಲು ನಿಂತಿರುವ ಮಹೇಶ ಬಂಗ್ ಅವರಿಗೆ ಅವನ ಓರಿಗೆಯ ಅನೇಕ ಗೆಳೆಯರು ಮತ್ತು ಹಿತೈಷಿಗಳು ಶುಭ ಹಾರೈಸಿದ್ದಾರೆ.ಅಲ್ಲದೆ ತನ್ನ ನಟನಾ ಕನಸನ್ನು ನನಸಾಗಿಸಿಕೊಳ್ಳುವ ಜೊತೆಗೆ ಕನ್ನಡ ಚಿತ್ರ ರಂಗದಲ್ಲಿ ಬೆಳೆಯುತ್ತಿರುವ ಕಲ್ಯಾಣ ಕರ್ನಾಟಕದ ಪ್ರತಿಭೆ ಮಹೇಶ ಬಂಗ್‌ಗೆ ನಮ್ಮದು ಒಂದು ಶುಭ ಹಾರೈಕೆ ಇರಲಿ.

ನನ್ನ ಅನೇಕ ವರ್ಷಗಳ ಕನಸು ಇಂದು ಅರಿಷಡ್ವರ್ಗ ಚಿತ್ರದ ಮೂಲಕ ನೆರವೇರುತ್ತಿದೆ,ಎಲ್ಲರು ಚಿತ್ರವನ್ನು ನೋಡಿ ನನನಗೆ ಆಶೀರ್ವದಿಸಬೇಕೆಂದು ಎಲ್ಲರಲ್ಲಿ ವಿನಂತಿಸುವೆ.-ಮಹೇಶ ಬಂಗ್ ನಾಯಕ ನಟ
emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago