ಬಿಸಿ ಬಿಸಿ ಸುದ್ದಿ

ಅಕ್ಕಿ ಪ್ರಕರಣ: ಪ್ರಕರಣಗಳನ್ನು ರದ್ದುಪಡಿಸಲು ಪ್ರತಿಭಟನೆ

ಜೇವರ್ಗಿ : ಕಳೆದ ಅ.೨೫ರಂದು ರವಿಚಂದ್ರ ಗುತ್ತೇದಾರ, ಪತ್ರಕರ್ತ ಗಿರೀಶ ತುಂಬಗಿ ಹಾಗೂ ಕನ್ನಡಪರ ಹೋರಾಟಗಾರ ಗುಂಡು ಗುತ್ತೇದಾರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸುಳ್ಳು ಪ್ರಕರಣ ಎಂದು ಪರಿಗಣಿಸಿ, ಈ ಕೂಡಲೇ ಎಲ್ಲಾ ಪ್ರಕರಣಗಳನ್ನು ರದ್ದುಪಡಿಸಬೇಕೆಂದು ಕನ್ನಡ ಹಾಗೂ ದಲಿತ ಪರ ಒಕ್ಕೂಟದ ನೂರಾರು ಯುವಕರು ಬೃಹತ್ ಪ್ರತಿಭಟನೆ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ನೂರಾರು ಯುವಕರು, ಮಹಿಳೆಯರು ಹಾಗೂ ಹಲವು ಸಂಘಟನೆಗಳ ಮುಖಂಡರು ಬೃಹತ್ ಸಂಖ್ಯೆಯಲ್ಲಿ ಜಮಾವಣೆಗೊಂಡು ಮಿನಿ ವಿಧಾನಸೌದದ ವರೆಗೆ, ಪ್ರತಿಭಟನಾ ರ‍್ಯಾಲಿ ನಡೆಸಿ ಈ ಕೂಡಲೇ ಎಲ್ಲಾ ಪ್ರಕರಣಗಳನ್ನು ರದ್ದುಪಡಿಸಬೇಕು. ಹಾಗೂ ಅಕ್ರಮ ಪಡಿತರ ಅಕ್ಕಿ ದಂಧೆ ಕೋರರ ವಿರುದ್ಧ ಮತ್ತು ಸಹಾಯ ಸಹಕಾರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರತಿಭಟನಾಕಾರರು, ಅಕ್ಟೋಬರ್ ೨೫ರಂದು ದಾಖಲಾಗಿರುವ ಪ್ರಕರಣ ಸಂಪೂರ್ಣ ಸುಳ್ಳು ಇದ್ದು, ಎರಡು ವಾಹನಗಳಲ್ಲಿ ಸಾಗಾಟವಾಗುತ್ತಿದ್ದ ಅಕ್ರಮ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಳ್ಳದೆ ಕೇವಲ ಒಂದೇ ವಾಹನದಲ್ಲಿರುವ ಅಕ್ಕಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದು ಖಂಡನಿಯ. ಹಾಗೂ ಇನ್ನೊಂದು ವಾಹನ ಎಲ್ಲಿಗೆ ಹೋಯಿತು ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಸರಕಾರದ ಆಸ್ತಿಯನ್ನು ರಕ್ಷಿಸುವ ಜವಬ್ದಾರಿ ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ, ಹಾಗಿದ್ದಾಗ ವಕೀಲರಾದ ರವಿಚಂದ್ರ ಗುತ್ತೇದಾರ, ಪತ್ರಕರ್ತ ಗಿರೀಶ ತುಂಬಗಿ, ಕನ್ನಡಪರ ಹೋರಾಟಗಾರ ಗುಂಡು ಗುತ್ತೇದಾರ ರವರು, ಪಡಿತರ ಅಕ್ಕಿಯನ್ನು ರಕ್ಷಿಸುವ ಕಾರ್ಯಮಾಡಿದ್ದೇ ದೊಡ್ಡ ತಪ್ಪಾದಂತೆ ಕಾಣುತ್ತಿದೆ ಎಂದು ಅಧಿಕಾರಿಗಳ ನೀತಿ ವಿರುದ್ಧ ಕಿಡಿ ಕಾರಿದರು.

ಕೆಎ-೩೨, ಸಿ-೭೨೬೯ ಹಾಗೂ ಕೆಎ-೩೨, ಡಿ-೦೭೯೦ರ ಲಾರಿಗಳ ವಾಹನ ಚಾಲಕರುಗಳಾದ ಖಾಸಿಂಸಾಬ ಹಾಗೂ ವಿಲಾಸಕುಮಾರ ಆಳಂದ ರವರು, ನಾವೆ ಚಾಲಕರೆಂದು ಹೇಳಿಕೊಂಡಿದ್ದು ಎಲ್ಲಾ ದಾಖಲೆಗಳಿವೆ. ಆದರೆ ಏಕಾಏಕಿಯಾಗಿ ಆಗಮಿಸಿ ಪೋಲಿಸ್ ಠಾಣೆಗೆ ದೂರನ್ನು ನೀಡಿದ ಸಂದೀಪ ರಾಠೋಡ ಯಾರು? ಇವನ ಚರಿತ್ರೆ ಬಹಳಷ್ಟು ಕುತುಹಲಕಾರಿಯಾಗಿದೆ. ಹಾಗೂ ಇತನ ವಿರುದ್ಧ ಕಲಬುರಗಿಯ ಹಲವು ಠಾಣೆಗಳಲ್ಲಿ ಪ್ರಕರಣಗಳು ಕೂಡ ದಾಖಲಾಗಿವೆ. ಆದ್ದರಿಂದ ಇತನ ವಿರುದ್ಧ ಈ ಕೂಡಲೇ ತನಿಖೆಯಾಗಬೇಕೆಂದು ಒತ್ತಾಯಿಸಿದರು.

ಅದೇ ರೀತಿಯಾಗಿ ನಿಂಗಪ್ಪ ದೊರೆ ಅವರಾದ ಈತನು ಈಗಾಗಲೇ ನಾನು ಹಲವು ಅಧಿಕಾರಿಗಳ ಹಾಗೂ ಅಕ್ರಮ ಅಕ್ಕಿ ದಂಧೆ ಕೋರರ ಒತ್ತಾಯ, ಬೇದರಿಕೆ, ಜೀವ ಭಯದ ಕಾರಣದಿಂದ ನಾನು ಇವರುಗಳ ವಿರುದ್ಧ ಜಾತಿ ನಿಂಧನೆ ಪ್ರಕರಣ ದಾಖಲು ಮಾಡಿದ್ದೇನೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಗೃಹ ಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ, ಈ ಕೂಡಲೇ ಇವರುಗಳ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಮನವಿ ಪತ್ರ ನೀಡಿದ್ದು ನಿಜವಿರುತ್ತದೆ ಎಂದು ನಿಂಗಪ್ಪ ದೊರೆ ನೀಡಿದ ಮನವಿ ಪತ್ರದ ಪ್ರತಿಯನ್ನು ಪ್ರದರ್ಶನ ಮಾಡಿದರು. ಪ್ರಕರಣಗಳು ಸಂಪೂರ್ಣ ಸುಳ್ಳಾಗಿದ್ದು, ಇದರ ಹಿಂದೆ ಕಾಣದ ಕೈಗಳ ಕೈಚಳಕ ಇರುವುದು ಅಕ್ಷರಸಹ ಸತ್ಯ.

ಅಕ್ರಮ ಅಕ್ಕಿ ಪಡಿತರ ಧಾನ್ಯಗಳನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡುವಲ್ಲಿ ಕಲ್ಯಾಣ ಕರ್ನಾಟಕದಲ್ಲಿಯೇ ಖ್ಯಾತಿ ಪಡೆದಿರುವ ಮಣಿಕಂಠ ರಾಠೋಡರವರ ವಿರುದ್ಧ ಹಾಗೂ ಮಲಿಕ್ ಚಾಮನಾಳ, ಚಾಂದಪಾಶಾ ಗಂವ್ಹಾರ, ವಿನೋದ ರಬಶೆಟ್ಟಿ, ಗೌಸ ಅಡತ್ ಜೇವರ್ಗಿ ಮತ್ತು ಸಂದೀಪ ಈಶ್ವರ ರಾಠೋಡ ಅವರ ವಿರುದ್ಧ ಕೂಡಲೇ ಪ್ರಕರಣವನ್ನು ದಾಖಲಿಸಿ ಬಂಧಿಸಬೇಕು ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ತಾಲೂಕ ಆಡಳಿತವೇ ಹೋಣೆಗಾರರಾಗುವಿರೆಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನಾ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕರಾದ ಮಂಜುನಾಥ ನಾಲವಾರಕರ್, ನಾರಾಯಣ ರೆಡ್ಡಿ, ಜಿ ಶಿವಶಂಕರ, ಶ್ರವಣಕುಮಾರ ನಾಯಕ, ಶರಣು ಗುತ್ತೇದಾರ, ಸಾಯಬಣ್ಣ ಕವಲ್ದಾರ, ದೇವಿಂದ್ರ ಚಿಗರಹಳ್ಳಿ, ಶಿವಕುಮಾರ ಕಟ್ಟಿಮನಿ, ಅನೀಲಕುಮಾರ ಕಲಬುರಗಿ, ಶಿವಕುಮಾರ ಬಿ ಗುತ್ತೇದಾರ, ರವಿಚಂದ್ರ ಗುತ್ತೇದಾರ, ಗುಂಡು ಗುತ್ತೇದಾರ, ಅನೀಲ ಗುತ್ತೇದಾರ, ಕೃಷ್ಣಾ ಬೇಲೂರ, ವಿಕ್ರಮ ಬೆಲೂರ, ಕೃಷ್ಣಾ ರಾಠೋಡ ಹರವಾಳ, ಶರಣು ಗುತ್ತೇದಾರ ಗೌನಳ್ಳಿ, ಭೀಮಾಶಂಕರ ಕುರಡೆಕರ್, ಅಂಬರೀಶ ಜೇವರ್ಗಿ, ಪ್ರಕಾಶ ರದ್ದೇವಾಡಗಿ, ಮಲ್ಲಿಕಾರ್ಜುನ ಸರಡಗಿ, ತಿಪ್ಪಣ್ಣ ಗೌನಳ್ಳಿ, ರಾಜು ಗೌನಳ್ಳಿ ಸೇರಿದಂತೆ ನೂರಾರು ಯುವಕರು ಹಾಗೂ ಮಹಿಳೆಯರು ಇದ್ದರು.

ಈಗಾಗಲೇ ನಿಂಗಪ್ಪ ದೊರೆ ಎನ್ನುವ ವ್ಯಕ್ತಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದು, ಅಕ್ರಮ ಅಕ್ಕಿ ದಂಧೆ ಕೋರರ ಹಾಗೂ ಅಧಿಕಾರಿಗಳ ಒತ್ತಾಯ ಹಾಗೂ ಜೀವ ಭಯದ ಕಾರಣದಿಂದ ಪ್ರಕರಣ ದಾಖಲಿಸಿದ್ದೇನೆ. ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಗೃಹ ಮಂತ್ರಿಗಳಿಗೆ ಪ್ರಕರಣ ರದ್ದುಪಡಿಸಬೇಕೆಂದು ಮನವಿ ಮಾಡಿದ್ದು ನೋಡಿದರೆ, ಈ ಪ್ರಕರಣ ಸಂಪೂರ್ಣ ಸುಳ್ಳೆಂದು ಗೊತ್ತಾಗುವುದು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

2 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

2 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

4 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

5 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

5 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

5 hours ago