ಬಿಸಿ ಬಿಸಿ ಸುದ್ದಿ

ಸಮಾಜ ಸುಧಾರಿಸಿದ ದಾರ್ಶನಿಕ: ಪೂಜಾರಿ

ಕಲಬುರಗಿ : ದಾಸ ಸಾಹಿತ್ಯದಲ್ಲಿ ಕನಕದಾಸರದ್ದು ಮಹತ್ವದ ಅಧ್ಯಾಯ. ಅವರು ಅಂದಿನ ಸಮಾಜದಲ್ಲಿಯೇ ಜಾತಿ, ಮತ, ಧರ್ಮಗಳ ಸಂಕೋಲೆಯನ್ನು ಮೀರಿ ಸಮಾಜ ಸುಧಾರಣೆಗೆ ಮುಂದಾಗುತ್ತಾರೆ ಎಂದು ನ್ಯಾಯವಾದಿ ನಾಗೇಂದ್ರಪ್ಪ ಪೂಜಾರಿ ಹೇಳಿದರು.

ನಗರದ ಎಮ್.ಎನ್.ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಾಸ ಸಾಹಿತ್ಯ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತದೆ. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಇಂದಿಗೂ ಪ್ರಸ್ತುತವಾಗಿದ್ದಾರೆ ಎಂದರು.

ಹಿಂದುಳಿದ ವರ್ಗದಲ್ಲಿ ಜನಿಸಿದ ಕನಕದಾಸರು ಇಡೀ ಮಾನವ ಕುಲದ ಸುಧಾರಣೆಗೆ ಪ್ರಯತ್ನಿಸಿದ್ದು ನೆನೆದರೆ ರೋಮಾಂಚನವಾಗುತ್ತದೆ. ಕುಲ ಕುಲವೆಂದು ಹೊಡೆದಾಡದಿರಿ ಎಂಬ ಅವರ ಕೀರ್ತನೆ ಇಡೀ ಮಾನವ ಸಮಾಜವನ್ನೇ ತಿದ್ದಿ, ಸರಿಯಾದ ಹಾದಿಯಲ್ಲಿ ಮುನ್ನಡೆಸಲಿದೆ ಎಂದರು.

ಸಂತ ಕವಿ ಕನಕದಾಸರು ಜಾತಿ, ಮತ, ಧರ್ಮಗಳನ್ನು ಮೀರಿ ಬೆಳೆದ ಶ್ರೇಷ್ಠ ಚೇತನ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿದರೆ ಉತ್ತಮ ಸಮಾಜ ನಿರ್ಮಿಸಬಹುದು. ಅವರ ಕೀರ್ತನೆಗಳು ಮಾನವ ಜೀವನ ಹೇಗೆ ಸರಿಯಾದ ದಾರಿಯಲ್ಲಿ ನಡೆಯಬೇಕು ಎನ್ನುವುದನ್ನು ತಿಳಿಸುತ್ತವೆ. ಅವರ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಮ್.ಎನ್. ದೇಸಾಯಿ ಕಾಲೇಜಿನ ಕಾರ್ಯದರ್ಶಿಗಳಾದ ಜಗನ್ನಾಥ್ ನಾಗೂರ್ ಮಾತನಾಡಿ, ಕನಕದಾಸರು ತಮ್ಮ ಅನುಭವ, ನೋವು, ದುಃಖ, ಸುಖಗಳನ್ನೇ ಕೀರ್ತನೆಗಳ ಮೂಲಕ ಜನ ಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋದವರು. ಆ ಮೂಲಕ ಸಾಮಾನ್ಯ ಜನರ ಬದುಕನ್ನು ತಿದ್ದಿ, ತೀಡಿ ರೂಪಿಸಿದರು ಎಂದು ತಿಳಿಸಿದರು.

ಮಠ, ಮಾನ್ಯಗಳನ್ನು ಕಟ್ಟದೆ ಜನಸಾಮಾನ್ಯರ ಮಧ್ಯೆಯೇ ಇದ್ದುಕೊಂಡು ತಮ್ಮ ಸಾಹಿತ್ಯದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಮೇಲು, ಕೀಳು, ಉಚ್ಛ, ನೀಚ ಎಂಬ ಭೇದ ಭಾವವನ್ನು ತೊಡೆದು ಹಾಕಲು ಶ್ರಮಿಸಿದ್ದರು. ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ದಾಸರು ರಚಿಸಿದ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ. ಮೂಢನಂಬಿಕೆ, ಅಧಿಕಾರಶಾಹಿಯನ್ನು ಪಕ್ಕಕ್ಕೆ ಸರಿಸಿ ಆ ಜಾಗಕ್ಕೆ ಭಗವಂತನನ್ನು ತಂದು ಕೂರಿಸಿದವರು ಕನಕದಾಸರು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಧರ್ಮರಾಜ್ ಬಿ. ಹೇರೂರು ಅವರು, ಕೀರ್ತನೆಗಳ ಮೂಲಕ ಇಡೀ ಸಮಾಜವನ್ನು ತಿದ್ದಿ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕನಕದಾಸರು ಶ್ರಮಿಸಿದವರು. ಬಲಿಷ್ಠ ಸಮುದಾಯದವರು ಸಣ್ಣ ಸಮುದಾಯದ ಮೇಲೆ ದೌರ್ಜನ್ಯ ಮಾಡುತ್ತಿದ್ದಾಗ ಎಲ್ಲಾ ಸಮುದಾಯದ ವರು ಒಂದೇ ಎನ್ನಲು ಕುಲ ಕುಲವೆಂದು ಏಕೆ ಹೊಡೆದಾಡುತ್ತೀರಿ ಎಂಬ ಕೀರ್ತನೆ ರಚಿಸುವ ಮೂಲಕ ಸಮಾಜವನ್ನು ಒಂದುಗೂಡಿಸಿದರು ಎಂದರು.

ಇದೇ ಸಂದರ್ಭದಲ್ಲಿ ಎಮ್.ಎನ್.ದೇಸಾಯಿ ಕಾಲೇಜಿನ ಅಧ್ಯಕ್ಷರಾದ ಸಂದೀಪ್ ದೇಸಾಯಿ, ಲಕ್ಷ್ಮಣ್ ಜಮಾದಾರ್, ಜೆಸ್ಕಾಂ ಅಧಿಕಾರಿ ರವಿ  ಸಂಗ್ ಶೆಟ್ಟಿ, ಉಪನ್ಯಾಸಕರಾದ ನಾಗರಾಜ್ ಪಟ್ಟಣಕರ್, ಪ್ರಕಾಶ್ ರಾಠೋಡ್, ಮಂಜುನಾಥ್ ಬನ್ನೂರ್, ರಾಧಿಕಾ ಗುತ್ತೇದಾರ್, ಅನ್ನಪೂರ್ಣ ಪಸಾರ, ಸಂತೋಷ್ ಲಸ್ಕರ್ ಸೇರಿದಂತೆ ಇತರರು ಇದ್ದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

8 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

8 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

8 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

8 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

9 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

10 hours ago