ಬಿಸಿ ಬಿಸಿ ಸುದ್ದಿ

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿ 500ಕೋಟಿ ಹಣ ಬಿಡುಗಡೆಗೆ ಸೋಫಿಸಾಬ್ ಆಗ್ರಹ

ಯಾದಗಿರಿ : ಪಿಂಜಾರ್ ನಿಗಮ ಸ್ಥಾಪಿಸಿ 500 ಕೋಟಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರನ್ನು ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘ ಹುಣಸಗಿ ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿ ಸೋಪಿಸಾಬ ಡಿ ಸುರಪುರ ಆಗ್ರಹ ಪಡಿಸಿದ್ದಾರೆ.

ಸುಮಾರು ವರ್ಷಗಳಿಂದ ಪಿಂಜಾರ ಸಮುದಾಯದಿಂದ ಹೋರಾಟ ಮಾಡುತ್ತಾ ಬಂದರು ನಮ್ಮ ಸಮುದಾಯಕ್ಕೆ ನ್ಯಾಯ ಸಿಗುತ್ತಿಲ್ಲ.

ರಾಜ್ಯದಲ್ಲಿ ಅನೇಕ ಸಣ್ಣ ಸಣ್ಣ ಸಮುದಾಯದ ಸಮಾಜಗಳನ್ನು ಗುರುತಿಸಿ ಅಭಿವೃದ್ಧಿ ನಿಗಮ ರಚಿಸಿ ಅನುದಾನ ನೀಡಿ ಸಮಾಜವನ್ನು ಮೇಲೆತ್ತುವ ಕೆಲಸ ಹಿಂದಿನಿಂದಲೂ ಸರ್ಕಾರಗಳು ಮಾಡುತ್ತಾ ಬಂದಿವೆ.

ಇದೇ ರೀತಿ ಪಿಂಜಾರ ಅಭಿವೃದ್ದಿ ನಿಗಮಕ್ಕೂ ಆದೇಶ ನೀಡಬೇಕು ಇಲ್ಲಾಂದ್ರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಆಗ್ರಹಿಸಿದ್ದಾರೆ.

ಈ ಮೊದಲೂ ಸರ್ಕಾರಕ್ಕೆ ಪಿಂಜಾರ ಅಭಿವೃದ್ದಿ ನಿಗಮ ಜಾರಿಗೆ ತರಬೇಕೆಂದು ಹಲವಾರು ಬಾರಿ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ಸೇರಿದಂತೆ ಸಮಾಜದ ಹಲವು ಸಂಘಟನೆ ಹಾಗೂ ನಮ್ಮ ಪಿಂಜಾರ ವಿವಿದೊದ್ಧೇಶ ಸೇವಾ ಸಂಘವು ಮನವಿ ನೀಡಿದರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ.

ಕರ್ನಾಟಕದಲ್ಲಿ ಒಟ್ಟು ಮುಸ್ಲಿಂ ಜನಸಂಖ್ಯೆಯ ಅರ್ಧದಷ್ಟು ಪಿಂಜಾರ ನದಾಫ, ಮನ್ಸೂರಿ, ದುದೇಕುಲಾ ಸಮುದಾಯವಿದ್ದು ಈವರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಇತರೆ ಸೌಲಬ್ಯಗಳಿಂದ ವಂಚಿತರಾಗಿದ್ದಾರೆ.

ರಾಜ್ಯದ ಸುಮಾರು 70 ಲಕ್ಷ ಮುಸ್ಲಿಂ ಜನಸಂಖ್ಯೆಯ ಪೈಕಿ ಕರ್ನಾಟಕ ದಲ್ಲೀ ಜನಸಂಖ್ಯೆ ಪಿಂಜಾರ್, ನದಾಫ, ಜನಸಂಖ್ಯೆಯು ಸರಿ ಸುಮಾರು 35 ರಿಂದ 38 ಲಕ್ಷದಷ್ಟು ಇರುತ್ತೇವೆ.

ನಮ್ಮ ಅಲೆಮಾರಿ ಪಿಂಜಾರ್, ನದಾಫ್, ಜನರು ರಾಜ್ಯದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದೆ ಈ ಸಮುದಾಯದ ವಾಸ್ತವ ಸ್ಥಿತಿಯನ್ನು ಹಿಂದುಳಿದ ವರ್ಗಗಳ ಆಯೋಗವು 2010 ರಲ್ಲಿ ಡಾ.ಸಿ.ಎಸ್. ದ್ವಾರಕಾನಾಥ್ ರವರು ಸಲ್ಲಿಸಿದ ವರದಿಯಲ್ಲಿ ತೆರೆದಿಟ್ಟಿದೇ

ಪಿಂಜಾರ/ನದಾಫ್ ಸಮುದಾಯದ ಉಳಿವು ಮತ್ತು ಬೆಳವಣಿಗೆಗೆ ಪಿಂಜಾರ/ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆ ಅನಿವಾರ್ಯ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ ಎಂದು ಸೋಪಿಸಾಬ್ ಹೇಳಿದ್ದಾರೆ.

2009-10 ರಲ್ಲಿ ಡಾ. ಸಿ.ಎಸ್. ದ್ವಾರಕನಾಥ ಆಯೋಗವು ಸರಕಾರಕ್ಕೆ ವರದಿಯನ್ನು ಸಲ್ಲಿಸಿ ವರದಿಯಲ್ಲಿ ಅಲೆಮಾರಿ ಪಿಂಜಾರ್, ನದಾಫ್, ಜನರ ಉದ್ಯೋಗವು ನಸೀಶಿ ಹೋಗಿದ್ದು ಈ ಸಮುದಾಯವು ತುಂಬಾ ಸಂಕಷ್ಟದಲ್ಲಿ ಇದೆ ಎಂದು ಅಲೆಮಾರಿ ಸಮುದಾಯಕ್ಕೆ ಪಿಂಜಾರ್ ಅಭಿವೃದ್ಧಿ ನಿಗಮ ಮಾಡಬೇಕು ಸಿ ಎಸ್ ದ್ವಾರಕಾನಾಥ್ ಅವರು ಸಲ್ಲಿಸಿದ್ದ ವರದಿ ಆಧರಿಸಿ ಈಗಾಗಲೇ ಎಲ್ಲಾ ಸಮಾಜದ ಅಭಿವೃದ್ದಿ ನಿಗಮಗಳನ್ನು ಸ್ಥಾಪಿಸಲಾಗಿದೆ.

ಆದರೆ ಅಲೆಮಾರಿ ಪಿಂಜಾರ್, ನದಾಫ್ ಸಮುದಾಯಕ್ಕೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಆದರೆ ಸುಮಾರು ವರ್ಷಗಳಿಂದ ಪಿಂಜಾರ ಸಮುದಾಯವನ್ನು ಯಾಕೆ ಕಡೆಗಣಿಸುತ್ತಿದ್ದೀರಿ ನಮ್ಮ ಸಮಾಜವನ್ನು ಯಾಕೆ ಹೀನವಾಗಿ ಕಾಣುತ್ತಿದ್ದಿರಿ ನಮ್ಮ ಸಮಾಜಕ್ಕೆ ಗೌರವ ಸಿಗುವುದು ಹಗಲುಗನಸು ಕಂಡಂತೆ ಆಗುತ್ತಿದೆ.

ಈಗಲಾದರು ನಮ್ಮ ಭಾವನೆಗೆ ಸ್ಪಂದಿಸಿ ಪಿಂಜಾರ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿ ಸರಕಾರದಿಂದ ನೀಡುವ ಅನುದಾನವನ್ನು ಅರ್ಥ ಪೂರ್ಣವಾಗಿ ಸಮುದಾಯದ ಪ್ರತಿ ಕುಟುಂಬಕ್ಕೆ ತಲುಪುವಂತೆ ಮಾಡಬೇಕು ಪ್ರತಿ ಕುಟುಂಬವೂ ಬಳಸಿಕೊಳ್ಳುವಂತೆ ಮಾಡಬೇಕೆಂದು ಪ್ರಧಾನಕಾರ್ಯದರ್ಶಿ
ಸೋಪಿಸಾಬ ಡಿ ಸುರಪುರ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ

emedialine

Recent Posts

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

8 mins ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

2 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

2 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

2 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

2 hours ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

2 hours ago