ಬಿಸಿ ಬಿಸಿ ಸುದ್ದಿ

ಅಂಬೇಡ್ಕರ್ ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಡೆದರೆ ಮಾತ್ರ ಅಂಬೇಡ್ಕರ್ ಆರ್ಥ ಆಗುತ್ತಾರೆ: ಕಿರಣ್ ಗಾಜನೂರ

ಕಲಬುರಗಿ: ಈ ದೇಶದಲ್ಲಿ ಡಾ. ಬಾಬಾಸಾಹೇಬ್ ಭೀಮರಾವ ಅಂಬೇಡ್ಕರ್ ಅವರನ್ನು ಅತಿ ಹೆಚ್ಚಾಗಿ ಪ್ರೀತಿಸುವವರು ತಳಸಮುದಾಯದ ಜನರು. ಬಾಲ್ಯದಿಂದಲೇ ಅವರು ಅವಗಾಹನೆಗೆ ಒಳಗಾದವರು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಿರಣ್ ಗಾಜನೂರ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ನಡೆದ ಡಾ. ಬಿ. ಆರ್. ಅಂಬೇಡ್ಕರ್ 64ನೇ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರು ತೀರಿದ ನಂತರ ಅವರ ಪ್ರತಿಮೆಗಳಿಂದ ನಮಗೆ ಅವರು ಅರ್ಥ ಆಗಲ ಅದರ ಬದಲಾಗಿ ಅವರ ಬರಹಗಳಿಂದ ಮತ್ತು ಅವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಡೆದರೆ ಮಾತ್ರ ನಮಗೆ ಡಾ. ಅಂಬೇಡ್ಕರ್ ಅರ್ಥ ಆಗುತ್ತಾರೆ. ಅಂಬೇಡ್ಕರ್ ಅವರೋಬ್ಬರು ಬಹುದೊಡ್ಡ ಸಂಶೋಧಕ ಅನ್ನೋದು ನಾವು ಇವತ್ತು ಮರೆತ್ತಿದ್ದೇವೆ. ಜಗತ್ತಿನಲ್ಲಿ ಅತ್ಯಂತ ದೊಡ್ಡ ಗ್ರಂಥಾಲಯ ಹೊಂದಿರುವ ಏಕೈಕ ವ್ಯಕ್ತಿ ಡಾ. ಅಂಬೇಡ್ಕರ್. ಇವತ್ತು ಅಂಬೇಡ್ಕರ್ ಸಿನಿಮಾ, ಧಾರಾವಾಹಿಗಳು ನೋಡುವುದರಲ್ಲಿಯೇ ಜನರು ಭಾವನಾತ್ಮಕವಾಗಿ ಕಳೆದು ಹೋಗುತ್ತಿದ್ದಾರೆ ಇದು ಬಹಳ ದುರಂತ ಅನಿಸುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಅಂಬೇಡ್ಕರ್ ಬಗ್ಗೆ ಚಳವಳಿ ಮಾಡುವುದಾದರೆ ಬೌದ್ಧಿಕವಾಗಿ ಅವರನ್ನು ತಿಳಿದು ಕೊಳ್ಳಬೇಕು ಎಂದು ಅವರು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಪ್ರೊ. ಚಂದ್ರಕಾಂತ ಯಾತನೂರ ಮಾತನಾಡಿ ಇಂದಿನ ಡಿಜಿಟಲ್ ಯುಗದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಮಾಜಿಕ ಮಾಧ್ಯಮಗಳಲ್ಲಿ ಬಹಳ ವಿಕೃತಗೊಳಿಸು ಕೆಲಸ ನಡೆಯುತ್ತಿದೆ. ಹೀಗಾಗಿ ಅಂತಹ ಸಂದೇಶವನ್ನು ಯಾರು ಓದಬಾರದು. ಡಾ. ಅಂಬೇಡ್ಕರ್ ಅವರು ಪುಸ್ತಕಗಳಿಗೆ ಕೊಟ್ಟಿರುವ ಮಹತ್ವ ಮತ್ತೆ ಯಾವುದಕ್ಕೂ ಕೊಟ್ಟಿಲ್ಲ. ಇಂದು ನಾವೆಲ್ಲರೂ ಬರಹ ಮತ್ತು ಭಾಷಣ ಓದಿದಾಗ ಡಾ. ಅಂಬೇಡ್ಕರ್ ಅರ್ಥ ಆಗುತ್ತಾರೆ ಎಂದು ಅವರು ಹೇಳಿದರು.

ಡಾ. ಬಿ. ಆರ್. ಅಂಬೇಡ್ಕರ್ ಪರಿನಿರ್ವಾಣ ಸಮಿತಿ ಸಂಚಾಲಕ ಡಾ. ಗಣಪತಿ ಸಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿ ಡಾ.ಬಿ ಆರ್ ಅಂಬೇಡ್ಕರವರು ವ್ಯಕ್ತಿ ಮಾತ್ರವಲ್ಲ. ವ್ಯಕ್ತಿತ್ವವಾಗಿ ಗುರುತಿಸಲ್ಪಡುತ್ತಾರೆ .ಶ್ರೇಣೀಕೃತವಾದ ಅಸಮಾನತೆಯನ್ನು ಪೋಷಿಸುವ, ತಾರತಮ್ಯಗಳನ್ನು ಮಾನ್ಯ ಮಾಡುವ ಜಡ ಭಾರತದ ಇತಿಹಾಸವನ್ನು ಬದಲಿಸಿ, ಸಮತಾ ಸಮಾಜ ನಿರ್ಮಾಣ ಮಾಡಲು ಪಣತೊಟ್ಟ ಮಹಾ ಮಾನವತಾವಾದಿಯಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ. ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದ ಅಂಬೇಡ್ಕರ್ ಅವರು ನಮ್ಮ ದೇಶದ ಅಪೂರ್ವ ನಾಯಕರಲ್ಲಿ ಒಬ್ಬರಾದರು ಎಂದು ಅವರು ಹೇಳಿದರು.

ಕುಲಸಚಿವ ಪ್ರೊ. ಸಿ. ಸೋಮಶೇಖರ್, ಮೌಲ್ಯಮಾಪನ ಕುಲಸಚಿವ ಪ್ರೊ, ಸಂಜೀವಕುಮಾರ ಕೆ. ಎಂ, ವಿತ್ತಾಧಿಕಾರಿ ಡಾ. ಬಿ. ವಿಜಯ, ಸಿಂಡಿಕೇಟ್ ಸದಸ್ಯ ಡಾ. ಸಂಪತ್ ಕುಮಾರ್ ಲೋಯಾ, ಡಾ. ಬಾಬಣ್ಣ ಹೂವಿನಬಾವಿ, ಇತರರು ಹಾಜರಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

11 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

22 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

22 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

1 day ago