ಬಿಸಿ ಬಿಸಿ ಸುದ್ದಿ

ಒಂದು ದಿನದ ಸಾಮಾಜಿಕತೆಯ ಸದ್ಚಿಂತನೆ ಕಾರ್ಯಕ್ರಮ ಡಿ. 10 ರಂದು

ಕಲಬುರಗಿ: ಸಮೃದ್ಧಿಯ ಸವಿನೆನಪಿನಲ್ಲಿ ಜಾತಿ, ವರ್ಗ, ವರ್ಣರಹಿತ ಸಮಾಜಕ್ಕೆ ಬಸವಾದಿ ಶರಣರು ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ಅವರ ವಚನ ಸಾಹಿತ್ಯದ ಅಮೃತವನ್ನು ಇಂದಿನ ಸಮಾಜಕ್ಕೆ ತಲುಪಿಸುವ ಸದುದ್ದೇಶದಿಂದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಹೆಚ್.ಕೆ.ಇ. ಸಂಸ್ಥೆಯ ಆಡಳಿತ ಮಂಡಳಿತ ಸದಸ್ಯರೂ ಆದ ಖ್ಯಾತ ವೈದ್ಯ ಡಾ.ಎಸ್.ಬಿ.ಕಾಮರೆಡ್ಡಿ ನೇತೃತ್ವದಲ್ಲಿ ಡಿ.೧೦ ರಂದು ನಗರದ ಅನ್ನಪೂರ್ಣ ಕ್ರಾಸ್‌ನಲ್ಲಿನ ಕಲಾ ಮಂಡಳದಲ್ಲಿ ಸಾಮಾಜಿಕತೆಯ ಸದ್ಚಿಂತನೆ ಮೂಡಿಸುವ ‘ವಚನದೋಲಗ’ಎಂಬ ಒಂದು ದಿನದ ವೈಚಾರಿಕ ಚಿಂತನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರಪಂಚಕ್ಕೆ ಪರಿಚಯಿಸಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶ್ರಮಿಸಿದ ಶರಣರ ನಿಲುವು ಎಂದೆಂದಿಗೂ ಶಾಶ್ವತ. ಮೂಢನಂಬಿಕೆ, ಕಂದಾಚಾರಗಳನ್ನು ಬಂಡವಾಳ ಮಾಡಿಕೊಂಡು ಮುಗ್ಧ ಜನರಲ್ಲಿ ಭಯ ಹುಟ್ಟಿಸುತ್ತಿರುವವರ ಎದೆಯಲ್ಲಿ ನಡುಕ ಹುಟ್ಟಿಸಿದ ವೈಚಾರಿಕ ಕ್ರಾಂತಿಪುರುಷರು ಬಸವಾದಿ ಶರಣರಾಗಿದ್ದಾರೆ. ಅವರ ತಾತ್ವಿಕ ನಿಲುವು ಇಂದಿನ ಸಮಾಜಕ್ಕೆ ಅತೀ ಮುಖ್ಯವಾಗಿದೆ ಎಂದು ವಿವರಿಸಿದರು.

ಅಂದು ಬೆಳಗ್ಗೆ ೧೦.೩೦ ಕ್ಕೆ ಜರುಗುವ ಸಮಾರಂಭ ಮಾಜಿ ಎಂಎಲ್ಸಿ ಅಮರನಾಥ ಪಾಟೀಲ ಉದ್ಘಾಟಿಸಲಿದ್ದು, ಬೀದರಿನ ಶರಣ ಸಾಹಿತಿ ಶ್ರೀದೇವಿ ಹೂಗಾರ ‘ವಚನದೊಳಗಿನ ಜೀವನಧರ್ಮ’ ವಿಷಯದ ಕುರಿತು ಮಾತನಾಡಲಿದ್ದಾರೆ. ಶರಣಪ್ಪ ದೇಸಾಯಿ, ಈರಣ್ಣಾ ಗೋಳೆದ್, ಬಸವರಾಜ ಮದ್ರಿಕಿ ಶಹಾಬಾದ, ಪ್ರಭುಲಿಂಗ ಮೂಲಗೆ ಅತಿಥಿಗಳಾಗಿ ಆಗಮಿಸಲಿದ್ದು, ಬಸವರಾಜ ಬಿರಬಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ.

ಅಪರಾಹ್ನ ೧೨.೩೦ ಕ್ಕೆ ನಡೆಯುವ ಶರಣರ ಸತ್ಯ ದರ್ಶನ ಗೋಷ್ಠಿಯಲ್ಲಿ ಅಫಜಲಪೂರಿನ ಅಮೃತರಾವ ಪಾಟೀಲ ಗುಡ್ಡೇವಾಡಿ ಅನುಭಾವ ನೀಡಲಿದ್ದು, ಶಾಂತಪ್ಪ ಸಂಗಾವಿ ಅಧ್ಯಕ್ಷತೆ ವಹಿಸಲಿದ್ದಾರೆ. ಸುರೇಶ ಪಾಟೀಲ ಜೋಗೂರ, ನೀಲಕಂಠ ಆವಂಟಿ ಜೇವರ್ಗಿ, ಕವಿತಾ ಪಾಟೀಲ, ಅರವಿಂದ ಪೊದ್ದಾರ ಉಪಸ್ಥಿತರಿರುವರು. ಹಿರಿಯ ಸಂಗೀತ ಕಲಾವಿದ ಬಾಬುರಾವ ಕೋಬಾಳ ಹಾಗೂ ಸಂಗಡಿಗರಿಂದ ವಚನ ಗಾಯನ ನಡೆಯಲಿದೆ.

ಮಧ್ಯಾಹ್ನ ೨.೩೦ ಕ್ಕೆ ನಡೆಯುವ ಸಮಾರೋಪ ಹಾಗೂ ಜಾತಿ ಮೀರಿದ ವಚನಜ್ಯೋತಿ ಕಾರ್ಯಕ್ರಮದಲ್ಲಿ ಶರಣ ಸಾಹಿತಿ ವೆಂಕಟೇಶ ಜನಾದ್ರಿ ಅನುಭಾವ ನೀಡಲಿದ್ದು, ಸಾಹಿತಿ ಜಗನ್ನಾಥ ತರನಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಎಸ್.ದೇಸಾಯಿ, ಕಲ್ಯಾಣಕುಮಾರ ಶೀಲವಂತ, ಗುರುಬಸಪ್ಪ ಸಜ್ಜನಶೆಟ್ಟಿ, ಹಣಮಂತ ಇಟಗಿ ಉಪಸ್ಥಿತರಿರುವರು.

‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಆಯ್ಕೆ: ವಿವಿಧ ಕ್ಷೇತ್ರದ ಸಾಧಕರಾದ ಕಾಡಸಿದ್ಧ ಜಮಶೆಟ್ಟಿ, ನಾಗಣ್ಣಾ ಹಾಗರಗುಂಡಗಿ ಯಡ್ರಾಮಿ, ಡಾ.ಛಾಯಾ ಭರತನೂರ, ದಾಸಿಮಯ್ಯಾ ವಡ್ಡಣಕೇರಿ, ಜೇವರ್ಗಿಯ ರಾಜೇಶ್ವರಿ ವಿ.ಪಾಟೀಲ ಸೇಡಂ, ಶರಣಬಸಪ್ಪ ಕುಡಕಿ, ಶರಣರಾಜ್ ಛಪ್ಪರಬಂದಿ, ಗುಂಡಪ್ಪ ಕರೇಮನೋರ್ ಅವರನ್ನು ಅಕಾಡೆಮಿ ವತಿಯಿಂದ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ವಿಶೇಷ ಸತ್ಕಾರ: ತಮ್ಮ ವೃತ್ತಿಯಲ್ಲಿದ್ದುಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೆಂಕಟೇಶ ಮುದಗಲ್, ಈರಣ್ಣಾ ಮದಗುಣಕಿ, ಸಂಗನಬಸಪ್ಪ ಪಾಟೀಲ ದಿಕ್ಸಂಗಿ, ಪ್ರಭು ಆವಂಟಿ, ಮಾಲಾ ಕಣ್ಣಿ, ಕಲ್ಯಾಣಪ್ಪ ಬಿರಾದಾರ, ಹಣಮಂತ ಮಂತಟ್ಟಿ, ಸವಿತಾ ಬಿರಾದಾರ, ಸಚೀನ್ ಮಣೂರೆ, ಶಾಂತರೆಡ್ಡಿ ಪೇಠಶಿರೂರ, ಸಂದೀಪ ಭರಣಿ, ಶ್ರೀಧರ ನಾಗನಹಳ್ಳಿ, ಚೇತನ್ ಬಾಬುರಾವ ಕೋಬಾಳ ಅವರನ್ನು ಸಹ ಇದೇ ವಿಶೇಷವಾಗಿ ಸತ್ಕರಿಸಲಾಗುವುದು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

10 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

21 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

21 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

23 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

23 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

23 hours ago