ಕಲಬುರಗಿ: ಜಿಲ್ಲೆಯ ವಿವಿಧತಾಲೂಕಿನಲ್ಲಿತೊಗರಿಯು ಒಣ ಬೇರು ನೆಟೆರೋಗದಿಂದರೋಗ ಹೆಚ್ಚಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಭೂಮಿಯಲ್ಲಿತೇವಾಂಶಕಡಿಮೆಯಾಗಿ, ಭೂಮಿ ಬಿರುಕಾಗುರಿತ್ತಿರುವುದರಿಂದ, ವಾತಾವರಣದ ಕಡಿಮೆ ಆರ್ದತೆ, ಬೀಸುತ್ತಿರುವ ಮೂಲಿ ಗಾಳಿ ಹಾಗೂ ಹವಾಮಾನ ವೈಪರೀತ್ಯದಿಂದ ಭೂಮಿಯ ಮೇಲ್ಭಾಗದತೇವಾಂಶಕಡಿಮೆಯಾಗಿ ಗಿಡಗಳ ಕಾಯಿ ಕಟ್ಟುವಿಕೆ, ಬಲಿಯುವಿಕೆ ಹಾಗೂ ಬೆಳವಣಿಗೆಗೆ ವ್ಯಾಪಕ ಹಾನಿಯಾಗುತ್ತಿದೆ.
ಈ ವರ್ಷ ೧೪೨೫ ಮಿ.ಮೀ ಮಳೆಯಾಗಿದ್ದರೂ ಪ್ರಸ್ತುತ ಸನ್ನಿವೇಶದಲ್ಲಿ ಮಳೆಯಾಶ್ರಿತ ಕಪ್ಪು ಭೂಮಿಯಲ್ಲಿರುವ ಮೇಲ್ಭಾಗದ ತೇವಾಂಶ ಕಡಿಮೆಯಾಗಿ ತೊಗರಿ ಒಂದೇ ವಾರದೊಳಗೆ ಸೊರಗಿ ಸಾಯುತ್ತಿದೆ. ಬೇರು, ಕಾಂಡ ಹಾಗೂ ಟೊಂಗೆಗಳಲ್ಲಿ ಕಂದು ಬಣ್ಣಕ್ಕೆತಿರುಗಿ ಬೆಳೆಯು ಕಟಾವು ಹಂತಕ್ಕೆ ಸಮೀಪಿಸಿದಂತೆ ಕಾಣುತ್ತದೆ.ಮೇಲ್ಭಾಗದ ಕಾಯಿ ಜೊಳ್ಳಾಗುವಿಕೆ ಕಂಡುಬಂದಿದೆ. ಹೂ ಹಂತದಲ್ಲಿಚೆನ್ನಾಗಿದ್ದ ಬೆಳೆಯು ಹೆಚ್ಚಿನ ಮಳೆಯ ನಂತರ ಭೂಮಿಯಲ್ಲಿ ಪೋಷಕಾಂಶ ಸತ್ವಕಡಿಮೆಯಾಗಿರೋಗಕ್ಕೆತುತ್ತಾಗುತ್ತಿವೆ.
ನವ್ಹೆಂಬರ್‌ಡಿಸೆಂಬರ್ ನಲ್ಲಿ ಬದಲಾದ ಹವಾಮಾನ ೫೦-೫೪% ಕುಸಿದ ಆರ್ದತೆಏರುತ್ತಿರುವ ಮಧ್ಯಾನ್ಹದತಾಪಮಾನರೋಗ ಉಲ್ಬಣಗೊಳ್ಳಲು ಸಹಾಯಕವಾಗಿದೆ. ರೈಜಾಕ್ಟೋನಿಯಾ ಮಣ್ಣಿನ ಶಿಲೀಂದ್ರ ಆಹಾರ ಸರಬರಾಜು ಮಾಡುವ ಸಸ್ಯ ಬೇರುಗಳಿಗೆ ಧಕ್ಕೆ ಮಾಡಿರುವುದರಿಂದಗಿಡದಲ್ಲಿ ಪೋಷಕಾಂಶ ಸರಬರಾಜುಏರುಪೇರಾಗುತ್ತಿದೆ. ಮುಂಗಾರಿನಆರಂಭದಲ್ಲಿ ಫೈಟಾಪ್ತರಾ ಶಿಲೀಂದ್ರಕ್ಕೆ ತುತ್ತಾದ ಹೊಲಗಳನ್ನು ೫೦ % ರೈತರುಎರಡರಿಂದ ಮೂರು ಸಲ ಎಡೆಹೊಡೆದುಅಂತರ ಬೇಸಾಯಕೈಗೊಂಡು, ಹೂ ಮತ್ತು ಮೊಗ್ಗು ಉದರದಂತೆ ಪಲ್ಸ ಮ್ಯಾಜಿಕ ಹಾಗೂ ಕಾರ್ಬನ್‌ಡೈಜಿಮ್ ಸಿಂಪರಣೆ ಮಾಡಿರುತ್ತಾರೆಎಂದು ಕೆ.ವಿ.ಕೆ ಯ ಮುಖ್ಯಸ್ಥರಾದ ಡಾ. ರಾಜು ತೆಗ್ಗಳ್ಳಿ ಹಾಗೂ ಸಸ್ಯರೋಗ ತಜ್ಞರಾದ ಝಹೀರ ಅಹಮ್ಮದ್ ತಿಳಿಸಿದ್ದಾರೆ.
ಆದರೆ, ಇತ್ತೀಚಿನ ದಿನಗಳಲ್ಲಿ ಒಣಬೇರು, ಒಣಕಾಂಡರೋಗದಿಂದ ಗಿಡಗಳು ಅಲ್ಲಲ್ಲಿ ವ್ಯಾಪಕವಾಗಿಒಣಗುತ್ತಿರುವುದುಕಂಡು ಬಂದಿದೆ.ಈ ಹಂತದಲ್ಲಿ ಭೂಮಿಯಿಂದ ಬರುವರೋಗಕ್ಕೆಜೈವಿಕ ಹಾಗೂ ರಾಸಾಯನಿಕ ಸಿಂಪರಣಾ ಚಿಕಿತ್ಸೆಗಳು ಕಷ್ಟಕರ.ರೈತರು ಸಮಗ್ರರೋಗ ಹತೋಟಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಬೇಕು.
ತಜ್ಞರ ಅನಿಸಿಕೆ: ಈ ವರ್ಷಉತ್ತಮ ಮಳೆಯಾದರೂ ಕೊನೆಯ ಹಂತದಲ್ಲಿತೊಗರಿ ಕಾಯಿ ರಚನೆ ವೇಳೆ ಒಣ ನೆಟೆಆರಂಭವಾಗಿರುವುದರಿಂದಕಾಯಿಯ ಒಳಗಡೆ ಬೀಜದಗಾತ್ರಏರು ಪೆರು ಆಗುವ ಸಾಧ್ಯತೆಇದೆ. ಮಳೆಯಾಶ್ರಿತ ತೊಗರಿಯಲ್ಲಿ ಈ ವ್ಯತ್ಯಯಕಂಡುಬಂದಿದೆ. -ಡಾ. ಎಸ್. ಕೆ.ಜಯಲಕ್ಷ್ಮಿ, ಸಸ್ಯರೋಗ ಮುಖ್ಯ ಪ್ರಾಧ್ಯಾಪಕರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು.
ರೈತರ ಅನಿಸಿಕೆ: ಭೂಮಿ ಬಿರುಕಾಗಿದತಕ್ಷಣನೇಗಿಡಒಣಗಿ ಬಾರಿಗೆಕಡ್ಡಿಯಾದಂತೆಒಣಗುತಿದೆ. ನೋಡು ನೋಡುತ್ತಿದಂತೆಯೇ ಇಳುವರಿ ಹಂತದಲ್ಲಿ ಈ ರೋಗಕಂಡುಬಂದಿದ್ದುಆಶ್ಚರ್ಯಕರವಾಗಿದೆ -ಚಂದ್ರಕಾಂತ ಅಷ್ಟಗಿ ಕಲಬುರಗಿ.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…