ಕಲಬುರಗಿ: ಎತ್ತುಗಳನ್ನು ಕದ್ದು ಮರಾಟಾಗಾಗಿ ಸಾಗಿಸುತ್ತಿದ್ದ ಮೂರು ಜಾನುವಾರು ಕಳ್ಳರನ್ನು ನರೋಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ, ಮಿನಿ ಗುಡ್ಸ್ ವಾಹನ ಸೇರಿ 41900 ಸಾವಿರ ನಗರದು ಜಪ್ತಿ ಮಾಡಿದ್ದಾರೆ.
ಠಾಣೆಯ ಪಿ.ಎಸ್.ಐ ಉದಂಡಪ್ಪ, ಪಿ.ಎಸ್.ಐ ದೇವಿಂದ್ರಪ್ಪಾ ನೇತೃತ್ವದ ಸಿಬ್ಬಂದಿಗಳಾದ ಶರಣಗೌಡ, ಶಾಂತಕುಮಾರ, ರಾಮಲಿಂಗ, ಬಸವರಾಜ, ಸತೀಶ, ಕಾರ್ಯಚರಣೆ ನಡೆಸಿ, ಗುಂಜಬಬಲಾದ ನಿವಾಸಿ ಶ್ರೀಶೈಲ್ ತಿಪ್ಪಣ್ಣಾ ಶಂಕರ ನರೋಣೆಕರ, ಸೇಡಂ ಆಶ್ರಯ ಕಾಲೋನಿಯ ಸಾಗರ ಚಂದು ರಾಠೋಡ್ ಹಾಗೂ ತರಿತಾಂಡಾದ ನಿವಾಸಿ ಮಾರುತಿ ಗೋಪಾಲ ರಾಠೊಡ್ ಎಂಬುವರನ್ನು ಬಂಧಿಸಿದ್ದಾರೆ.
ನಿನ್ನೆ ಗುಂಜ ಬಬಲಾದ ಕಡೆಯಿಂದ ಒಂದು ಮಿನಿ ಗೂಡ್ಸ್ ವಾಹನದಲ್ಲಿ ಎತ್ತುಗಳನ್ನು ಸಾಗಾಣಿಕೆ ಆವಾಹನ ಪೊಲೀಸ್ ಜೀಪನ್ನು ಕಂಡು ವೇಗವಾಗಿ ಕಚ್ಚಾ ರೋಡಿಗೆ ತಿರುಗಿಸಿಕೊಂಡು ಹೋಗುತ್ತಿರುವಾಗ ಸಂಶಯ ವ್ಯಕ್ತವಾಗಿ ಬೆನ್ನುಹತ್ತಿ ಹಿಡಿದಾಗ ವಾಹನದಲ್ಲಿ ಎರಡು ಎತ್ತು ಮತ್ತು 3 ಜನರನ್ನು ವಶಪಡಿಸಿಕೊಂಡು ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾಗ, ನರೋಣಾ ಗ್ರಾಮದ ಗುರುಲಿಂಗಪ್ಪಾ ಚನ್ನಬಸಪ್ಪಾ ಹೀರಾ ಇವರಿಗೆ ಸೇರಿದ ಎರಡು ಎತ್ತುಗಳಾಗಿದ್ದು, ಅಂದಾಜು 1.5 ಲಕ್ಷದ ಕಿಮ್ಮತ್ತು ಹೊಂದಿವೆ ಎನ್ನಲಾಗಿದೆ.
ತೀವ್ರ ವಿಚಾರಣೆಯಲ್ಲಿ ಎರಡೂವರೆ ತಿಂಗಳ ಹಿಂದೆ ನಿಂಬರ್ಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮಾಡ್ಯಾಳ ಗ್ರಾಮ ಸೀಮಾಂತರದಲ್ಲಿ ವಿಠಲ್ ಖಂಡೇರಾವ ಮದರಿ ಅವರ ಕಟ್ಟಿರುವ ಸ್ಥಳದಿಂದ ಎರಡು ಎತ್ತುಗಳು ಒಂದು ಆಕಳು ಮತ್ತು ಒಂದು ಹೋರಿಕರ ಕಳ್ಳತನಮಾಡಿ ಮಳಖೇಡ ಸಂತೆಯಲ್ಲಿ ಮಾರಾಟಮಾಡಿ ಬಂದ ಹಣವನ್ನು ಹಂಚಿಕೊಂಡು ಖರ್ಚು ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ.
ಸದರಿ 3 ಜನ ಆರೋಪಿಗಳಿಂದ ಎರಡು ಎತ್ತುಗಳು ಒಂದು ಮಿನಿಗೂಡ್ಸ ವಾಹನದ ಅಂ.ಕಿ ೨,೦೦,೦೦೦/- ಹಾಗೂ ನಗದು ೪೧೯೦೦/- ರೂಪಾಯಿ ಜಪ್ತಿಮಾಡಿದ್ದು ಹೀಗೆ ಒಟ್ಟು ಅಂದಾಜು ಕಿಮ್ಮತ್ತು 3,91,900/- ರೂ ಮೌಲ್ಯದ ಕಳ್ಳತನವಾದ ಮಾಲು ಮತ್ತು ಕಳ್ಳತನಕ್ಕೆ ಬಳಸಿದ ವಾಹನ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…