ಬಿಸಿ ಬಿಸಿ ಸುದ್ದಿ

ಅನನ್ಯ ಪದವಿ ವಿದ್ಯಾಲಯದಲ್ಲಿ ವ್ಯಕ್ತಿತ್ವ ವಿಕಾಸನ ತರಬೇತಿ

ಕಲಬುರಗಿ: ನಗರದ ಅನನ್ಯ ಪದವಿ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಉದ್ಘಾಟನಾ ಸಮಾರಂಭ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಕ್ಕೆ ಡಾ.ಸಂಗಮೇಶ ಹಿರೇಮಠ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ನೆರೆದ ವಿದ್ಯಾರ್ಥಿಗಳಿಗೆ ತಮ್ಮ  ಜೀವನದಲ್ಲಿ ಆದ ಕೆವು ಘಟನೆಗಳನ್ನು ಹೇಳುತ್ತಾ ಜೀವನದಲ್ಲಿ ನೊಂದ ಸ್ವಾಭಿಮಾನಿ ಮಹಿಳೆ ಮರಿಯಮ್ಮಳ ರೋಚಕ ಕಥೆಯನ್ನು ಹೇಳಿ ತಾವು ಭಾವುಕರಾಗುವುದಲ್ಲದೆ, ಇಂಥಹ ಬಡ ಪರಿಸ್ಥಿತಿಯಲ್ಲಿರುವ ಮಹಿಳೆಗೆ ಸಹಾಯ ಮಾಡಲಾಗಲಿಲ್ಲ ಎಂದು ವ್ಯಥೆ ಪಟ್ಟು ಎಲ್ಲರನ್ನು ಭಾವುಕರನ್ನಾಗಿ ಮಾಡಿದರು.  ಅದೇ ರೀತಿ ಇನ್ನೋರ್ವ ವ್ಯಕ್ತಿ ನಾನ್ ಸರ್ ಸೈಬಣ್ಣ ಎಂದು ಕರೆ ಮಾಡುವ ವ್ಯಕ್ತಿಯ ಬಗ್ಗೆ ಹೇಳಿ ಹಾಸ್ಯ ಚಟಾಕಿ ಮಾಡಿದರು. ಅಂದರೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರು ಸ್ವಾಭಿಮಾನ ಜೀವನ ಮಾಡಬೇಕು. ಹಾಗೆಯೇ ವಿದ್ಯೆಯನ್ನು ಕೇವಲ ಕಾಲಹರಣ ಮಾಡಲು ಉಪಯೋಗಿಸದೆ ಅದನ್ನು ಹಂಬಲವನ್ನಾಗಿ ಮಾಡಿಕೊಳ್ಳಬೇಕು.  ಹಾಗೆಯೇ ಪ್ರತಿಯೊಬ್ಬರು ನನ್ನ ಸಂಚಾರಿ ದೂರವಾಣಿಗೆ ಕರೆ ಮಾಡಿದರು ನಿಮ್ಮಗಳ ಸಹಾಯಕ್ಕೆ ಸದಾ ಸಿದ್ದ ಎಂದು ಹೇಳಿದರು.

ಯುವ ಭಾರತ್ ಶಿಕ್ಷಣ ಪ್ರತಿಷ್ಠಾನ ರಾಜ್ಯಾಧ್ಯಕ್ಷ ಹಾಗೂ ಇಂಟಿರಿಯರ್ ಡಿಜೈನರ್ ಮಂಗಳೂರು ವಿಶ್ವವಿದ್ಯಾಲಯ ಬಿಒಇ ಅಧ್ಯಕ್ಷ ಅಭಿಷೇಕ ಸುವರ್ಣ ಅವರು ಮಾತನಾಡಿ ಶಿಕ್ಷಣವನ್ನು ಕೇವಲ ಒಂದೇ ರೀತಿಯಾಗಿ ಓದದೇ ಅದರಲ್ಲಿ ಅನೇಕ ದಾರಿಗಳುಂಟು ಅದನ್ನು ಸದುಪಯೋಗ ಮಾಡಿಕೊಳ್ಳಿ ಎಂದರಲ್ಲದೆ,  ಅದಕ್ಕೆಂದೆ  ಇರುವ ಬಿ.ಎಸ್‌ಸಿ, ಎಂ.ಎಸ್‌ಸಿ, ಒಳಾಂಗಣ ವಿನ್ಯಾಸ ಮತ್ತು ಅಲಂಕಾರ, ಅನಿಮೇಷನ್, ಫ್ಯಾಷನ್ ಡಿಸೈನ್, ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ರಿಟೇಲ್ ಮಾರ್ಕೆಟಿಂಗ್ ಹವಾರು ಕೋರ್ಸುಗಳಿದ್ದು ಅವುಗಳ ಸದುಪಯೋಗವನ್ನು ಪಡೆಯಿರಿ ಎಂದರು.  ವಂಶಪರಂಪರೆಯಾಗಿ ಬಂದ ದಾರಿಯನ್ನೇ ಹಿಡಿಯದೇ ಜೀವನಕ್ಕೆ ಬೇಕಾಗುವ ದಾರಿಗಳನ್ನು ಸಂಚಾರಿ ದೂರವಾಣಿಯಲ್ಲಿ ಹುಡುಕಿ ಸದುಪಯೋಗ ಮಾಡಿಕೊಳ್ಳಿ ಎಂದರು.

ಯುವ ಭಾರತಾ ವಿದ್ಯಾ ಫೌಂಡೇಶನ್ ಮೂಲಕ  ಬಾಲ್ಯ ವಿವಾಹ, ಪದ್ಧತಿ ಬಡ ಮಕ್ಕಳಿಗೆ ವಿದ್ಯೆಕೊಡಿಸುವ ಬಗ್ಗೆ ಸಂಬಂದ ಪಟ್ಟ ಕಾರ್ಯಕ್ರಮಗಳನ್ನು ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ ಬಗ್ಗೆ ತಿಳಿಹೇಳುತ್ತಾ ಬಂದಿರುವುದನ್ನು ಸಭೆಯೊಂದಿಗೆ ಹಂಚಿಕೊಂಡರು. ಇಂದಿನ ಮಕ್ಕಳಿಗೆ ಮುದ್ರಾಯೋಜನೆ, ಶಿಕ್ಷಣ ಸಾಲಗೆ ಬೇಕಾದ ವಿದ್ಯಾಲಕ್ಷ್ಮಿ ಸಾಲಕ್ಕ ಅರ್ಜಿಯನ್ನು ಹಾಕಿದಾಗ  ಯಾವುದೇ ಬ್ಯಾಂಕಿನ ಮ್ಯಾನೆಜರ್ ಯಾವುದೇ ತೊಂದರೆ ಹಾಗೂ ಆಸ್ತಿಯನ್ನು ಪಡೆಯದೇ ನೇರವಾಗಿ ಕೊಡುತ್ತಾರೆ, ಇಂತಹ ಅವಕಾಶದ ಸದುದ್ದೇಶ ಪಡೆದುಕೊಳ್ಳಿ ಎಂದು ಹೇಳಿದರು. ಹಾಗೆಯೇ ಅನನ್ಯ ಪದವಿ ವಿದ್ಯಾಲಯದ ಪ್ರಾಂಶುಪಾಲರ ಬಗ್ಗೆ ನಲುಮೆಯ ಮಾತುಗಳನ್ನು ಹೇಳಿ ಎಲ್ಲರಿಗೂ ಮುಂದಿನ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಕೆಎಸ್‌ಒಯುದಲ್ಲಿ ಪ್ರವೇಶ ಪಡೆಯಿರಿ ಎಂದು ಹೆಳಿದರು.

ವಿದ್ಯಾಲಯದಲ್ಲಿ ಅಧಕ್ಷ್ಷೆ ಸುಷ್ಮಾವತಿ ಎಸ್. ಪೂಜಾರಿ ಹೊನ್ನಗೆದ್ದೆ ಅವರು ಮಾತನಾಡಿ ಇಂದಿನ ಮಕ್ಕಳಲ್ಲಿ ಸಭ್ಯತೆ, ಸಂಸ್ಕಾರ ಮಾಯವಾಗುತ್ತಿದೆ. ಕೇವಲ ಸಂಚಾರಿ ದೂರವಾಣಿಯನ್ನು ಕೇವಲ ದುರುದ್ದೇಶಕ್ಕೆ ಉಪಯೋಗಿಸದೇ ಸದುದ್ದೇಶಕ್ಕೆ ಬಳಸಿ. ಎಂದು ಎಲ್ಲರಲ್ಲೂ ಕೇಳಿಕೊಂಡರು.

ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶರಣು ಬಿ.ಹೂನ್ನಗೆದ್ದೆ, ಶರ ವಿಜಯಲಕ್ಷ್ಮಿ ಸೋಮಶೇಖರ ಹಂಚಿನಾಳ, ಶಾಂತಲಾ.ಎಮ್, ಸುಜಾತಾ, ಪ್ರಾಧ್ಯಾಪಕ ಸುಧಾ,  ಶಾಂತಲಾ ಎಮ್. ನಂದರಗಿ, ಶೈಲಜಾ, .ಭವಾನಿ, ವಿದ್ಯಾಲಯದ ಸಹದ್ಯೋಗಿಗಳಾದ  ಅಭಿಲಾಷ, ಸುಜಾತಾ ಹಾಗೂ ವಿದ್ಯಾರ್ಥಿ / ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago