ಮಾನವ ಹಕ್ಕುಗಳ ದಿನಾಚರಣೆ ನಿಮಿತ್ತ ಕರೋನಾ ಸೇನಾನಿಗಳಿಗೆ ಸನ್ಮಾನ

ಕಲಬುರಗಿ: ನಗರದ ಹಿಂದಿ ಪ್ರಚಾರ ಸಭೆಯ ಸಭಾಭವನದಲ್ಲಿ ದಕ್ಷಿಣ ಭಾರತ ಮಾನವ ಹ್ಕುಗಳ ಶಿಕ್ಷಣ ಮತ್ತು ಸಂರಕ್ಷಣಾ ಘಟಕ (ಸಿಕ್ರಂ) ಕಲಬುರಗಿ ಹಾಗೂ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ನಿಮಿತ್ತ ಮಹಾಮಾರಿ ಕರೋನಾದಲ್ಲಿ ಸೇವೆ ಸಲ್ಲಿಸಿದ ವಿವಿಧ ಇಲಾಖೆಗಳ ಕರೋನಾ ಸೇನಾನಿಗಳಿಗೆ ಸನ್ಮಾನ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಟ್ರಾಫಿಕ್ ಪೋಲೀಸ ಠಾಣೆಯ ಸಬ್ ಇನ್ಸಪೆಕ್ಟರ ಭಾರತಿಬಾಯಿ ಎಂ ಧನ್ನಿ ಉದ್ಘಾಟಿಸಿ ಮಾತನಾಡುತ್ತಾ ಭಾಷಣದಲ್ಲಿ ಮಾತನಾಡುತ್ತ ತಮ್ಮ ಇಲಾಖೆಯ ನೀತಿನಿಯಮಗಳು ಕುರಿತು, ಪೋಲೀಸ ಇಲಾಖೆಯ ಕಾನೂನು ಪಾಲನೆಯ ಬಗ್ಗೆ ತಿಳಿಸಿದರು, ನಗರದಲ್ಲಿ ಹೆಚ್ಚಿನ ಪಾಲಕರು ತಮ್ಮ ಮಕ್ಕಳಿಗೆ ವಾಹನವನ್ನು ಓಡಿಸಲು ಕೊಡುತ್ತಾರೆ ಮಕ್ಕಳು ಮೂರು ಮೂರು ಜನ ಕುಳಿತು ಪ್ರಯಾಣಿಸುತ್ತಾರೆ, ಹಾಗಯೇ ಬಹಳಷ್ಠು ಅಜಾಗುರುಕತೆಯಿಂದ ವಾಹನ ಓಡಿಸುವದರಿಂದ ರಸ್ತೆ ಅಪಗಾತಗಳು ಸಂಬವಿಸುತ್ತವೆ ಅದನ್ನು ತಡೆಯಲು ಎಲ್ಲಾ ಸಾರ್ವಜನಿಕರು ಸಹಕರಿಸಬೇಕು ಮತ್ತು ಕಾನೂನಿಲ್ಲಿ ತಿಳಿಸಿದಂತ ನಿಯಮಗಳನ್ನು ತಪ್ಪದೇ ಪಾಲಿಸಿದರೆ ತಮ್ಮ ಜೀವಕ್ಕೂ ಅನುಕೂಲ ಮತ್ತು ಸರಕಾದ ಕೆಲಸಕ್ಕೂ ಅನುಕೂಲವಾಗುವದೆಂದು ತಿಳಿಸಿದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ ಸಹರಾ ಸಂಸ್ಥೆಯ ಮುಖ್ಯಸ್ಥರಾದ ಮಸ್ತಾನ ಬಿರೆದಾರ ಮಾತನಾಡುತ್ತಾ ಭಾರತದ ಸಂವಿಧಾನದಲ್ಲಿ ಮಾನವ ಹಕ್ಕುಗಳಿಗೆ ಸಂಬಂದಿಸಿದಂತೆ ವಿಶೇಷವಾದ ಕಲಂ ಇದೆ ನಾವು ನಮ್ಮ ಹಕ್ಕುಗಳನ್ನು ತಿಳಿದುಕೊಂಡು ಬದುಕಬೇಕು, ನಮಗೆ ಬೇಕಾದ ರೀತಿಯಲ್ಲಿ ಬದುಕಲು ಸ್ವಾತಂತ್ರ್ಯವನ್ನು ಕಲ್ಪಿಸಿಕೊಡಲಾಗಿದೆ, ಸ್ವಾತಂತ್ರ್ಯ ಇದೆ ಎಂದು ಮನಸೋ ಇಚ್ಚೆ ಮಾಡುವದಲ್ಲ ಕಾನೂನಿನ ಪರಿಮಿತಿಯಲ್ಲಿ ಬದುಕಬೇಕು, ಪ್ರತಿಯೊಬ್ಬರಿಗೂ ಅವರವರ ಇಚ್ಚೆಯಂತೆ ಬೇಕಾದ ಧರ್ಮ ಸ್ವೀಕಾರ, ಆಹಾರ ಸ್ವೀಕಾರ ಉದ್ಯೋಗ ಮಾಡುವದಕ್ಕೆ ಸಂಬಂದಿಸಿದಂತೆ ಹಕ್ಕುಗಳಲ್ಲಿ ತಿಳಿಸಿದೆ, ಹಾಗೆಯೇ ೧೨ನೇ ಶತಮಾನದಲ್ಲಿಯೇ ಸಾಧು, ಸಂತರು, ಶರಣರೂ ಮಾನವ ಹಕ್ಕುಗಳ ಕುರಿತು ತಿಳಿಸಿದ್ದಾರೆ ಅದನ್ನು ಅರಿತು ಬಧುಕಬೇಕೆಂದು ಹೇಳಿದ್ದರು.

ಸಿಕ್ರಂ ಸಂಸ್ಥೆ ಬೆಂಗಳೂರಿನ ಸಂಯೋಜಕರಾದ ಭೀಮಪ್ಪ ಅವರು ಮಾತನಾಡಿ ಸಿಕ್ರಂ ಸಂಸ್ಥೆಯು ಮಾನವ ಹಕ್ಕುಗಳ ಕುರಿತಾಗಿ ಕೆಲಸಮಾಡುತ್ತಿದ್ದು ಇದು ಬೆಂಗಳುರು ಮತ್ತು ದೆಹಲ್ಲಿಯಲ್ಲ್ಲಿ ಎರಡು ಕಚೇರಿಗಳನ್ನು ಹೊಂದಿದ್ದು ಮಾನವ ಹಕ್ಕುಗಳ ಕುರಿತಾಗಿ ಜನರಿಗೆ ತಿಳುವಳಿಕೆ, ಮಾನವ ಹಕ್ಕುಗಳ ಉಲ್ಲಂಘನೆಯಾದರೆ ಉಲ್ಲಂಘನೆ ಮಾಡಿದವರ ವಿರುದ್ದ ಕ್ರಮಕ್ಕಾಗಿ ಕೆಲಸಮಾಡುತ್ತಿದೆ. ಸಂಸ್ಥೆಯಲ್ಲಿ ಪರಿಣಿತಿ ಪಡೆದ ತಂಡವಿದೆ ಹಾಗೇಯೇ ಯಾರಾದರೂ ತಮ್ಮ ಹಕ್ಕುಗಳ ಉಲ್ಲಂಘನೆಯಾದಲ್ಲಿ ನ್ಯಾಯ ಪಡೆಯಲು ಇಚ್ಚಿಸಿದರೆ ಅಂತವರಿಗೆ ಕಾನೂನು ನೆರವನ್ನು ಕೂಡಾ ಕೊಡಲಾಗುವದು. ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಗನೆಯ ಪ್ರಕರಣಗಳು ಹೆಚ್ಚಾಗುತ್ತಿವೆ ಕಾನೂನಿಂದ ನಿಯಂತ್ರಿಸಲು ಸಾದ್ಯವಾಗುತ್ತಿಲ್ಲ ಕಾನೂನಿನಲ್ಲಿ ಹಲವು ಸಡಿಲಿಕೆಗಳಿರುವದರಿಂದ ತುರ್ತಾಗಿ ನ್ಯಾಯ ಪಡೆಯುವದು ಕಷ್ಠ. ಅದಕ್ಕಾಗಿ ಎಲ್ಲರೂ ಮಾನವ ಹಕ್ಕುಗಳ ಕುರಿತು ಮಾಹಿತಿಯನ್ನು ಹೊಂದುವದು ಅತೀ ಮುಖ್ಯವಾಗಿದೆಂದು ಹೇಳಿದರು.

ನಿವೃತ್ತ ಮಕ್ಕಳ ಕಲ್ಯಾಣ ಅಧಿಕಾರಿಗಳಾದ ಪಾಪಮ್ಮ ಅವರು ಮಾತನಾಡಿ ಇತ್ತಿತ್ತಲಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ ಅಲ್ಲದೇ ಮಾನವ ಹಕ್ಕುಗಳ ಉಲ್ಲಂಘನೆಯೂ ನಡೆಯುತ್ತಿದೆ. ಸಮಾಜದಲ್ಲಿ ಅನಕ್ಷರರಿಂತಲೂ ಅಕ್ಷರಸ್ತರೇ ಹೆಚ್ಚಿನ ಹಕ್ಕುಗಳ ಉಲ್ಲಂಗನೆ ಮಾಡುತ್ತಿದ್ದಾರೆ ಇದರಿಂದ ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಯುವ ಪೀಳಿಗೆಗೆ ಇದಕ್ಕೆ ಬಲಿಯಾಗುತ್ತಿದೆ ಅದಕ್ಕಾಗಿ ಮಾನವ ಹಕ್ಕುಗಳು / ಕಾನೂನುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವದು ಅವಶ್ಯಕತೆ ಇದೆ ಇಂತಹ ಕಾರ್ಯಕ್ರಮಗಳು ಬಹಳಷ್ಠು ನಡೆಯಬೇಕೆಂದು ಆಸೆಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ನ್ಯಾಯವಾದಿ ಹಾಗೂ ಜಿಲ್ಲಾ ಗ್ರಾಹಕರ ವೇಧಿಕೆಯ ಸದಸ್ಯೆ ಮಾಲತಿ ರೇಷ್ಮಿ ಮಾತನಾಡಿ ಸಮಾಜದಲ್ಲಿ ಮಹಿಳೆಯರು, ಮಕ್ಕಳು, ವೃದ್ದರು ಮತ್ತು ವಿಕಲ ಚೇತನರ ಕುರಿತಾಗಿ ಹೆಚ್ಚಿಗೆ ಕಾಳಜಿ ಇರುವದಿಲ್ಲ ಮತ್ತು ಅವರಿಗೆ ನಾವು ಕೊಡುವ ಸೌಲಭ್ಯ ಕೂಡಾ ಕೊಡುವದಿಲ್ಲ ಅವರಿಗೆ ಸಿಗಬೇಕಾದ ಹಕ್ಕುಗಳು ಸರಳವಾಗಿ ಸಿಗುತ್ತಿಲ್ಲ, ಅವರು ಹೋರಾಟ ಮಾಡಿ ಪಡೆಯಲು ಅವರಲ್ಲಿ ಸಾಮರ್ಥ್ಯ ಕೂಡಾ ಕಡಿಮೆ ಇರುತ್ತದೆ ಅದಕ್ಕಾಗಿ ನಾವು ಈ ವರ್ಗದವರಿಗೆ ಅವರ ಹಕ್ಕುಗಳು ಪಡೆಯಲು ಸಹಕರಿಸಬೇಕು, ಮಾನವ ಹಕ್ಕುಗಳು ಯಾವಾವು ಮತ್ತು ಅವುಗಳ ಉಲ್ಲಂಘನೆ ಹೇಗಾಗುತ್ತದೆ ಉಲ್ಲಂಘನೆಯಾದರೆ ಅದಕ್ಕೆ ಕಾನೂನಿನಲ್ಲಿ ಯಾವರೀತಿ ಕ್ರಮವಿದೆಂದು ತಿಳಿಸಿದ್ದರು.

ಕರೋನಾ ಸೇನಾನಿಗಳಾದ ಆರೋಗ್ಯ ಇಲಾಖೆಯ ಡಾ. ದಿಲೀಪ ರಾಠೋಡ, ಕು.ಸಂಗೀತಾ ಬುಕ್ಕಾ, ಟ್ರಾಫಿಕ್ ಪಿಎಸ್‌ಐ ಭಾರತಿ ಧನ್ನಿ, ಮಹಾನಗರ ಪಾಲಿಕೆಯ ಸಿಬ್ಬಂದಿ ಶರಣು ಅತನೂರ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಶರಣಮ್ಮ ಹಸನಾಪೂರ ಇವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಿಕ್ರಂ ಪ್ರತಿನಿಧಿಯಾದ ಡಾ. ದೇವಿಂದ್ರಪ್ಪ ಕಟ್ಟಿಮನಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ ಪ್ರತಾಪಸಿಂಗ್ ತಿವಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಸ್ವಾಗತ ಮಲ್ಲಮ್ಮ ಕಡ್ಲಾ, ನಿರೂಪಣೆಯನ್ನು ಶ್ರೀ ದೂಳಪ್ಪ ದ್ಯಾಮನಕರ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ೨೫ಕ್ಕೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು, ಹೊರಾಟಗಾರರು, ನಿವೃತ್ತ ಅಧಿಕಾರಿಗಳು ಭಾಗವಹಿಸಿದ್ದರು.

emedialine

Recent Posts

ಸದ್ಗುಣ ಮೈಗೂಡಿಸಿ ಪ್ರಗತಿಪರ ಬದುಕು ಕಟ್ಟೋಣ : ಬಸವರಾಜ್ ಪಾಟೀಲ್ ಸೇಡಂ

ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…

1 hour ago

ನಾಡಹಬ್ಬ ಆಚರಣೆ ಅಂಗವಾಗಿ ನಾಡ ದೇವತೆ ಸ್ತಬ್ಧ ಚಿತ್ರಗಳ ಮೆರವಣಿಗೆ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…

15 hours ago

ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…

15 hours ago

ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…

15 hours ago

ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…

15 hours ago

ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420