ಬಿಸಿ ಬಿಸಿ ಸುದ್ದಿ

’ಶಾಮಸುಂದರ ತತ್ವಾದರ್ಶಗಳು ಮುಂದಿನ ಪೀಳಿಗೆಗೆ ಮುಟ್ಟಿಸಿ’: ಬಿ, ಶಾಮಸುಂದರ ಜಯಂತಿ ಆಚರಣೆ

ಕಲಬುರಗಿ: ದೀನ ದಲಿತರ ಮತ್ತು ಶೋಷಿತರ ಧ್ವನಿಯಾಗಿ ತ್ಯಾಗ ಬಲಿದಾನ ಮಾಡಿದ ಬಿ, ಶಾಮಸುಂದರ ಅವರ ತತ್ವಾದರ್ಶಗಳನ್ನು ಮುಂದಿನ ಪೀಳ್ಗೆಗೆ ಮುಟ್ಟಿಸುವ ಕೆಲಸವಾಗಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ದಯಾಘನ ಧಾರವಾಡಕರ ಇಂದಿಲ್ಲಿ ಹೇಳಿದರು.

ನಗರದ ಕಲಾ ಮಂಡಳದಲ್ಲಿ ಕನಾಟಕ ಸಮತಾ ಸೈನಿಕ ದಳ ಏರ್ಪಡಿಸಿದ ಬಿ, ಶಾಮಸುಂದರ ಅವರ ೧೧೨ನೇ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಡೀ ಜೀವನದುದ್ದಕ್ಕೂ ಪ್ರಾಮಾಣಿಕ, ನಿಷ್ಠೆ ಹಾಗೂ ನಿಸ್ವಾರ್ಥ ಮೌಲ್ಯಗಳಿಂದ ಬದುಕಿದವರು. ದಕ್ಷಿಣ ಭಾರತದಲ್ಲಿ ಡಾ ಅಂಬೇಡ್ಕರವರ ವಿಚಾರಧಾರೆಗಳ ಮೇಲೆ ಹೋರಾಟ ಮಾಡಿದವರು. ಇಂಥ ಮಹಾ ಪುರುಷರ ಜೀವನ ಮತ್ತು ಸಂದೇಶಗಳ ಕುರಿತು ನಮ್ಮ ಯುವಕರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ. ನಗರದ ಜಿಡಿಎ ಬಡಾವಣೆಗೆ ಶಾಮಸುಂದರ ಹೆಸರಿಡಲು ಪ್ರಾಧಿಕಾರದ ಸಭೆಯಲ್ಲಿ ನಿರ್ಣಯಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾಜಿ ಸಿಂಡಿಕೇಟ್ ಸದಸ್ಯ ಸುನೀಲ ಒಂಟಿ ಮಾತನಾಡಿ, ಪ್ರತಿ ಬಡಾವಣೆಯಲ್ಲಿ ಶಾಮಸುಂದರವರ ವಿಚಾರಗಳು ಪ್ರಚಾರ ಕೈಗೊಳ್ಳಬೇಕು. ಜೊತೆಗೆ ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ನುಡಿದರು.

ಸಂಪಾದಕ ಶಿವರಾಯ ದೊಡ್ಡಮನಿ ಅವರು, ಬಗರ್ ಹುಕಂ ಸಾಗುವಳಿ ಮಾಡುವದಕ್ಕಾಗಿ ಈ ಭಾಗದಲ್ಲಿ ಹೋರಾಟ ಮಾಡಿ ಅನುಷ್ಠಾನ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು. ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಸಂಜೀವ ಟಿ ಮಾಲೆ ಅಧ್ಯಕ್ಷತೆ ವಹಿಸಿ, ರಾಜ್ಯದಲ್ಲಿ ಬಿ ಶಾಮಸುಂದರವರ ವಿಚಾರಗಳನ್ನು ಮನೆ ಮನಕ್ಕೂ ತಲುಪಿಸುವ ಕಾರ್ಯ ಮಾಡಲಾಗುವುದು. ಹಾಗೂ ಕಲಬುರಗಿ ನಗರದ ಬಡಾವಣೆಗೆ ಶಾಮಸುಂದರರ ಹೆಸರಿಡಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕರ್ನಾಟಕ ನಿವೃತ್ತ ವೈದ್ಯ ಡಾ ದೇವಿಂದ್ರಪ್ಪ ಕಮಲಾಪೂರ, ಸೀಮಾ ಮೂಲಭಾರತಿ ಮಾತನಾಡಿದರು. ವಿಷುದ್ಧ ಬೋಧಿ ಬಂತೆ ಸಾನಿಧ್ಯ ವಹಿಸಿದರು. ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಪಿ ಮದನಕರ, ಪತ್ರಕರ್ತ ಧರ್ಮಣ್ಣ ಧನ್ನಿ, ನಂದಕುಮಾರ ತಳಕೇರಿ, ಶಿವಮೂರ್ತಿ ಬಳಿಚಕ್ರವರ್ತಿ, ರೇವಣಸಿದ್ದಪ್ಪ ಅಲಂಕಾರ, ಶರಣಬಸವ ಸುಗಂಧಿ, ಶ್ರೀಮಂತ ಕಟ್ಟಿ, ತುಕಾರಮ ವರ್ಮಾ, ಅಮರ ವಾಡೇಕರ, ಮತ್ತಿತರರಿದ್ದರು. ರೇಷ್ಮಾ ಠಿಳ್ಳೆ ಅವರು ಪ್ರಾರ್ಥನೆ ಗೀತೆ ಹಾಡಿದರು. ಕಲಾವಿದ ಎಂ ಎನ್ ಸುಗಂಧಿ ರಾಜಾಪೂರ ಸ್ವಾಗತಿಸಿ ನಿರೂಪಿಸಿದರು. ಅನೀಲ ದೇವರಮನಿ ವಂದಿಸಿದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

8 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

8 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

10 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

10 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

10 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

10 hours ago