ಪ್ರತಿ ಐದು ವರ್ಷಗಳಿಗೊಮ್ಮೆ ಗ್ರಾಮ ಪಂಚಾಯತಿ ಚುನಾವಣೆ ಬರುತ್ತದೆ. ಭಾರತ ಸಂವಿಧಾನವು 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕನಿಗೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ನೀಡಿದೆ.
ಆದರೆ ಇಲ್ಲಿಯವರೆಗೆ ಅನೇಕ ಚುನಾವಣೆಗಳು ಬಂದು ಹೋಗಿವೆ. ಆದರೆ ಹೇಳಿಕೊಳ್ಳುವಷ್ಟು ಅಭಿವೃದ್ಧಿಯಾಗಿಲ್ಲ. ಚುನಾವಣೆಗಳು ಸರ್ಕಾರಗಳನ್ನು ಬದಲಾಯಿಸುತ್ತವೆ. ಹೊರತು ಜನಸಾಮಾನ್ಯರ ಸಮಸ್ಯೆಗಳನ್ನು ಅಲ್ಲ ಎಂಬುದು ಸಾಬೀತಾಗುತ್ತಿದೆ.
ಚುನಾವಣೆ ಬಂದಾಗ ಮಾತ್ರ ಬಾರಿ ಅಬ್ಬರದ ಪ್ರಚಾರ ದೊಂದಿಗೆ ತಾಮುಂದು -ನಾಮುಂದು ಎಂದು ಸುಳ್ಳು ಭರವಸೆ ಇಲ್ಲ ಸಲ್ಲದ ಆಶ್ವಾಸನೆಗಳನ್ನು ಸಿದ್ಧಪಡಿಸಿಕೊಂಡು ಜಾತಿ ಧರ್ಮದ ಹೆಸರಿನಲ್ಲಿ ಮತ್ತು ಹಣ ಬಲಗಳ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ನಂತರ ಗ್ರಾಮದ ಮತದಾರರಲ್ಲಿ ಮತ ಕೇಳಲು ಬರುತ್ತಾರೆ. ಅದಕ್ಕಾಗಿ ಮತದಾರರು ಪ್ರಜ್ಞಾವಂತರಾಗಬೇಕು ನಾವೆಲ್ಲರೂ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ಜನಪ್ರತಿನಿಧಿಗಳನ್ನು ಆರಿಸುವ ನಿಟ್ಟಿನಲ್ಲಿ ಚಿಂತಿಸಬೇಕು.
ಅವಕಾಶವಾದಿ, ಭ್ರಷ್ಟರನ್ನು, ಜಾತಿವಾದಿ ಕೋಮುವಾದಿಗಳಂಥ ರಾಜಕೀಯ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಸೋಲಿನ ರುಚಿ ಹಚ್ಚಬೇಕು. ಯಾರದೇ ಪ್ರಭಾವಕ್ಕೆ ಒಳಗಾಗಿ ಎಂಥದೇ ವ್ಯಕ್ತಿಯನ್ನು ಆರಿಸಿದ್ದೇ ಆದರೆ ನಾವು ಅದೇ ನಮ್ಮ ಮತ ದುರಾಡಳಿತಕ್ಕೆ ಸಹಕರಿಸಿದಂತಾಗುತ್ತದೆ. ನಮ್ಮ ಕಾಲ ಮೇಲೆ ನಾವೇ ಕಲ್ಲು ಎಸೆದು ಕೊಂಡಂತಾಗುತ್ತದೆ. ಅವರಿಂದ ಯಾವುದೇ ಕೆಲಸ ಕಾರ್ಯಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಜನಸಾಮಾನ್ಯರಾದ ನಾವುಗಳು ನಾವೆಲ್ಲರೂ ಚುನಾವಣೆಯಲ್ಲಿ ಅಕ್ರಮ ಹಣ ಹೆಂಡದ ಆಮಿಷಕ್ಕೆ ಒಳಗಾಗದೆ ಪ್ರಜ್ಞೆವಂತಿಕೆ ಯಿಂದ ಜನನಾಯಕನನ್ನು ಜವಾಬ್ದಾರಿಯುತವಾಗಿ ಮತ ಹಾಕಿ ಆಯ್ಕೆ ಮಾಡಬೇಕಿದೆ.
ಉತ್ತಮ ಆಡಳಿತವನ್ನು ಎತ್ತಿಹಿಡಿಯಲು, ಜನಸಾಮಾನ್ಯರ ಸಮಸ್ಯೆಗಳನ್ನು ಸ್ಪಂದಿಸುವ ಸಮರ್ಥ ಅಭ್ಯರ್ಥಿಯನ್ನು ಗುರುತಿಗೆ ಮತ ನೀಡಿದರೆ ನಾವೆಲ್ಲರೂ ಸಮಾಜಕ್ಕೆ ಕಾಣಿಕೆ ನೀಡಿದಂತಾಗುತ್ತ ದೆ . ಚುನಾವಣೆಯಲ್ಲಿ ಜಾಗೃತಿಯಿಂದ ನಮ್ಮ ಮತದಾನ ಮಾಡಿ ಸುವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಹಕ್ಕು. ಹಣ-ಹೆಂಡಕ್ಕೆ ಮತ ಮಾರಿಕೊಳ್ಳದೆ ಪ್ರಜಾಪ್ರಭುತ್ವದ ಮೌಲ್ಯ ಕಾಪಾಡುವ ಅಗತ್ಯವಿದೆ. ಮತ ಮಾರಿಕೊಂಡರೆ ದುರಾಡಳಿತಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ.
ಪ್ರಜಾತಂತ್ರ ಉಳಿವಿಗಾಗಿ ಸಂವಿಧಾನದ ರಕ್ಷಣೆಗಾಗಿ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಮತ ಮರೆಯದಿರಿ ನಮ್ಮ ಹಕ್ಕು. ನಮ್ಮ ಅಮೂಲ್ಯವಾದ ಮತ ಮಾರಾಟದ ವಸ್ತು ಅಲ್ಲ. ಅದಕ್ಕಾಗಿ ಸರಿಯಾಗಿ ಯೋಚಿಸಬೇಕಾದುದು ಬಹಳ ಮಹತ್ವದಾಗಿದೆ.
ಗ್ರಾಮದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ಅಭ್ಯರ್ಥಿಗೆ ನಾವೆಲ್ಲರೂ ಒಂದು ನಿರ್ಧಾರ ತೆಗೆದುಕೊಂಡು ವೋಟ್ ಮಾಡೋಣ. ನಿಮ್ಮ ಅಮೂಲ್ಯ ವಾದ ಮತ ನಿಮ್ಮ ಗ್ರಾಮಕ್ಕೆ ಹಿತ ವಾಗಬೇಕು ದುರಾಡಳಿತಕ್ಕೆ ಸಹಕರಿಸುವ ಮತ ನಿಮ್ಮದಾಗಬಾರದು ಎಂದು ನನ್ನ ಮನವಿ.
✍️ *ಭೀಮಾಶಂಕರ್ ಪಾಣೇಗಾಂವ್, ಸಾಮಾಜಿಕ ಹೋರಾಟಗಾರರು, ಕಲಬುರಗಿ*
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…