ಪ್ರಜಾಕೀಯ

ಧರ್ಮದ ಆಧಾರದ ಮೇಲೆ ದೇಶ ವಿಭಜಿಸುವ ಶಕ್ತಿಗಳನ್ನು ಸೋಲಿಸಿ:  ಖರ್ಗೆ ಮನವಿ.

ಕಲಬುರಗಿ: ದೇಶದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲ ಸಮುದಾಯದವರು  ಪರಿಶ್ರಮಿಸಬೇಕು ಎಂದು ಕಲಬುರಗಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಕರೆ ನೀಡಿದರು.

ನಗರದ ರಾಜರಾಜೇಶ್ವರಿ ಹೋಟೆಲ್ ನ ಸಭಾಂಗಣದಲ್ಲಿ ನಡೆದ ಜಿಲ್ಲಾ ಗಾಣಿಗ ಸಮಾಜದ ಮುಖಂಡರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸಮಾಜಿಕ ನ್ಯಾಯ ಪರಿಕಲ್ಪನೆ, ಸಮಾನತೆಯ ಮೇಲೆ ನಂಬಿಕೆಯಿರದ ಬಿಜೆಪಿ ಹಾಗೂ ಆರ್ ಎಸ್ ಎಸ್ ಜಾತಿ ಆಧಾರದ ಮೇಲೆ ಜನರನ್ನು ಒಡೆಯುವಂತ ಕೆಲಸ ಮಾಡುತ್ತಿವೆ. ಆದರೆ, ಮತದಾರರು ಈಗ ಜಾಗೃತರಾಗಿದ್ದು ಈ ಸಲದ ಚುನಾವಣೆಯಲ್ಲಿ ದೇಶವಿಭಜಿಸುವ ಶಕ್ತಿಗಳಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೇಸ್ ಪಕ್ಷ‌ ಏನು ಅಭಿವೃದ್ದಿ ಮಾಡಿದೆ ಎಂದು ನಮ್ಮ ಪಕ್ಷದಿಂದ ಎಲ್ಲ ಅಧಿಕಾರ ಅನುಭವಿಸಿದರೇ ಇಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಿದ ಖರ್ಗೆ, ಇಷ್ಟು ವರ್ಷ ನಮ್ಮ ಪಕ್ಷದಲ್ಲಿಯೇ ಇದ್ದ ನಿಮಗೆ ಪಕ್ಷ ಏನು ಮಾಡಿದೆ ಎಂದು ಗೊತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದರು.

ಸಂವಿಧಾನದ ಆರ್ಟಿಕಲ್ 371 ಕ್ಕೆ ತಿದ್ದುಪಡಿ ತರಲು ನಡೆಸಿದ ಅವಿರತ ಹೋರಾಟವನ್ನು ವಿವರಿಸಿದ ಸಂಸದರು, ಬಿಜೆಪಿ ಅಧಿಕಾರದಲ್ಲಿದ್ದು ಅಡ್ಡಗಾಲು ಹಾಕಿತ್ತು ಆದರೆ ಅದೇ ಬಿಜೆಪಿ ನಾಯಕರು ನನ್ನ ಹೋರಾಟವನ್ನು ಪಶ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ನಾನು ನನ್ನ ಶಕ್ತಿ ಮೀರಿ ಅಭಿವೃದ್ದಿ ಕೆಲಸ ಮಾಡಿದ್ದೇನೆ. ಈಗ ಮತ್ತೊಮ್ಮೆ ನಿಮ್ಮೆಲ್ಲರ ಆಶೀರ್ವಾದ ಬಯಸಿದ್ದೇನೆ ಎಂದು ಗಾಣಿಗ ಸಮಾಜದ ಬಾಂಧವರನ್ನು ವಿನಂತಿಸಿಕೊಂಡರು. ” ಗಾಣಿಗ ಸಮಾಜ ನಮ್ಮ ತಂದೆ ದಿವಂಗತ ಎನ್. ಧರಂಸಿಂಗ್ ಅವರೊಂದಿಗೆ ಭಾವನಾತ್ಮಕ‌ ಸಂಬಂಧ ಹೊಂದಿತ್ತು. ಆ ಸಂಬಂಧ ಈಗಲೂ ಕೂಡಾ ಮುಂದುವರೆದು ಅವರ ಮಾರ್ಗದರ್ಶನದಲ್ಲಿ ನಾನು ರಾಜಕೀಯದಲಿ ಮುಂದುವರೆದಿದ್ದೇನೆ ” ಎಂದು ಸಮಾಜದ ಭಾಂಧವರೊಂದಿಗೆ ತಮ್ಮ ಕುಟುಂಬದ ಬಾಂಧವ್ಯವನ್ನು ಜೇವರ್ಗಿ ಶಾಸಕ ಅಜಯ್ ಸಿಂಗ್ ನೆನಪಿಸಿಕೊಂಡರು.

ದಿವಂಗತ ಸಿದ್ದು ನ್ಯಾಮಗೌಡ ಹಾಗೂ ದಿವಂಗತ ಧರಂ ಸಿಂಗ್ ಅವರ ಪರಿಶ್ರಮ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಿಂದಾಗಿ ಗಾಣಿಗ ಸಮಾಜ ಪ್ರವರ್ಗ 2 ಎ ಗೆ ಸೇರಿಸಲು ಸಾಧ್ಯವಾಯಿತು ಎಂದರು. ಖರ್ಗೆ ಸಾಹೇಬರು ಹಾಗೂ ಧರಂಸಿಂಗ್ ಸಾಹೇಬರು ಈ ಭಾಗದ ಎರಡು ಕಣ್ಣುಗಳಿದ್ದಂತೆ. ಖರ್ಗೆ ಸಾಹೇಬರ ಅಭಿವೃದ್ದಿ ಕಾರ್ಯಗಳನ್ನು ನೋಡಿದರೆ ಅವರನ್ನು ಅವಿರೋಧ ಆಯ್ಕೆ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರಕಾರ 2014 ರ ಲೋಕಸಭಾ ಚುನಾವಣಾ ಪ್ರಣಾಳಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿ ಈ ಸಲವೂ ಕೂಡ ಮತ್ತದೇ ವಿಷಯಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿ ದೇಶದ ಜನರ ದಾರಿ ತಪ್ಪಿಸುತ್ತಿದೆ ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡರ ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಂ ವೈ ಪಾಟೀಲ್, ಅಜಯ್ ಸಿಂಗ್ಜಿ ಹಾಗೂ ಆನಂದ ನ್ಯಾಮಗೌಡರ, ಗಾಣಿಗ ಸಮಾಜದ ಅಧ್ಯಕ್ಷ ರಾದ ಅಪ್ಪಾರಾಯ ಪಾಟೀಲ್, ಸವಿತಾ ಸಜ್ಜನ್, ಶಾಮರಾವ್ ಪ್ಯಾಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

10 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

19 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

19 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

20 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago