ಶಹಾಬಾದ:ತಾಲೂಕಿನ ತಾಲೂಕಿನ ಭಂಕೂರ, ಮರತೂರ, ತೊನಸನಹಳ್ಳಿ(ಎಸ್) ಹಾಗೂ ಹೊನಗುಂಟಾ ಗ್ರಾಪಂಗಳ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ನಡೆಯಲಿದ್ದು, ನಾಳೆ ಎಲ್ಲರ ಚಿತ್ತ ಮತ ಕೇಂದ್ರಗಳತ್ತ ನೆಟ್ಟಿದ್ದು, 4 ಗ್ರಾಪಂ ಚುನಾವಣೆಯ ಅಭ್ಯರ್ಥಿಗಳ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದೆ.
ಚುನಾವಣೆಯ 79 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ನಾಲ್ಕು ಗ್ರಾಪಂಗಳ ಚುನಾವಣೆಯ ಮತ ಎಣಿಕೆ ಕಾರ್ಯ ಡಿಸೆಂಬರ್ 30 ರಂದು ಬೆಳಿಗ್ಗೆ 8 ಗಂಟೆಗೆ ನಗರದ ಗಂಗಮ್ಮ ಶಾಲೆಯಲ್ಲಿ ನಡೆಯಲಿದೆ.ಅದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮತ ಎಣಿಕೆಗಾಗಿ 3 ಕೊಠಡಿಗಳಲ್ಲಿ 11 ಟೇಬಲಗಳ ವ್ಯವಸ್ಥೆ ಮಾಡಲಾಗಿದ್ದು, 01 ನೋಡಲ್ ಅಧಿಕಾರಿ, 01 ವೀಕ್ಷಕರು, 11 ಜನ ಮತ ಎಣಿಕೆ ಮೇಲ್ವಿಚಾರಕರು, 22 ಜನ ಎಣಿಕೆ ಸಹಾಯಕರು,22ಕ್ಕೂ ಹೆಚ್ಚು ಎಣಿಕೆ ಸಿಬ್ಬಂದಿಗಳು, 4 ಜನ ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತದೆ.ತಾಲೂಕಾವಾದ ನಂತರ ಮೊಟ್ಟ ಮೊದಲ ಬಾರಿಗೆ ಮತ ಎಣಿಕೆ ಬಗ್ಗೆ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಎಣಿಕೆ ಕೇಂದ್ರದ ಸುತ್ತಲೂ ಸುಮಾರು 100 ಮೀಟರ್ ಒಳಗಡೆ ಯಾರು ಬರದಂತೆ ನಿಷೇದಾಜ್ಞೆ ಹೊರಡಿಸಲಾಗಿದೆ.
ಅಲ್ಲದೇ ನಾಲ್ಕು ಗ್ರಾಪಂಗಳ ಮತಪೆಟ್ಟಿಗೆ ಹಾಗೂ ದಾಖಲೆಗಳನ್ನು ಇಡಲಾದ ಸ್ಟ್ರಾಂಗ್ ರೂಮನಲ್ಲಿ ಮತ್ತು ಕೇಂದ್ರದ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ಭಂಕೂರ ಗ್ರಾಪಂಯಲ್ಲಿ ಒಟ್ಟು 31 ಸ್ಥಾನಗಳಿಗೆ 88 ಅಭ್ಯರ್ಥಿಗಳು, ತೊನಸನಹಳ್ಳಿ(ಎಸ್) ಗ್ರಾಪಂಯ ಒಟ್ಟು 22 ಸ್ಥಾನಗಳಿಗೆ , ಮರತೂರ ಗ್ರಾಪಂ ಒಟ್ಟು 20 ಸ್ಥಾನಗಳಿಗೆ 70 ಅಭ್ಯರ್ಥಿಗಳು ಹಾಗೂ ಹೊನಗುಂಟಾ ಗ್ರಾಪಂಯ 17 ಸ್ಥಾನಗಳಿಗೆ 82 ಅಭ್ಯರ್ಥಿಗಳು ಕಣದಲ್ಲಿದ್ದು, ಇದರಲ್ಲಿ ನಾಲ್ಕು ಗ್ರಾಪಂಗಳಲ್ಲಿ 11 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 79 ಸ್ಥಾನಗಳಿಗೆ ಸ್ಪರ್ಧೆ ಮಾಡಿದ 1279 ಅಭ್ಯರ್ಥಿಗಳ ಹಣೆಬರಹ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದು,
ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಲೆಕ್ಕಾಚಾರ ಗ್ರಾಮಗಳಲ್ಲಿ ಶುರುವಾಗಿದೆ.ಆದರೆ ಮತದಾರರು ಮಾತ್ರ ಅಭ್ಯರ್ಥಿಗಳ ಭವಿಷ್ಯವನ್ನು ಮತಪಟ್ಟಿಗೆಯಲ್ಲಿ ಹಾಕಿದ್ದಾರೆ. ಇದೇ ತಿಂಗಳ ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದ್ದು ಯಾವೆಲ್ಲ ಅಭ್ಯರ್ಥಿಗಳು ಜನರ ಮನಸ್ಸು ಗೆದ್ದಿದ್ದಾರೆ ಎನ್ನುವುದು ಬಹಿರಂಗವಾಗುವ ಸಮಯ ನಿಗದಿಯಾಗಿದ್ದು, ಕಾದು ನೋಡಬೇಕಷ್ಟೇ.
ಮತ ಎಣಿಕೆ ಕೇಂದ್ರದಲ್ಲಿ ಒಬ್ಬರಿಗೆ ಮಾತ್ರ ಅವಕಾಶ
ಡಿಸೆಂಬರ್ 30 ರಂದು ಗ್ರಾಪಂ ಚುನಾವಣೆ ಎಣಿಕೆ ಕಾರ್ಯ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಅಂದು ನಾಲ್ಕು ಗ್ರಾಪಂಯ 1279 ಅಭ್ಯರ್ಥಿಗಳು ಅಥವಾ ಅಭ್ಯರ್ಥಿ ಪರವಾಗಿ ಒಬ್ಬರಿಗೆ ಮಾತ್ರ ಮತ ಎಣಿಕೆ ಕೇಂದ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳು ಇದನ್ನೇ ಸೂಚನಾ ಪತ್ರ ಎಂದು ತಿಳಿದುಕೊಂಡು ಮತ ಎಣಿಕೆ ಕೇಂದ್ರಕ್ಕೆ ಹಾಜರಾಗಬೇಕು- ಸುರೇಶ ವರ್ಮಾ ತಹಸೀಲ್ದಾರ ಶಹಾಬಾದ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…