ಶಹಾಬಾದ:ನಗರದಲ್ಲಿ ಸೋಮವಾರ ಎಐಡಿಎಸ್ಓ ಸ್ಥಳಿಯ ಸಮಿತಿ ವತಿಯಿಂದ ಎಐಡಿಎಸ್ಓ 67ನೇ ಸಂಸ್ಥಾಪನ ದಿನವನ್ನು ದೆಹಲಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತರ ಹೋರಾಟಕ್ಕೆ ಸಮರ್ಪಿಸಿ ಸಂಘಟನಾ ಕಛೇರಿಯಲ್ಲಿ ಧ್ವಜಾರೋಹಣ ಮಾಡಲಾಯಿತು.
ಎಐಡಿವಾಯ್ಓ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಹೆಚ್ ಕಾಮ್ರೆಡ್ ಶಿವುದಾಸ್ ಘೋಸ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, 1954 ಡಿಸೆಂಬರ್ 28 ರಂದು ಕಲ್ಕಾತ್ತದ ಲ್ಲಿ ಪ್ರಾರಂಭವಾದ ಈ ಸಂಘಟನೆ ಇಂದು ಇಡಿ ದೇಶದಲ್ಲಿ ಪ್ರಜಾಸತಾತ್ಮಕ, ವೈಜ್ಞಾನಿಕ, ಧರ್ಮನಿರಪೇಕ್ಷ ಶಿಕ್ಷಣ ಜಾರಿಗಾಗಿ ಹಾಗೂ ವಿದ್ಯಾರ್ಥಿಗಳ ಹಲಾವಾರು ಸಮಸ್ಯೆಗಳ ವಿರುದ್ಧ ಹೋರಾಟಗಳು ಸಂಘಟಿಸಿ, ದೇಶದಲ್ಲಿ ನೈಜ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯಾಗಿದೆ. ಇನ್ನೊಂದಡೆ ವಿದ್ಯಾರ್ಥಿಗಳ ಮಧ್ಯೆ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ, ಚಂದ್ರಶೇಖರ್ ಅಜಾದ್, ಖುದಿರಾಮ್ ಬೋಸ್ ಹಾಗೂ ಸಮಾಜ ಸುಧಾರಕರಾದ ರಾಜಾ ರಾಮ್ ಮೋನ್ ರಾಯ್ ಈಶ್ವಚಂದ್ರ ವಿದ್ಯಾಸಾಗರ, ಜ್ಯೋತಿ ಬಾಫುಲೆ, ವಿಜ್ಞಾನಿಗಳಾದ ಐನ್ ಸ್ಟೀನ್, ಮೇಡಂ ಮೇರಿಕ್ಯೂರಿ ಸೇರಿದಂತೆ ಹಲವಾರು ಮಹಾನ್ ವ್ಯಕ್ತಿಗಳ ವಿಚಾರಗಳನ್ನು ಎತ್ತಿಹಿಡಿದು ಮೌಲ್ಯಾದರಿತ ಶಿಕ್ಷಣಕ್ಕಾಗಿ ಹೋರಾಟ ಕಟ್ಟುತಿದೆ ಎಂದು ಹೇಳಿದರು.
ಧ್ವ
ಜಾಹಾರೋಹಣವನ್ನು ನೆರವೇರಿಸಿ ಮಾತನಾಡಿದ ಎಐಡಿಎಸ್ಓ ಅಧ್ಯಕ್ಷರಾದ ತುಳಜರಾಮ.ಎನ್.ಕೆ, ನಮ್ಮ ದೇಶಕ್ಕೆ ಸ್ವಾತಂತ್ರ ದೊರಕಿ 73 ವರ್ಷಗಳಾದರೂ ಸಹ, ಅವರು ಕಂಡ ಸ್ವತಂತ್ರ ಭಾರತದ ಕನಸು ಕನಸಾಗಿಯೇ ಉಳಿದಿದೆ. ಇಂದಿಗೂ ದೇಶದಲ್ಲಿ ಶಿಕ್ಷಣವು ಖಾಸಗೀಕರಣ, ವ್ಯಾಪಾರೀಕರಣದ ಬೃಹತ್ ಗೂಡಾಗಿದೆ. ಬಡವರು ತಮ್ಮ ಮಕ್ಕಳಿಗೆ ಒಳ್ಳೆ ಗುಣಮಟ್ಟದ ಶಿಕ್ಷಣ ಕೊಡಿಸಲು ಅನುಭವಿಸುವ ಪರದಾಟ ಹೇಳತೀರದು.ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣಕ್ಕೆ ಅಂತ್ಯ ಹಾಡುವುದಾಗಿ ಹೇಳುವ ಸರಕಾರಗಳೇ ಅಂದಿನಿಂದ ಇಂದಿನವರೆಗೂ ಶ್ರೀಮಂತ ಮನೆತನಗಳ ಪರವಾದ ದನಿಯಾಗಿ, ಅವರ ಪ್ರಯೋಜನಕ್ಕೆ ತಕ್ಕ ನೀತಿಗಳನ್ನು ರೂಪಿಸುತ್ತಲೇ ಬಂದಿದ್ದಾರೆ. ಇದರ ಪರಿಣಾಮವಾಗಿ ಕೂಲಿ ಕಾರ್ಮಿಕರು, ರೈತರು, ಮಧ್ಯಮ ವರ್ಗದವರ ಮಕ್ಕಳು ಶಿಕ್ಷಣದಿಂದ ವಂಚಿರಾಗುತ್ತಿದ್ದಾರೆ.. ಸರಕಾರದ ಈ ಉದ್ದೇಶದ ವಿರುದ್ಧ ಹಾಗೂ ನೈಜ ಪ್ರಜಾಸತ್ತಾತ್ಮಕ ಧರ್ಮನಿರಪೇಕ್ಷ ಹಾಗೂ ವೈಜ್ಞಾನಿಕ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಂತಹ ಶಿಕ್ಷಣದ ಅವಶ್ಯಕತೆ ಇರುವುದನ್ನು ಮನಗಂಡು, ಈ ಉದ್ದೇಶವನ್ನು ಸಾಕಾರಗೊಳಿಸಬೇಕೆಂದು ಹಾಗೂ ಮಹಾನ್ ಸ್ವಾತಂತ್ರ ಹೋರಾಟಗಾರರು ಕಂಡ ಕನಸಿನ ಭಾರತ ನಿಮರ್ಿಸಿ ಎಲ್ಲರಿಗೂ ಶಿಕ್ಷಣ, ಉದ್ಯೋಗ ಹಾಗೂ ಭದ್ರತೆಯನ್ನು ಖಾತ್ರಿ ಪಡಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ನಿರುಪಣೆಯನ್ನು ಎಐಡಿಎಸ್ಓ ಉಪಾಧ್ಯಕ್ಷ ರಮೇಶ ದೇವಕರ್, ಕಿರಣ್ ಮಾನೆ ,ಅಜಯ್.ಎ.ಜಿ, ಬಾಬು, ದತ್ತು ಇತರರು ಇದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…