ಬಿಸಿ ಬಿಸಿ ಸುದ್ದಿ

ಗ್ರಾ.ಪಂ ಚುನಾವಣೆ: ತಾಲೂಕಿನ ಎಲ್ಲಾ 410 ಸ್ಥಾನಗಳ ಫಲಿತಾಂಶ ಪ್ರಕಟ

ಕಲಬುರಗಿ: ಸಾರ್ವತ್ರಿಕ ಗ್ರಾಮ ಪಂಚಾಯತಿ ಚುನಾವಣೆಯ ಎರಡನೇ ಹಂತದಲ್ಲಿ ಕಳೆದ ಡಿ.27 ರಂದು ಚಿತ್ತಾಪುರ ತಾಲೂಕಿನ 24 ಗ್ರಾಮ ಪಂಚಾಯತಿಗಳ 133 ಕ್ಷೇತ್ರಗಳ 410 ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ.

ತಾಲೂಕಿನ ಒಟ್ಟು 24 ಗ್ರಾಮ ಪಂಚಾಯತಿಗಳಾದ ಗುಂಡಗೂರ್ತಿ, ಇವಣಿ, ಮಾಡಬೂಳ, ದಂಡೋತಿ, ದಿಗ್ಗಾಂವ, ಮೊಗಲಾ, ಸಾತನೂರ, ಪೇಠಶಿರೂರ, ಮುಗಳನಾಗಾಂವ, ಭಾಗೋಡಿ, ಮಾಲಗತ್ತಿ, ರಾವೂರ, ಕಮರವಾಡಿ, ಕರದಾಳ, ಹಲಕಟ್ಟಾ, ಇಂಗಳಗಿ, ಲಾಡ್ಲಾಪುರ, ಅಳ್ಳೊಳ್ಳಿ, ಭೀಮನಳ್ಳಿ, ಆಲೂರ (ಬಿ), ಯಾಗಾಪುರ, ನಾಲವಾರ, ಕಡಬೂರ ಹಾಗೂ ಸನ್ನತಿಯ 133 ಕ್ಷೇತ್ರಗಳ ಒಟ್ಟು 410 ಸ್ಥಾನಗಳ ಪೈಕಿ ಈಗಾಗಲೆ 89 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 321 ಅಭ್ಯರ್ಥಿಗಳ ಆಯ್ಕೆಗಾಗಿ ಡಿ.27 ರಂದು ಚುನಾವಣೆ ನಡೆದಿತ್ತು.

ಬುಧವಾರ (ಇಂದು) ನಡೆದ ಮತ ಎಣಿಕೆಯಲ್ಲಿ ಈ 321 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಒಟ್ಟು 410 ಸ್ಥಾನಗಳ ಭರ್ತಿಗೆ 200 ಸ್ಥಾನ ಸಾಮಾನ್ಯ ಮತ್ತು 210 ಸ್ಥಾನ ಮಹಿಳೆಯರಿಗೆ ಮೀಸಲಿರಿಸಲಾಗಿತ್ತು.

410 ಸದಸ್ಯ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ವರ್ಗವಾರು ಅಭ್ಯರ್ಥಿಗಳನ್ನು ನೋಡಿದಾಗ ಅನುಸೂಚಿತ ಜಾತಿ ಸದಸ್ಯ ಸ್ಥಾನಗಳ ಪೈಕಿ ಸಾಮಾನ್ಯ-56 ಮತ್ತು ಮಹಿಳಾ-68 ಸೇರಿದಂತೆ 124 ಅಭ್ಯರ್ಥಿಗಳಿದ್ದಾರೆ. ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳ ಪೈಕಿ 24 ಮಹಿಳಾ ಅಭ್ಯರ್ಥಿಗಳಿದ್ದಾರೆ. ಹಿಂದುಳಿದ “ಅ” ವರ್ಗ ಸದಸ್ಯ ಸ್ಥಾನಗಳ ಪೈಕಿ ಸಾಮಾನ್ಯ-17 ಮತ್ತು ಮಹಿಳಾ-32 ಸೇರಿದಂತೆ 49 ಅಭ್ಯರ್ಥಿಗಳಿದ್ದಾರೆ. ಹಿಂದುಳಿದ “ಬ” ವರ್ಗ ಸದಸ್ಯ ಸ್ಥಾನಗಳ ಪೈಕಿ ಸಾಮಾನ್ಯ-8 ಮತ್ತು ಮಹಿಳಾ-4 ಸೇರಿದಂತೆ 12 ಅಭ್ಯರ್ಥಿಗಳು ಹಾಗೂ ಸಾಮಾನ್ಯ ವರ್ಗ ಸದಸ್ಯ ಸ್ಥಾನಗಳ ಪೈಕಿ ಸಾಮಾನ್ಯ-119 ಮತ್ತು ಮಹಿಳಾ-82 ಸೇರಿದಂತೆ 201 ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.

ಚಿತ್ತಾಪೂರ ಪಟ್ಟಣದ ಶ್ರೀ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದ್ದು, ಫಲಿತಾಂಶ ತಿಳಿಯಲು ಕುತೂಹಲದಿಂದ ಸಾವಿರಾರು ಜನ ಅಭ್ಯರ್ಥಿಗಳ ಬೆಂಬಲಿಗರು ಮತ ಎಣಿಕೆ ಕೆಂದ್ರದ ಹೊರಗಡೆ ನೆರಿದಿದ್ದರು, ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

10 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

10 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

12 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

12 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

12 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

12 hours ago