ಶಹಾಬಾದ:ಗ್ರಾಪಂ ಚುನಾವಣೆಯ ಮತದಾನ ಎಣಿಕೆ ಕಾರ್ಯ ಬುಧವಾರ ನಗರದ ಗಂಗಮ್ಮ ಶಾಲೆಯಲ್ಲಿ ಯಾವುದೇ ಸದ್ದು ಗದ್ದಲವಿಲ್ಲದೇ, ಶಾಂತಿಯುತವಾಗಿ ನಡೆಯಿತು.
ತಾಲೂಕಿನ ಭಂಕೂರ, ಮರತೂರ, ತೊನಸನಹಳ್ಳಿ(ಎಸ್) ಹಾಗೂ ಹೊನಗುಂಟಾ ಗ್ರಾಪಂಗಳ ಚುನಾವಣೆಯ ಮತ ಎಣಿಕೆ ಕಾರ್ಯ ಬೆಳ್ಳಿಗ್ಗೆ 8 ಗಂಟೆಗೆ ನಡೆದು ರಾತ್ರಿ 11:30 ಗಂಟೆಯವರೆಗೆ ನಡೆಯಿತು. ಪ್ರಾರಂಭದಲ್ಲಿ ಒದೊಂದು ಬೂತ್ನ ಅಭ್ಯರ್ಥಿಗಳನ್ನು ಅಥವಾ ಏಜೆಂಟರನ್ನು ಮತ ಎಣಿಕೆ ಕೇಂದ್ರದಲ್ಲಿ ಕರೆಯಿಸಿ, ಮತ ಎಣಿಕೆ ಕಾರ್ಯ ಪ್ರಾರಂಭಿಸಿದರು.ಅಲ್ಲದೇ ಫಲಿತಾಂಶ ಘೋಷಣೆ ಮಾಡುತ್ತಿದ್ದಂತೆ ಅವರನ್ನು ಅಲ್ಲಿಂದ ತೆರಳುವಂತೆ ಮಾಡಿ, ಕೇಂದ್ರದಲ್ಲಿ ಜನರು ಗುಂಪಾಗದಂತೆ ನೋಡಿಕೊಳ್ಳಲಾಯಿತು.ಅಲ್ಲದೇ ಮತದಾನ ಕೇಂದ್ರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.
ಕೇಂದ್ರದ ಮುಂಭಾಗದಲ್ಲಿ ಬ್ಯಾರಿಕೇಡ್ ನಿರ್ಮಾಣ ಮಾಡಿ, ಕೇವಲ ಅಭ್ಯಥ ಅಥವಾ ಏಜೆಂಟರಿಗೆ ಮಾತ್ರ ಒಳಹೋಗಲು ಅವಕಾಶ ನೀಡಲಾಗಿತ್ತು.ಕೊರೊನಾದ ಸಂಬಂಧ ಪ್ರತಿಯೊಬ್ಬರಿಗೆ ಸ್ಯಾನಿಟೈಜ್ ವ್ಯವಸ್ಥೆ ಮಾಡಲಾಗಿತ್ತು. ವಿಜೇತರಾದ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಕೇಂದ್ರದ ಮುಂಭಾಗದಲ್ಲಿ ವಿಜಯೋತ್ಸವ ಆಚರಣೆ, ಮೆರವಣಿಗೆಗೆ ಅವಕಾಶ ನೀಡಲಿಲ್ಲ.ಅಲ್ಲದೇ ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾ ಎಸ್ಪಿ ಸಿಮಿ ಮರಿಯಮಂ ಜಾರ್ಜ ಹಾಗೂ ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ರಾಜಾ ಬೇಟಿ ನೀಡಿ ಪರಿಶೀಲಿಸಿದರು.
ಎಣಿಕೆ ಕೇಂದ್ರದಲ್ಲಿ ಸಿಬ್ಬಂದಿಗಳಿಗೆ ಯಾವುದೇ ತೊಂದರೆಯಾಗದಂತೆ ನೀರು, ಚಹಾ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಂದು ಗ್ರಾಪಂಗಳ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲು ಧ್ವನಿ ವರ್ಧಕಗಳ ವ್ಯವಸ್ಥೆ ಮಾಡಲಾಗಿತ್ತು.ಸಿಬ್ಬಂದಿಗಳು ಕ್ಷಣ ಕ್ಷಣಕ್ಕೂ ಮೈಕ್ ಮೂಲಕ ತಹಸೀಲ್ದಾರರು ನೀಡಿದ ಸಂದೇಶವನ್ನು ಸಾರ್ವಜನಿಕರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದರು.ಒಟ್ಟಾರೆಯಾಗಿ ಪ್ರಪ್ರಥಮ ತಾಲೂಕಾ ರಚನಾಯದ ನಂತರ ನಡೆದ ಮೊದಲ ಚುನಾವಣೆ ಕಾರ್ಯ ಮಾತ್ರ ಸೂಸುತ್ರವಾಗಿ ನಡೆಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ ಸುರೇಶ ವರ್ಮಾ, ನೋಡಲ್ ಅಧಿಕಾರಿಗಳಾದ ಶಿವನಗೌಡ ಪಾಟೀಲ, ಶಿವಶರಣಪ್ಪ ಮೂಲಗೆ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಪಿಐ ಬಿ.ಅಮರೇಶ,ಉಪತಹಸೀಲ್ದಾರ ಮಲ್ಲಿಕಾರ್ಜುನ ರೆಡ್ಡಿ,ಲಕ್ಷ್ಮಣ ಶೃಂಗೇರಿ, ಪಿಎಸ್ಐ ತಿರುಮಲೇಶ, ಕಂದಾಯ ಅಧಿಕಾರಿ ವೀರಭದ್ರ, ಸುನೀಲಕುಮಾರ,ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಇತರರು ಇದ್ದರು.
ಶಾಂತಿಯುತ ಮತ ಎಣಿಕೆ
ತಾಲೂಕಾ ರಚನೆಯಾದ ನಂತರ ಪ್ರಥಮ ಚುನಾವಣೆ ಬಹಳ ಶಾಂತಿಯುತವಾಗಿ ನಡೆದಿದೆ.ಇದಕ್ಕೆ ಅಧಿಕಾರಿಗಳ, ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಸಹಕಾರವೇ ಕಾರಣ.ಅಲ್ಲದೇ ಚುನಾವಣೆ ಶಾಂತಿಯುತವಾಗಿ ನಡೆಯಲು
ಯಾವುದೇ ಗಲಾಟೆಗಳಾಗದಂತೆ ನಡೆಯಲು ಪೊಲೀಸ್ ಇಲಾಖೆ ಶ್ರಮ ಮಾತ್ರ ಶ್ಲಾಘನೀಯವಾದುದು-ಸುರೇಶ ವರ್ಮಾ ತಹಸೀಲ್ದಾರ
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…