ಬಿಸಿ ಬಿಸಿ ಸುದ್ದಿ

ಸಾಹಿತ್ಯ ಶ್ರೀಮಂತಗೊಳಿಸಿದ ನಾಡಿನ ಸಾಂಸ್ಕೃತಿಕ ರಾಯಭಾರಿ ಕುವೆಂಪು

ಶಹಾಬಾದ: ನಾಡಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಈ ನಾಡಿನ ಸಾಂಸ್ಕೃತಿಕ ರಾಯಭಾರಿ ಕುವೆಂಪು ಎಂದು ಕಲಬುರಗಿ ಗ್ರಾಮೀಣ ಕಸಾಪ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.

ಅವರು ಶನಿವಾರ ನಗರದ ಕನ್ನಡ ಭವನದಲ್ಲಿ ಕಸಾಪ ಕಲಬುರಗಿ ಗ್ರಾಮೀಣ ವಲಯದಿಂದ ಆಯೋಜಿಸಲಾದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದ ಮಾತನಾಡಿದರು.

ಈ ನಾಡಿನ ಸಾಹಿತ್ಯ ಕ್ಷೇತ್ರದ ಶಾಶ್ವತ ನಾಯಕ ಕುವೆಂಪು ಎಂಬ ಸಂಗತಿಯನ್ನು ಕನ್ನಡ ಮನಸ್ಸುಗಳು ಅಂಗೀಕರಿಸಿದ್ದು ಬೇರೆ ಯಾವ ಸಾಹಿತಿಗೂ ಸಿಗದ ಗೌರವ ಕುವೆಂಪು ಅವರಿಗೆ ಶ್ರೀ ಸಾಮಾನ್ಯರಿಂದ ಸಿಕ್ಕಿದೆ.ಕಾರಣ ಅವರು ಕರ್ನಾಟಕ ರತ್ನ , ರಾಷ್ಟ್ರ ಕವಿ ಸೇರಿದಂತೆ ಅನೇಕ ಬಿರುದುಗಳನ್ನು ಪಡೆದಿರುವುದಕ್ಕೆ ಅಲ್ಲ. ಅವರು ತಮ್ಮ ಸಾಹಿತ್ಯದಲ್ಲಿ ಹೃದಯವಂತಿಕೆ, ವಿಶಾಲವಾದ ಮನೋಭಾವನೆ, ಮಾನವೀಯ ಮೌಲ್ಯಗಳನ್ನು ರಚಿಸಿದಕ್ಕೆ. ಅವರು ತಮ್ಮ ಅನಿಕೇತನ ಕವನದಲ್ಲಿ ವಿಶ್ವಮಾನವ ತತ್ವವನ್ನು ಹೇಳುವುದರ ಮೂಲಕ ಎಲ್ಲರ ಹೃದಯದಲ್ಲಿ ವಿರಾಜಮಾನರಾಗಿ ಉಳಿದಿದ್ದಾರೆ.

ಕಸಾಪ ನಗರಾಧ್ಯಕ್ಷ ಮಲ್ಲಿಕಾಜರ್ುನ ಪೂಜಾರಿ, ಕುವೆಂಪು ಅವರ ಕವಿತೆಯ ತಿರುಳನ್ನು ತಿಳಿದುಕೊಂಡರೆ ನಮ್ಮ ನಿಮ್ಮ ಮುಂದೆ ಮತ್ತೊಬ್ಬ ಬುದ್ಧ, ಅಂಬೇಡ್ಕರ್, ಬಸವಣ್ಣನವರನ್ನು ಕಾಣಬಹುದು.ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಮಠಾಧೀಶರು, ರಾಜಕೀಯ ವ್ಯಕ್ತಿಗಳು ಸಂಕುಚಿತ ಮನೋಭಾವನೆಯಿಂದ ಮಾನವೀಯ ಮೌಲ್ಯಗಳು ಕಳೆದುಕೊಳ್ಳುತ್ತಿವೆ. ತಮ್ಮ ಸ್ವಾರ್ಥಕೋಸ್ಕರ ಒಂದು ಜಾತಿ, ಧರ್ಮಕ್ಕೆ ಅಂಟಿಕೊಂಡು ಒಡೆದಾಳು ನೀತಿಯನ್ನು ಅನುಸರಿಸುತ್ತಿದ್ದಾರೆ. ಈ ಸಂಕುಚಿತ ಮನೋಭಾವನೆಯಿಂದ ಮಾನವ ದಾನವವಾಗುತ್ತಾನೆ ಹೊರತು ವಿಶ್ವಮಾನವನಾಗಲು ಸಾಧ್ಯವಿಲ್ಲ. ವಿಶ್ವಮಾನವನಾಗಲು ಕುವೆಂಪು ಅವರು ಹೇಳಿದಂತೆ ಧರ್ಮ, ಜಾತಿ ಸಂಕೋಲೆಗಳ ಬಂಧನದಿಂದ ಮುಕ್ತರಾಗಿ ನನ್ನದು ಎಂಬ ಹೃದಯ ವೈಶ್ಯಾಲತೆಯ ಮನೋಭಾವನೆ ಬಂದಾಗ ಮಾತ್ರ ವಿಶ್ವಮಾನವರಾಗಲು ಸಾಧ್ಯ.ಅದಕ್ಕಾಗಿ ಕುವೆಂಪು ಅವರ ಸಾಹಿತ್ಯವನ್ನು ಅಧ್ಯಯನ ಮಾಡುವ ಅಗತ್ಯತೆ ಎಂದಿಗಿಂತಲೂ ಇಂದು ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ಮೃತ್ಯುಂಜಯ್ ಹಿರೇಮಠ ಮಾತನಾಡಿ, ಕುವೆಂಪು ಅವರಂತೆ ನೇರವಾಗಿ, ದಿಟ್ಟವಾಗಿ ಪುರೋಹಿತಶಾಹಿಯನ್ನು ವಿರೋಧಿಸಿ ಬರೆದ ಕವಿ, ದಾರ್ಶನಿಕರು ಕನ್ನಡ ನಾಡಿನಲ್ಲಿ ಬೆರಳಣಿಯಷ್ಟೇ. ಈ ನಾಡಿನ ನೊಂದ ವರ್ಗದ ದನಿಯಾಗಿ ರೈತರ ಪರವಾಗಿ ದಿಟ್ಟದನಿ ಎತ್ತಿದ ಕುವೆಂಪು ಸಾಹಿತ್ಯವನ್ನು ಪ್ರತಿಯೊಬ್ಬರು ಓದಿ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಉದ್ದಿಮೆದಾರ ಶಿವಕುಮಾರ ಇಂಗಿನಶೆಟ್ಟಿ ಹಾಗೂ ಶರಣಗೌಡ ಪಾಟೀಲ ಗೋಳಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಹೇಬಗೌಡ ಬೋಗುಂಡಿ,ಸಂತೋಷ ದೊಡ್ಡಮನಿ, ಶಂಕರ ಕೋಟನೂರ, ಮರಲಿಂಗ ಕಮರಡಗಿ, ಶಾಂತಪ್ಪ ಹಡಪದ, ಅರುಣ ಜಾಯಿ, ನಾಗಪ್ಪ ರಾಯಚೂರಕರ್, ಬಸವರಾಜ ಮಯೂರ, ರವಿ ಬೆಳಮಗಿ ಇತರರು ಇದ್ದರು.

emedia line

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

1 hour ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

12 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

12 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

14 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

14 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

14 hours ago