ಬಿಸಿ ಬಿಸಿ ಸುದ್ದಿ

ದೇವಮಾನವ ಶ್ರೀದೇವಲ ಮಹರ್ಷಿ ಕೃತಿ ಬಿಡುಗಡೆ

ಕಲಬುರಗಿ: ಸಜ್ಜನಿಕೆ, ಔದಾರ್ಯ, ಶಾಂತತೆ ಮತ್ತು ಸೌಮ್ಯ ಪ್ರಭಾವದ ಸಾಕಾರಮೂರ್ತಿಯಾಗಿದ್ದ ದೇವ ಮಾನವ ಶ್ರೀದೇವಲ ಮಹರ್ಷಿ ಕೃತಿಯು ಚಾರಿತ್ರಿಕ ಕಥೆಗಳು ಹೊಂದಿದೆ ಎಂದು ಹಿರಿಯ ಲೇಖಕ ಹಾಗೂ ಅನುವಾದಕ ಸೂರ್ಯಕಾಂತ ಸೊನ್ನದ ಅಭಿಪ್ರಾಯಪಟ್ಟರು.

ನಗರದ ಬ್ರಹ್ಮಪುರ ಮಹಾಲಕ್ಷ್ಮೀ ಲೇಔಟ್‌ನ ದಿ ಆರ್ಟ ಇಂಟಿಗ್ರೇಶನ್ ಸೊಸೈಟಿಯಲ್ಲಿ ಕಲ್ಯಾಣ ಕರ್ನಾಟಕ ದೇವಾಂಗ ಅಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಕಾಯಕ ಜೀವಿ ಚಂದ್ರಶೇಖರ ಮಾಳಾ ರಚನೆಯ ದೇವಮಾನವ ಶ್ರೀದೇವಲ ಮಹರ್ಷಿ ಕೃತಿ ಬಿಡುಗಡೆಯಲ್ಲಿ ಕೃತಿ ಕುರಿತು ಮಾತನಾಡಿದ ಅವರು, ಪೌರಾಣಿಕ ಕಥಾರೂಪದಲ್ಲಿ ರಚಿಸಲಾದ ದೇವಲ ಮಹರ್ಷಿ ಕೃತಿಯು ಚರಿತ್ರೆಯ ಜೊತೆಗೆ ಸುಮಾರು ನಲವತ್ತು ಕವಿತೆಗಳು ಅಡಗಿವೆ ಎಂದು ಅವರು ಹೇಳಿದರು.

ಬ್ರಹ್ಮ-ಮುದುಕ, ವಿಷ್ಣು-ಯುವಕ. ಮಹೇಶ್ವರ-ಭುಕ್ಷುಕ. ಬ್ರಹ್ಮ ಆದೇಶ- ದೇವಾಂಗ ಸಮಾಜ ಸ್ಥಾಪನೆಗೆ ಕಾರ್ತಿಕ ಮಾಸದ ದ್ವಾದಸಿ ದಿನ ದೇವಲ ಮಹರ್ಷಿ ಜಯಂತ್ಯೋತ್ಸವನ್ನು ಸಮಾಜದವರು ಆಚರಿಸುತ್ತ ಬಂದಿದ್ದಾರೆ. ದೇವಲ ಮಹರ್ಷಿ ದೇವಧತ್ತಿ ಕಳಿಸಿದ ವಸ್ತ್ರಗಳನ್ನು ಬ್ರಹ್ಮ-ವಿಷ್ಣು-ಮಹೇಶ್ವರ ದೇವತೆಗಳಿಗೆಲ್ಲ ಹಂಚುತ್ತಾರೆ ಎಂದು ಅವರು ತಿಳಿಸಿದರು.

ಮಾತಾ ಗಾಯತ್ರಿ ಪೀಠ ಹಂಪಿಯಲ್ಲಿ ಹೇಗೆ ಬಂತು? ಮೊದಲ ಪೀಠಾಧಿಪತಿ ಯಾರು? ಬಾದಾಮಿಯಲ್ಲಿ ಬನಶಂಕರಿ ದೇವಾಲಯ ಹೇಗೆ ಬಂತು, ತೆಂಗಿನ ಬನದ ನಿರ್ಮಾಣ ವಿವರಣೆಯು ಕೃತಿಯಲ್ಲಿ ಗಮನಿಸಬಹುದಾಗಿದೆ ಎಂದು ಅವರು ವಿವರಿಸಿದರು.

ರಾಜ್ಯ ಹಟಗಾರ ಸಮಾಜದ ಸಂಸ್ಥಾಪಕರಾದ ಆರ್.ಸಿ.ಘಾಳೆ ಜ್ಯೋತಿ ಬೆಳಗಿಸಿ ಮಾತನಾಡಿದರು. ಅಕ್ಕಲಕೋಟ ಕೋಷ್ಟಿ ಸಮಾಜದ ಅಧ್ಯಕ್ಷೆ ಸುನಂದಾ ಅಷ್ಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಎಂ.ಎಚ್.ಬೆಳಮಗಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ವಿಶ್ವಕರ್ಮ ಏಕದಂಡಗಿ ಮಠಾಧೀಶರಾದ ಸುರೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಲೇಖಕ ಚಂದ್ರಶೇಖರ ಮಾಳಾ ಸ್ವಾಗತಿಸಿದರು. ವಿನೋದಕುಮಾರ ಜೆನೇವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಜ ಅಂಡಗಿ ನಿರೂಪಿಸಿದರು. ಹಿರಿಯ ಸಾಹಿತಿ ರಮೇಶ ಮಾಳಾ ವಂದಿಸಿದರು. ವಿಜಯಕುಮಾರ ಜುಂಜಾ, ಶಿವಲಿಂಗಪ್ಪ ಹಳ್ಳಿ, ರಾಜು ಕೋಷ್ಟಿ ಮುಂತಾದವರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago