ತಾಯಿ ಸಾವಿತ್ರಿ
ಕ್ರಾಂತಿಯ ಜ್ಯೋತಿ
ಬೆಳಗಿದ ತಾಯಿ
ಸಾವಿತ್ರಮ್ಮಗೆ ಜಯಕಾರ..
ತಾಯಿ ಸಾವಿತ್ರಮ್ಮಗೆ ಜಯಕಾರ..
ಸಾತಾರಾ ಜಿಲ್ಲೆಯ
ನಾಯಗಾಂವ ಗ್ರಾಮದಲಿ
ಜನಸಿದ ಅಮ್ಮಾ
ಜ್ಯೋತಿಬಾ ಜೊತೆಯಲಿ
ಜ್ಯೋತಿಯ ಬೆಳೆಗಲು
ಬಂದಳು ಪುಣೆಯಲಿ ಅಮ್ಮಾ.
ಪತಿಯ ಕನಸು ನನ್ನ ಕನಸು
ಅಬಲೆಯು ಸಬಲೆ ಆಗಲೇಬೇಕು
ಜ್ಞಾನವು ಆಕೆಗೆ ಕೊಡಲೇಬೇಕು
ಎನುತಾ ಕಲಿತಳು ಅಕ್ಷರಮಾಲೆ
ಹೊರಟಳು ಜೊತೆಯಲಿ
ಕಲಿಸಲು ಶಾಲೆ.
ಉಡುಗು ಮುಸುರಿ
ಕೊಳೆಯ ಕೆಲಸ
ಪತಿಯ ಮಕ್ಕಳ ಸೇವೆಗಿಂತ
ಓದು ಬಹಳ ಮುಖ್ಯ
ಸ್ವಾಭಿಮಾನದ ಬದುಕಿಗಾಗಿ
ಓದು ಬಹಳ ಮುಖ್ಯ
ಎನ್ನುತಾ ಕರೆದಳು ಶಾಲೆಯಲಿ..
ನಡೆದಳು ತಾನು ಜೊತೆಯಲ್ಲಿ.
ತಾಯಿ ಮಾತು ಕೇಳುತಲಿ
ನಡೆದಳು ಹೆಣ್ಣು ಶಾಲೆಯಲಿ
ಕ್ರಾಂತಿಯ ಕಾರ್ಯ ನೋಡುತಲಿ
ನೀಚರು ಬಂದರು ದಾರಿಯಲಿ
ಒಗೆದರು ಸೆಗಣಿ, ಎಸೆದರೂ ರಾಡಿ
ಭಯವು ಇಲ್ಲ, ಕೋಪವು ಇಲ್ಲ
ಇಟ್ಟ ಹೆಜ್ಜೆ ಹಿಂದಿಡಲಿಲ್ಲ.
ಶಾಲೆಗೆ ಹೋಗದ ತಾಯಿ
ಶಾಲೆ ತೆರೆದಳು ಮಹಾತಾಯಿ
ದಮನಿತರಿಗೆ ಶೋಷಿತರಿಗೆ
ಕೊಟ್ಟಳು ವಿದ್ಯೆ ಸಾರಿ
ಜ್ಞಾನವೇ ಶ್ರೇಷ್ಠ ಸಂಪತ್ತು
ವಿದ್ಯೆ ಅದರ ಚಿಲಕತ್ತು
ನಡೆಯಿರಿ ತಮ್ಮಾ ಶಾಲೆಗೆ
ಕಲಿಯಿರಿ ತಮ್ಮಾ ಅಕ್ಷರಮಾಲೆ
ದೇಶದ ಮೊದಲು ಶಿಕ್ಷಕಿ
ಹೆಣ್ಣು ಮಕ್ಕಳ ರಕ್ಷಕಿ
ಸಂಕಟ ಕಾಲದ ಸೇವಕಿ
ಸೇವೆ ಮಾಡುತ ಪ್ರಾಣವ ಬಿಟ್ಟ
ಕ್ರಾಂತಿ ಜ್ಯೋತಿ ಸಾವಿತ್ರಿ
ತಾಯಿ ನಿನಗೆ ಜಯಕಾರ
ಜ್ಞಾನದ ಜ್ಯೋತಿ ಬೆಳಗಿದ
ತಾಯಿ ನಿನಗೆ ಜಯಕಾರ…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…