ಆಳಂದನಲ್ಲಿ ಶಾಂತಿವನ ಚರ್ಚ್ ಲೋಕಾರ್ಪಣೆ

ಆಳಂದ: ಬಹು ಸಂಸ್ಕೃತಿಯ ನಾಡು ಭಾರತಕ್ಕೆ ಶಾಂತಿ ಸಹಬಾಳ್ವೆ ನೆಮ್ಮದಿಗಾಗಿ ಸರ್ವ ಧರ್ಮೀಯರು ಪ್ರೀತಿ ವಿಶ್ವಾಸದಿಂದ ಒಂದಾಗಿ ಸಹೋದರತ್ವ ಉಳಿಸಿ ಬೆಳೆಸಿಕೊಂಡು ದೇಶದ ಐಕತ್ಯತೆ ಮತ್ತು ಅಖಂಡತೆಗೆ ಒತ್ತು ನೀಡಬೇಕಾಗಿದೆ ಎಂದು ಕಲಬುರಗಿಯ ಚರ್ಚ್‌ನ ರೆವಡೆಂಡ್ ಬಿಷಪ್ ರಾಬರ್ಟ್ ಮೈಕೆಲ್ ಮಿರಾಂಡಾ ಅವರು ಹೇಳಿದರು.

ಪಟ್ಟಣದ ಕಲಬುರಗಿ ರಸ್ತೆಯಲ್ಲಿ ಶಾಂತಿವನ್ ಚರ್ಚ ಲೋಕಾರ್ಪಣೆ ಹಾಗೂ ಕ್ರಿಸ್‌ಮಸ್ ಹಾಗೂ ೨೦೨೧ನೇ ಸಾಲಿನ ಹೊಸವರ್ಷದ ಶುಭಾಷಯ ಕೋರುವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಲ್ಲ ಸಮುದಾಯದವರಿಗೂ ಒಬ್ಬೊಬ್ಬರು ದೇವರು ಇದ್ದೇ ಇರುತ್ತಾರೆ. ತಮ್ಮ, ತಮ್ಮ ದೇವರನ್ನು ನೆನೆಯಬೇಕು. ದಿನನಿತ್ಯ ಯೋಗ, ಧ್ಯಾನ, ಪೂಜೆ, ಪ್ರಾರ್ಥನೆಯಲ್ಲಿ ತೊಡಗಬೇಕು. ಪಟ್ಟಣದಲ್ಲಿ ಶಾಂತಿವನ್ ಚರ್ಚ್‌ನ ಮೂಲಕ ಪ್ರಾರ್ಥನೆ ಸೇರಿದಂತೆ ಮುಂದಿನ ದಿನಗಳಲ್ಲಿ ಜನಪರ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.

ಶರಣಿ ಮಹಾನಂದತಾಯಿ ಮುಗಳಿ ಅವರು ಮಾತನಾಡಿ, ತಾತ್ವಿಕ ನೆಲಕಟ್ಟಿನ ಮೇಲೆ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಾದಿ ಶರಣರು ಒಳಗೊಂಡು ಏಸು, ಬುದ್ಧ ಹೀಗೆ ಹಲವು ಮಹಾನ್‌ದಾರ್ಶನಿಕರ ತೋರಿದ ದಾರಿಯಲ್ಲಿ ಸಾಗಬೇಕು. ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣತೆಯನ್ನು ಮೈಗೂಡಿಸಿಕೊಂಡು ಸೃಷ್ಟಿಯ ನಿಯಮಗಳಿಗೆ ಬದ್ಧರಾಗಿ ನಡೆಯಬೇಕು ಎಂದರು.

ಮುಸ್ಲಿಂ ಧಾರ್ಮಿಕ ಮುಖಂಡ ಮೌಲಾ ಮುಸ್ತಾಕ್ ಅಹ್ಮದ್ ಅವರು ಮಾನಾಡಿ, ಮಥ, ಪಂಥಗಳ ಭೇದ ಮಾಡದೆ ಎಲ್ಲರು ಸೇರಿ ದೇವರು ತೋರಿದ ಮಾರ್ಗದಲ್ಲಿ ಮುನ್ನೆಡೆದು ಸುಂದರ ದೇಶವನ್ನು ಕಟ್ಟಬೇಕಾಗಿದೆ ಎಂದರು.

ಅಪ್ಪಾರಾವ್ ಪಾಟೀಲ, ಧರ್ಮಣ್ಣಾ ಪೂಜಾರಿ ಮತ್ತಿತರು ಮಾತನಾಡಿದರು.ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ, ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ, ಉದ್ಯಮಿ ಸಂತೋಷ ಗುತ್ತೇದಾರ, ಪತ್ರಕರ್ತ ಮಹಾದೇವ ವಡಗಾಂವ, ಮಲ್ಲಪ್ಪ ಹತ್ತರಕಿ, ದಯಾನಂದ ಶೇರಿಕಾರ, ಫೀರದೋಸ್ ಅನ್ಸಾರಿ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ, ಕೆಎಂಎಫ್ ನಿರ್ದೇಶಕ ಚಂದ್ರಕಾಂತ ಭೂಸನೂರ, ಅರವಿಂದ ಗುತ್ತೇದಾರ, ಮೌಲಾ ಮುಲ್ಲಾ, ಪಂಡಿತ ಬಳಬಟ್ಟಿ ಮತ್ತು ಪುರಸಭೆ ಸದಸ್ಯರು ಸೇರಿ ವಿವಿಧ ಸಮುದಾಯಗಳ ಮುಖಂಡರು ಪಾಲ್ಗೊಂಡಿದ್ದರು.

ಫಾದರ್ ಅನಿಲ್ ಸಿ. ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಫಾಧರ್ ವಿನ್‌ಸೆಂಟ್ ನಿರೂಪಿಸಿದರು. ಈ ಮೊದಲು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

3 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

21 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

21 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420