ಕಲಬುರಗಿ: ರಾಜ್ಯದ ವಿವಿಧ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಎಸ್.ಡಿ.ಪಿ.ಐ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಇಂದು ನಗರದ ಶಹಾದಾಬ್ ಫಂಕ್ಷನ್ ಹಾಲ್ ನಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಡಾ. ತಸ್ಲೀಮ್ ರಹೇಮಾನಿ ಸನ್ಮಾನಿಸಿ ಗೌರವಿಸಿದರು.
ಕಲಬುರಗಿ ಜಿಲ್ಲೆಯ ಶಹಾಬಾದ್ ವ್ಯಾಪ್ತಿಯ ಭಂಕೂರ್ ಗ್ರಾಮ ಪಂಚಾಯಿತಿಗೆ ಮುನೀರ ಖತೂನ್, ಶಿವಯೋಗಿ ಭಂಕೂರ್, ಗೌಸಿಯಾ ಬೇಗಂ ಭಂಕೂರ್, ಶಕೀಲ್ ಪಾಷಾ ಭಂಕೂರ್, ಅಂಜನಾ ಕೇಶವ್ ಭಂಕೂರ್ ಹಾಗೂ ಮೊಹಮ್ಮದ್ ಸಮೀರ್ ಮಾಧೋಲ್.
ಬಳ್ಳಾರಿ ಜಿಲ್ಲೆಯ ಕೋಟೆಯ ಹೈದರ್ ಅಲಿ, ಯಶ್ವಂತ ನಗರ ಯೂಸುಫ್. ಯಾದಗಿರಿ ಜಿಲ್ಲೆ: ಶಹಾಪುರ ತಾಲ್ಲೂಕಿನ ಗೋಗಿ ಕೆ ಗ್ರಾ. ಪಂಗೆ ನಬಿ ಖುರೇಷಿ. ಧಾರವಾಡ ಜಿಲ್ಲೆಯ ಬೆಟ್ಟದೂರು ಆಫ್ರೀಮ್ ಬಾನು. ಕೊಪ್ಪಳ ಜಿಲ್ಲೆಯ ಗುಂಡುರು ಗ್ರಾಮ ಪಂಚಾಯತಿಗೆ ರಸೂಲ್ ಬಿ, ಗಂಗಾವತಿಯ ಕಲಗೂಟಿಗೆ ಮೊಹಮ್ಮದ್ ಅಲಿ ಆಯ್ಕೆಯಾದ ಪಕ್ಷದ ಎಲ್ಲಾ ನೂತನ ಸದಸ್ಯರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪಕ್ಷದ ಜಿಲ್ಲಾ ಅಧ್ಯಕ್ಷರಾದ ಸೈಯದ್ ದಸ್ತಗೀರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿದ್ದು, ರಾಷ್ಟ್ರೀಯ ಕಾರ್ಯದರ್ಶಿ ತಸ್ಲೀಮ್ ರಹೇಮಾನಿ ವಿಶೇಷ ಅತಿಥಿಯಾಗಿ ಆಗಮಿಸಿ ಮಾತನಾಡಿ, ಪಿಎಫ್ಐ ಮುಖಂಡರ ಮನೆಯ ಮೇಲೆ ಬಿಜೆಪಿ ಸರಕಾರ ಟಾರ್ಗೆಟ್ ಮಾಡಿ ಬಂಧಿಸಿ ದೇಶ ಉಳಿವಿಗಾಗಿ ಇರುವ ನಮ್ಮ ಹೋರಾಟವನ್ನು ತಡೆಯುವ ಕುತಂತ್ರ ಇದ್ದಾಗಿದೆ. ಇದಕ್ಕೆ ನಮ್ಮ ಸದಸ್ಯರು ಜಗ್ಗಲ್ಲ, ಬಗ್ಗಲ್ಲ, ದೇಶಕ್ಕಾಗಿ ನಮ್ಮ ಜೀವಪಣ್ಣಕಿಟ್ಟು ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ರಾಜ್ಯ ಅಧ್ಯಕ್ಷ ಅಬ್ದುಲ್ ರಹೀಮ್ ಪಟೇಲ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಅಧ್ಯಕ್ಷ ಮೌಲಾನಾ ಅತೀಕುರ್ ರಹಮಾನ್, ಪಿಎಫ್ಐ ರಾಜ್ಯ ಖಜಾಂಚಿ ಶಾಹಿದ್ ನಸೀರ್, ಅಕ್ರಮ್ ಹಸನ್, ಮಹಿಳಾ ಚಳುವಳಿಯ ರಾಜ್ಯ ನಾಯಕಿ ಸೈಯದಾ ಸಾದಿಯಾ, ಪಿಎಫ್ಐ ಜಿಲ್ಲಾ ಅಧ್ಯಕ್ಷರಾದ ಶೇಕ್ ಅಜಾಜ್ ಅಲಿ, ಸೈಯದ್ ಖಾಲಿದ್, ಡಾ.ಸುಹೈಲ್ ನಾಯಕ್, ಮೊಹಮ್ಮದ್ ರಫೀಕ್, ಡಾ. ರಿಜ್ವಾನ್, ಮೌಲಾನಾ ಇಬ್ರಾಹಿಂ, ಎರ್. ಮೊಹಮ್ಮದ್ ಖಾಜಾ ಮೊಹ್ಸಿನುದ್ದೀನ್, ಸೈಯದ್ ಫಾರೂಕ್, ಮೌಲಾನಾ ಶಬ್ಬೀರ್ ಪಟೇಲ್, ರೆಹಾನಾ ಬೇಗಂ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…