ಕಲಬುರಗಿ: ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಬಿ.ಕೃಷ್ಣಮೂರ್ತಿ ಯವರನ್ನು ಜಿಲ್ಲೆಯ ಎಂಎಸ್ ಐ ಎಲ್ ಶಾಖಾ ಕಛೇರಿಗೆ ವರ್ಗಾವಣೆ ಮಾಡಿರುವುದನ್ನು ರದ್ದುಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಹಾಗೂ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷರಾದ ಜೈರಾಜ ಕಿಣಗಿಕರ್ ಅವರು ಜಂಟಿಯಾಗಿ ಒತ್ತಾಯಿಸಿದ್ದಾರೆ.
ಈ ಕುರಿತು ಮನವಿ ಮಾಡಿರುವ ಅವರು, ಕಳೆದ ಎರಡು ವರ್ಷಗಳ ಹಿಂದೆ ಬಿ.ಕೃಷ್ಣಮೂರ್ತಿ ಅವರನ್ನು ಎಂಎಸ್ ಐಎಲ್ ಶಾಖಾ ಕಛೇರಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಸರಕಾರಿ ಸಂಸ್ಥೆಯ ಹಿತದೃಷ್ಟಿಯನ್ನು ಗಮನಿಸದೇ ಸ್ವಹಿತಾಸಕ್ತಿಯಂತೆ ಕಾರ್ಯನಿರ್ವಾಹಿಸಿದರು.
ಖಾಸಗಿ ಮದ್ಯದಂಗಡಿಗಳ ಹತ್ತಿರದಲ್ಲಿ ಎಂಎಸ್ ಐಎಲ್ ಅಂಗಡಿಗೆ ಸ್ಥಳ ನೋಡುವ ನೆಪ ಮಾಡಿ ಲಂಚ ಸ್ವೀಕಾರ, ನೌಕರಿ ನೀಡುವುದಾಗಿ ಹಣ ಪಡೆದು ಶ್ರೀಮಂತರನ್ನು ನೇಮಕ ಮಾಡುವುದು, ಯಾವುದೇ ಶಿಪ್ಪಾರಸ್ಸುಗಳಿಲ್ಲದಿದ್ದರೂ ಅಸಹಾಯಕರನ್ನು ನಿರ್ಲಕ್ಷ್ಯಿಸುವುದು. ಎಂಎಸ್ ಐಎಲ್ ಸಂಸ್ಥೆಯ ಮಳಿಗೆಗಳಿಂದ ಒತ್ತಾಯವಾಗಿ ಹಣ ಪಡೆಯುವುದು ಮುಂತಾದ ದುರಾಡಳಿತದಿಂದ ಪ್ರಕರಣ ದಾಖಲಾಗಿ 21 ದಿನಗಳ ವರೆಗೆ ಜೈಲಿಗೆ ಹಾಗೂ ಸುಮಾರು ಏಳು ತಿಂಗಳ ಕಾಲ ಅಮಾನತ್ತಿಗೆ ಒಳಪಡಿಸಲಾಗಿತ್ತು ಎಂದು ವಿವರಿಸಿದರು.
ಬಿ.ಕೃಷ್ಣಮೂರ್ತಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹದಳದಲ್ಲಿ ವಿಚಾರಣೆ ಇತ್ಯರ್ಥವಾಗದೇ ಇದ್ದರೂ ಮತ್ತು ಒಂದು ಸ್ಥಳದಲ್ಲಿ ದಾಳಿಗೆ ಒಳಗಾದ ಅಧಿಕಾರಿಯ ಪ್ರಕರಣವನ್ನು ಇತ್ಯರ್ಥವಾಗದೇ ಅದೇ ಸ್ಥಳಕ್ಕೆ ನಿಯುಕ್ತಿಗೊಳಿಸುವಂತಿಲ್ಲ ಎಂಬ ಕಾನೂನು ಇದ್ದರೂ ಅದನ್ನೂ ಗಾಳಿಗೆ ತೂರಿ ಅಧ್ಯಕ್ಷರ ಶಿಫಾರಸ್ಸಿನೊಂದಿಗೆ ಮತ್ತೆ ವರ್ಗಾವಣೆ ಮಾಡಿಸಿಕೊಂಡು ಬಂದಿರುವುದು ಖಂಡನಾರ್ಹ ಎಂದು ಅವರು ಆಕ್ಷೇಪಿಸಿದರು.
ಹಣದ ದುರಾಸೆಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಖಾ ಮುಖ್ಯಸ್ಥ ಶಂಕ್ರಯ್ಯ ಎಂ.ಎಚ್ ಅವರನ್ನು ವರ್ಗಾವಣೆಗೊಳಿಸಿದ್ದು ಭ್ರಷ್ಟ ವ್ಯಕ್ತಿಗಳ ರೌದ್ರ ನರ್ತನವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಈ ಮಧ್ಯೆ ಕೃಷ್ಣಮೂರ್ತಿ ಅವರ ವಿರುದ್ಧ ದೂರು ಸಲ್ಲಿಸಿದ ವ್ಯಕ್ತಿ ಮತ್ತೆ ಭ್ರಷ್ಟಾಚಾರ ನಿಗ್ರಹದಳದವರಿಗೆ ದೂರು ಸಲ್ಲಿಸಿ ತನಗೆ ಪ್ರಾಣ ಭಯವಿದೆ. ಕರ್ತವ್ಯ ನಿರ್ವಹಿಸಲು ಭಯ ಇದೆ. ಬಿ.ಕೃಷ್ಣಮೂರ್ತಿ ಅವರ ಪ್ರಕರಣ ಇನ್ನೂ ಇತ್ಯರ್ಥವಾಗದೇ ಇರುವುದರಿಂದ ನನ್ನ ಎಲ್ಲಾ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಸ್ಥಳೀಯ ಶಾಖೆಗೆ ಬಿ.ಕೃಷ್ಣಮೂರ್ತಿ ಅವರನ್ನು ವರ್ಗಾವಣೆಗೊಳಿಸದೇ ಇರುವಂತೆ ಕೋರಿದರು ಸಹ ವರ್ಗಾವಣೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರ ಈ ಕೂಡಲೇ ಬಿ.ಕೃಷ್ಣಮೂರ್ತಿ ಅವರ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಈಗಿರುವ ಶಾಖಾ ಮುಖ್ಯಸ್ಥರನ್ನೇ ಮುಂದುವರೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…