ಬೆಂಗಳೂರು/ಕಲಬುರಗಿ: ಪ್ರೋತ್ಸಾಹ ಧನ ಕೊಟ್ಟು ತೊಗರಿ ಖರೀದಗೆ ಮುಂದಾಗುವಂತೆ ಸಿಎಂ ಯಡಿಯೂರಪ್ಪನವರಿಗೆ ವಿಧಾನ ಸಬೆ ವಿರೋಧ ಪಕ್ಷದ ಮುಕ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ ಡಾ. ಜಯ್ ಸಿಂಗ್ ಪತ್ರ ಬರೆದು ಗಮನ ಸೆಳೆದಿದ್ದಾರೆ.
ಕಲಬುರಗಿ ತೊಗರಿ ಕಣಜ. ಇಲ್ಲಿನ ರೈತರು ಬೆಳೆದ ಪ್ರಸಕ್ತ ಹಂಗಾಮಿನ ತೊಗರಿ ಖರೀದಿಗೆ ಅದಾಗಲೇ ತಮ್ಮ ಸರಕಾರ ಜಿಲ್ಲೆಯಲ್ಲಿ 153 ತೊಗರಿ ಖರೀದಿ ಕೇಂದ್ರ ಸ್ಥಾಪನೆ ಮಾಡಿದ್ದು ಹೆಸರು ನೋಂದಣಿ ಮಾಡಿಕೊಳ್ಳಲು ರೈತರಲ್ಲಿ ಕೋರಿದೆ, ಇದನ್ನು ಸ್ವಾಗತಿಸುತ್ತೇನೆ. ಆದರೆ ತೊಗರಿಗೆ ಕನಿಷ್ಠ 1, 500 ರು ಪ್ರೋತ್ಸಾಹ ಧನ ನೀಡುವ ಮೂಲಕ ಖರೀದಿಗೆ ಮುಂದಾಗಿರಿ ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ 113 ಖರೀದಿ ಕೇಂದ್ರಗಳನ್ನು ಹಾಗೂ ಕಲಬುರಗಿಯ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ 43 ಸೇರಿದಂತೆ ಒಟ್ಟು 153 ತೊಗರಿ ಖರೀದಿ ಕೇಂದ್ರಗಳ್ನು ಸ್ಥಾಪಿಸಲಾಗಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ತೊಗರಿ ಕಾಳು ಪ್ರತಿ ಕ್ವಿಂಟಾಲ್ಗೆ 6000 ರೂ.ಗಳ ದರದಲ್ಲಿ ಜಿಲ್ಲೆಯಲ್ಲಿ ರೈತರಿಂದ ಖರೀದಿಸಲು ಒಟ್ಟು 153 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಬೆಂಬಲ ಬೆಲೆಗೆ ವಾರ್ಷಿಕ ನೀಡುತ್ತಿದ್ದ ಪೆÂ್ರೀತ್ಸಾಹ ಧನದ ಮೊತ್ತ ಇದುವರೆಗೂ ಘೋಷಣೆಯಾಗಿರೋದಿಲ್ಲ. ಹಿಂದೆ ಕಾಂಗ್ರೆಸ್ ಸರ್ಕಾರ ಇದೀಗ ತೊಗರಿ ಖರೀದಿಗೆ ಬೆಂಬಲ ಬೆಲೆಗೆ ಕ್ವಿಂಟಾಲಿಗೆ 525 ರು ನಿಂದ 400 ರು ವರೆಗೂ ರಾಜ್ಯದ ಪಾಲಿನ ಪೆÇ್ರೀತ್ಸಾಹ ಧನ ಸೇರಿಸಿ ಕ್ವಿಂಟಾಲ್ ತೊಗರಿಗೆ ಬೆಲೆ ನಿಗದಿಪಡಿಸಿ ರೈತರಿಗೆ ಹಣ ನೀಡಲಾಗಿದೆ.
ಅದರಂತೆಯೇ ತಾವು ಇದೀಗ ತೊಗರಿ ರೈತರಿಗೆ 6 ಸಾ. ರು ಬೆಂಬಲ ಬೆಲೆಯ ಜೊತೆಗೇ ಪ್ರೋತ್ಸಾಹ ಧನ ರೂಪದಲ್ಲಿ ಕೊನೆ ಪಕ್ಷ 1, 500 ರು ನಿಗದಿಪಡಿಸಿ ಪ್ರತಿ ಕ್ವಿಂಟಾಲಿಗೆ 7, 500 ಸಾ. ರು ನಂತೆ ತೊಗರಿ ಖರೀದಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೊರೋನಾ ಕಾಲದಲ್ಲಿ ರೈತರು ಕಂಗಾಲಾಗಿದ್ದಾರೆ. ಅತಿವೃಷ್ಟಿ, ಮಳೆ, ನೆರೆಯಿಂದಲೂ ರೈತರು ಕಂಗಾಲಾಗಿದ್ದಾರೆ.ಕಲಬುರಗಿ ಭಾಗದಲ್ಲಂತೂ ಬಿತ್ತಿದ ತೊಗರಿ 3 ಹೆಕ್ರ್ಟ ಹಾಳಾಗಿದೆ. ಹೀಗಾಗಿ ತೊಗರಿ ಇಳುವರಿಗೂ ಹೊಡೆತ ಬಿದ್ದಿದೆ. ಅಳಿದುಲಿದ ಇಳುವರಿ ಬಂದಾಗ ಬೆಲೆ ಸೂಕ್ತವಾಗಿ ರೈತರಿಗೆ ದೊರಕಿದರೆ ಅವರಿಗೆ ಅನುಕೂಲವಾಗಲಿದೆ. ಖರೀದಿ ಕೇಂದ್ರಗಲು ಸ್ಥಾಪಿತವಾಗುತ್ತಿವೆ, ಹೆಸರು ನೋಂದಣಿಯೂ ಶುರುವಾಗಿದೆ, ಪ್ರಕ್ರಿಯೆ ಶುರುವಾಗುವ ಮುನ್ನವೇ ತಾವು ತೊಗರಿಗೆ ಪ್ರೋತ್ಸಾಹ ಧನ ಘೋಷಣೆ ಮಾಡಿ ತೊಗರಿ ರೈತರ ನೆರವಿಗೆ ಬರಬೇಕು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿ ಕ್ವಿಂ. ತೊಗರಿಗೆ ಗರಿಷ್ಠ 550 ರೂ.ವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ತಾವು ಬೀದರ್‍ಗೆ ಭೇಟಿ ನೀಡಿ ಪ್ರತಿ ರೈತರಿಂದ 20 ಕ್ವಿಂ. ತೊಗರಿ ಖರೀದಿಸುವುದಾಗಿ ಭರವಸೆ ನೀಡಿದ್ದರು. ಅವರ ಈ ಭರವಸೆಯೂ ಕೇವಲ ವೇದಿಕೆಗಷ್ಟೇ ಸೀಮಿತವಾಗಿದೆ ಎಂದು ಸಿಎಂ ಅವರನ್ನು ನೆನಪಿಸಿದ್ದಾರೆ.
ಈ ಬಾರಿ ಕಲಬುರಗಿಯಲ್ಲಿ ಸುರಿದ ಭಾರಿ ಮಳೆಯಿಂದ ತೊಗರಿ ಬೆಳೆಗಾರರು ಸಂಕಷ್ಟದಲ್ಲಿರುವಾಗಲೇ, ರಾಜ್ಯ ಸರ್ಕಾರವು ತೊಗರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನೂ ಕಿತ್ತುಕೊಂಡು ಅನ್ನದಾತರಿಗೆ ಅನ್ಯಾಯವೆಸಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿ ಕ್ವಿಂ. ತೊಗರಿಗೆ ಗರಿಷ್ಠ 550 ರೂ.ವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಇನ್ನಾದರೂ ಬಿಜೆಪಿ ಸರ್ಕಾರ ಪ್ರೋತ್ಸಾಹ ಧನ ನೀಡುತ್ತ ತೊಗರಿ ರೈತರ ನೆರವಿಗೆ ಓಡೋಡಿ ಬರಲಿ ಎಂದೂ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…