ಬಿಸಿ ಬಿಸಿ ಸುದ್ದಿ

ವಿಜ್ಞಾನಿ ಪದ್ಮಶ್ರೀ ಡಾ ಮೈಲುಸ್ವಾಮಿ ಅಣ್ಣದೊರೈ ಅವರಿಂದ ಎಲೆಕ್ಟ್ರಿಕ್ ವಾಹನಗಳ ಅನಾವರಣ

ಬೆಂಗಳೂರು: ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಕಸ್ಟಮೈಸೇಷನ್‌ ಮಾಡಿಕೊಳ್ಳುವಂತಹ ಅವಕಾಶ ನೀಡುವ ನೂತನ ವಿದ್ಯುತ್‌ ಚಾಲಿತ ವಾಹನಗಳು ಈ ಕ್ಷೇತ್ರದ ದಿಕ್ಕನ್ನೆ ಬದಲಾಯಿಸಲಿವೆ ಇಸ್ರೋ ನಿವೃತ್ತ ನಿರ್ದೇಶಕ, ತಮಿಳುನಾಡು ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯ ಉಪಾಧ್ಯಕ್ಷ, ಪದ್ಮಶ್ರೀ ಹಾಗೂ ಮಂಗಳಯಾನ ಮತ್ತು ಚಂದ್ರಯಾನ 1 ರಲ್ಲಿ ಪ್ರಮುಖ ಪಾತ್ರವಹಿಸಿದ ವಿಜ್ಞಾನಿ ಡಾ. ಮಹಿಲ್ ಸ್ವಾಮಿ ಅಣ್ಣಾ ದೊರೈ ಅಭಿಪ್ರಾಯಪಟ್ಟಿದ್ದಾರೆ.

ನಗರದ ನಾಗರಬಾವಿಯಲ್ಲಿ ಸಿ.ಕೆ ಮೋಟಾರ್ಸ್‌ ವತಿಯಿಂದ ಆಯೋಜಿಸಲಾಗಿದ್ದ ನೂತನ ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಬೈಸಿಕಲ್, ಎಲೆಕ್ಟ್ರಿಕ್ ಸುಪರ್‌ ಸ್ಪೀಡ್‌ ಬೈಕ್‌ ಮತ್ತು ತ್ರಿಚಕ್ರ ವಾಹನಗಳನ್ನು ಅನಾವರಣಗೊಳಿಸಿ ಮಾತನಾಡಿದರು. 120 ಕಿಲೋಮೀಟರ್‌ ಸ್ಪೀಡ್‌ ನಲ್ಲಿ ಚಲಾಯಿಸಬಹುದಾದ ಎಲೆಕ್ಟ್ರಿಕ್‌ ಸೂಪರ್‌ ಬೈಕನ್ನು ಪ್ರಶಂಸಿಸಿದ ಅಣ್ಣಾದೊರೈ ಅವರು, ಇಂಧನಗಳನ್ನು ಬಳಸಿ ಚಲಾವಣೆಯಾಗುತ್ತಿದ್ದ ವಾಹನಗಳಲ್ಲಿ ಹಲವಾರು ಬಗೆಯನ್ನು ನೋಡಬಹುದಾಗಿತ್ತು. ಈಗ ಅದೇ ರೀತಿಯ ವಿವಿಧ ಮಾಡೆಲ್‌ಗಳು ವಿದ್ಯುತ್‌ ಚಾಲಿತ ವಾಹನಗಳ ಕ್ಷೇತ್ರದಲ್ಲೂ ಬಂದಿವೆ. ಅಲ್ಲದೆ, ಗ್ರಾಹಕರು ತಮಗೆ ಬೇಕಾದ ರೀತಿಯಲ್ಲಿ ಕಸ್ಟಮೈಸೇಷನ್‌ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತಿವೆ. ಇಂತಹ ಹೊಸ ಆವಿಷ್ಕಾರಗಳಿಂದ ಮುಂದಿನ ದಿನಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಕ್ಷೇತ್ರದ ದಿಕ್ಕನ್ನೇ ಬದಲಾಯಿಸಲಿವೆ ಎಂದರು.

ಲೀಥೀಯಂ ಅಯಾನ್‌ ಬ್ಯಾಟರಿಯ ಬದಲಾಗಿ ಉಪಗ್ರಹ ಉಡಾವಣೆಯಲ್ಲಿ ಬಳಸಲಾಗುತ್ತಿರುವ ಫ್ಯೂಯಲ್‌ ಸೆಲ್‌ಗಳನ್ನು ವಾಹನಗಳಲ್ಲಿ ಅಳವಡಿಸುವ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಸಿ ಕೆ ಮೋಟಾರ್ಸ್‌ ಕಂಪನಿಯಲ್ಲಿ ಇಂತಹ ಸಂಶೋಧನೆ ಹಾಗೂ ಅಭಿವೃದ್ದಿಗಳು ನಡೆಯತ್ತಿದ್ದು, ಉಪಗ್ರಹಗಳಲ್ಲಿ ಬಳಸುತ್ತಿರುವ ತಂತ್ರಜ್ಞಾನ ವಾಹನಗಳಲ್ಲೂ ಬಳಸುವ ಸಮಯ ದೂರ ಇಲ್ಲ ಎಂದು ಹೇಳಿದರು.

ಸಿ.ಕೆ ಮೋಟಾರ್ಸ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್‌ ಮಾತನಾಡಿ, ಭಾರತದಲ್ಲಿನ ಪ್ರಮುಖ ಎಲೆಕ್ಟ್ರಿಕ್ ಆಟೋಮೋಬೈಲ್ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿರುವ ಸಿಕೆ ಮೋಟರ್ಸ್ ಅವುಗಳ ಡೀಲರ್ ಗಳ ನೆರವಿನಿಂದ ದೇಶಾದ್ಯಂತ ಬಹು ವಿಭಾಗೀಯ ಎಲೆಕ್ಟ್ರಿಕ್ ವಾಹನಗಳ ಶೋರೂಂ ಅನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ. ಸಿಕೆ ಮೋಟರ್ಸ್ ತನ್ನದೇ ಆದ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಕೊಯಮತ್ತೂರಿನ ಅವಿನಾಶಿ ರಸ್ತೆಯಲ್ಲಿರುವ ಕೊಯಮತ್ತೂರು ಘಟಕದಲ್ಲಿ ಬ್ರ್ಯಾಂಡ್ ಗಳಿಗೆ ಸಿಕೆಡಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲಿದೆ.

ಪ್ರಸ್ತುತ ಈ ಉತ್ಪನ್ನಗಳ ಗುಚ್ಛವು ಎಲೆಕ್ಟ್ರಿಕ್ ಬೈಸಿಕಲ್ ಗಳು, ಕಡಿಮೆ ವೇಗ ಮತ್ತು ಹೆಚ್ಚು ವೇಗದ ಸ್ಕೂಟರ್ ಗಳು, ಕಡಿಮೆ ವೇಗ ಮತ್ತು ಹೆಚ್ಚು ವೇಗದ ಬೈಕ್ ಗಳು ಹಾಗೂ ಎಲ್ 5 ವಿಭಾಗದಲ್ಲಿ ತ್ರಿಚಕ್ರ ವಾಹನಗಳನ್ನು ಒಳಗೊಂಡಿರುತ್ತದೆ. ಬೆಂಗಳೂರಿನಲ್ಲಿ ಸಿಕೆ ಮೋಟರ್ಸ್ ಡೀಲರ್ ಸಂಸ್ಥೆಯಾಗಿರುವ ಮೆಸರ್ಸ್ ಎಸ್ ಪಿ ಮೋಟರ್ಸ್ ಶೋರೂಂನಲ್ಲಿ ತ್ರಿಚಕ್ರ ವಾಹನಗಳು ಮತ್ತು ಅಧಿಕ ವೇಗದ ಸ್ಪೋರ್ಟ್ಸ್ ಬೈಕ್ ಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಹೇಳಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago