ಬಿಸಿ ಬಿಸಿ ಸುದ್ದಿ

ಸ್ವಾಮಿ ವಿವೇಕಾನಂದರ ತತ್ವಗಳು ಎಂದೆಂದಿಗೂ ಸಾರ್ವಕಾಲಿಕ : ದಸ್ತಿ

ಕಲಬುರಗಿ: ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳು ಎಂದೆಂದಿಗೂ ಸಾರ್ವಕಾಲಿಕ.ಅಧ್ಯತ್ಮದ ತಳಹದಿ ಮೇಲೆ ದೇಶಾಭಿಮಾನಿಯಾಗಿ ಯುವಕರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಿದರು ಎಂದು ಹಿರಿಯ ಹೋರಾಗಾರರಾದ ಲಕ್ಷ್ಮಣ ದಸ್ತಿ ತಿಳಿಸಿದರು.

ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಎಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂಬ ಘಂಟ ಘೋಷ ದೊಂದಿಗೆ ಯುವಕರನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದ ಅವರು ವಿದ್ಯಾರ್ಥಿಗಳಲ್ಲಿ ಶೃದ್ಧೆ,ಸತತ ಪ್ರಯತ್ನ, ಅಭ್ಯಾಸದಿಂದ ಅಸಾಧ್ಯ ವಾದದ್ದು ಸಾಧ್ಯವಾಗುತ್ತದೆ ಎಂದು ತಿಳಿಹೇಳುತ್ತಿದ್ದರು ಎಂದರು.

ಅವರಲ್ಲಿದ್ದ ದೇಶಾಭಿಮಾನ ಮೆಚ್ಚುವಂಥದ್ದು.ದೇಶಾದ್ಯಂತ ಬರಿ ಕಾಲಲ್ಲಿ ಸಂಚರಿಸಿ ದೇಶದ ಸ್ಥಿತಿ ಗತಿಯ ಬಗ್ಗೆ ಅಧ್ಯಯನ ಮಾಡಿದರು.ಕೃಷಿಕರು ಮತ್ತು ಯುವಕರಿಗೆ ಮಾರ್ಗದರ್ಶನ ನೀಡಿದ್ದ ಅವರು ಕೃಷಿಯನ್ನು ಒಂದು ಉದ್ಯಮವನ್ನಾಗಿ ಪರಿಗಣಿಸಿ ಎಂದು ಪ್ರತಿಪಾದಿಸಿದ್ದರು.ಇಂದಿನ ಯುವಕರು ವಿವೇಕಾನಂದರ ಉಪದೇಶ ಪಾಲಿಸಬೇಕು ಎಂದರು.

ಇಷ್ಷೇ ಅಲ್ಲದೆ ವಿದೇಶಗಳಲ್ಲೂ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳಿಗೆ ಇಂದಿಗೂ ಮನ್ನಣೆ ಇದೆ. ಅಮೇರಿಕದಂಥ ಮುಂದುವರಿದ ರಾಷ್ಟ್ರಗಳಲ್ಲಿ ಅವರ ತತ್ವ ಆದರ್ಶಗಳ ಬಗ್ಗೆ ಚರ್ಚೆ, ಚಿಂತನೆ ನಡೆದಿದೆ ಎಂದರು.

ಹಿರಿಯ ಚಿಂತಕ ಡಾ. ಬಸವರಾಜ ಕುಮ್ಮನೂರ, ಹೋರಾಟಗಾರ ಲಿಂಗರಾಜ ಸಿರಗಾಪೂರ, ಆದಿನಾಥ ಹೀರಾ, ಎ.ಎಸ್.ಭದ್ರಶೆಟ್ಟಿ, ವಿರೇಶ ಪುರಾಣಿಕ, ಜ್ಞಾನಮಿತ್ರ,ಎಚ್. ಎಂ.ಹಾಜಿ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಮಹಿಳಾ ಹರಿದಾಸ ಸಾಹಿತ್ಯದ ವಿಶೇಷ ಅಧ್ಯಯನದ ಅವಶ್ಯಕತೆ ಇದೆ: ವಿದ್ವಾಂಸ ಗುಂಡೂರು ಪವನಕುಮಾರ

ಕಲಬುರಗಿ: ಮಹಿಳಾ ಹರಿದಾಸ ಸಾಹಿತ್ಯ ಅತ್ಯಂತ ಕಡೆಗಣಿಸಲ್ಪಟ್ಟ ಸಾಹಿತ್ಯವಾಗಿದ್ದು, ಮಹಿಳಾ ಹರಿದಾಸರ ಕೀರ್ತನೆಗಳ ಆಳವಾದ ಅಧ್ಯಯನದ ಅವಶ್ಯಕತೆ ಇದೆ ಎಂದು…

8 hours ago

ಮನೆಯ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ: 1.814 ಕೆಜಿ ಗಾಂಜಾ ಜಪ್ತಿ

ಕಲಬುರಗಿ; ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 1.814 ಕೆಜಿ ಗಾಂಜಾವನ್ನು ಜಪ್ತಿ ಮಾಡಿಕೊಂಡಿರುವ ಘಟನೆ ಅಫಜಲಪೂರ ತಾಲ್ಲೂಕಿನ ಕರಜಗಿ…

8 hours ago

ಅಲ್ಟಾಟೇಕ್ ಸಿಮೆಂಟ್ ಕಂಪೆನಿಯಿಂದ ಸಾರ್ವಜನಿಕ ಸಭೆ; ದಲ್ಲಾಳಿಗಳ ಕಡಿವಾಣಕ್ಕೆ ಆಗ್ರಹ

ಚಿತ್ತಾಪುರ: ಅಲ್ಟ್ರಾಟೇಕ್ ಸಿಮೆಂಟ್ ಲಿಮಿಟೆಡ್ ಕಂಪೆನಿಯವರು ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ವ್ಯಾಪ್ತಿಯಲ್ಲಿ ಸುಣ್ಣದ ಗಣಿಗಾರಿಕೆ ಸ್ಥಾಪಿಸಲು ರೈತರಿಂದ ೭೮೬.೩೨…

9 hours ago

ಕಾಳಗಿ; ಹವ್ಯಾಸಿ ರಂಗಭೂಮಿ ಕಲಾ ಬಳಗದಿಂದ ಸನ್ಮಾನ

ಕಾಳಗಿ; ತಾಲೂಕಿನ ಹವ್ಯಾಸಿ ರಂಗಭೂಮಿ ಕಲಾ ಬಳಗ ವತಿಯಿಂದ ಕರ್ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಂಕರ ಜೀ ಹಿಪ್ಪರಗಿ ಹಾಗೂ…

9 hours ago

ಮಾಧುರ್ಯ ಸಂಗೀತ ವಿದ್ಯಾಲಯದ ಪ್ರಥಮ ವಾರ್ಷಿಕೋತ್ಸವ

ಕಲಬುರಗಿ: ನಗರದ ಹರಳಯ್ಯ ಸಮುದಾಯ ಭವನದಲ್ಲಿ ಮಾಧುರ್ಯ ಸಂಗೀತ ವಿದ್ಯಾಲಯದ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ಹಿಂದೂಸ್ತಾನಿ ಸಂಗೀತ ಗಾಯಕ ರಮೇಶ್…

9 hours ago

ಮನದ ಮೈಲಿಗೆ ಕಳೆದ ಮಡಿವಾಳ ಮಾಚಿದೇವರು

ಕಲಬುರಗಿ: ಬಸವಣ್ಣನವರ ಹಿರಿಯ ಸಮಕಾಲೀನರಾದ ಮಡಿವಾಳ ಮಾಚಿದೇವರು ಕೇವಲ ಬಟ್ಟೆಗಂಟಿದ ಕೊಳೆ ಮಾತ್ರ ತೊಳೆಯಲಿಲ್ಲ. ಮನಕ್ಕೆ ಅಂಟಿದ ಮೈಲಿಗೆ ಕೂಡ…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420