ಚಿತ್ತಾಪುರ: ಸ್ವಾಮಿ ವಿವೇಕಾನಂದ ಯುವಕರ ಕಣ್ಮಣಿಯಾಗಿದ್ದಾರೆ ಇಂದಿನ ಯುವಜನಾಂಗಕ್ಕೆ ವಿವೇಕಾನಂದರ ಸಂದೇಶ ಅವಶ್ಯಕತೆ ಇದೆ ಎಂದು ಪ್ರೊ. ಅನೀಲಕುಮಾರ ಮಂದೋಲಕರ ಹೇಳಿದರು.
ಚಿತ್ತಾಪುರ ತಾಲ್ಲೂಕಿನ ಶ್ರೀ ಆರ್ ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು “ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಸಾವಿತ್ರಿ ಕುಲಕರ್ಣಿ ಮಾತನಾಡಿ ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕ್ಯಾಗೋ ಸರ್ವಧರ್ಮ ಸಮೇಳನದಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಭಾಗವಹಿಸಿ ಜಾಗತಿಕ ಮಟ್ಟದಲ್ಲಿ ಭಾರತದ ಸಂಸ್ಕೃತಿಯನ್ನು ಪರಿಚಯಿಸಿದ ಮಹಾನ ಮೇದಾವಿಗಳೆಂದು ಅವರು ಬಣ್ಣಿಸಿದರು. ಡಾ. ಭಾಗ್ಯಲಕ್ಷ್ಮಿ ರೆಡ್ಡಿ ಮಾತನಾಡಿ ಯೌವನ ಎನ್ನುವದು ಬಹಳ ಹೊತ್ತು ಇರುವದಿಲ್ಲ ಅದು ಇರುವಾಗ ಕ್ರಿಯಾಶೀಲತೆಯಿಂದ ಇರಬೇಕು ಸರ್ವ ಧರ್ಮ ಪ್ರೀತಿಸುವ ಗುಣ ಬೆಳಸಿಕೊಳ್ಳಬೇಕು ಸ್ವಾಮಿ ವಿವೇಕಾನಂದರು ಬಾಲ ಬ್ರಹ್ಮಚಾರಿಯಾಗಿ ತಮ್ಮ ಜೀವನದುದ್ದಕೂ ದೇಶಕ್ಕಾಗಿ ಅವಿರತವಾಗಿ ಶ್ರಮಿಸಿದ್ದಾರೆ, ಅವರು ಬದಕಿದ್ದು ಕಡಿಮೆ ದಿನಗಳಾದರೂ ಮಾಡಿರುವ ಸಾಧನೆ ಅಮೋಗವಾಗಿದೆ ಇಂದಿನ ಯುವ ಜನಾಂಗ ಅವರ ತತ್ವಗಳನ್ನು ಅರಿತುಕೊಂಡು ಬದಕು ಸಾಗಿಸಬೇಕಾಗಿರುವುದು ತುಂಬಾ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಡಾ. ವಿಜಯಕುಮಾರ ಸಾಲಿಮನಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಡಾ. ಪಂಡಿತ ಬಿ ಕೆ, ಡಾ. ಲಕ್ಷ್ಮಿಕಾಂತ ಶಿರೊಳ್ಳಿ, ಪೂಜಾ ಹೊನ್ನಟಗಿ, ಸಾವಿತ್ರಿ ದೇಸಾಯಿ ಇತರರು ಇದ್ದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಾಮಾಜಿಕ ಅನಂತರ ಕಾಪಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…