ಕುಕನೂರ (ಕೊಪ್ಪಳಜಿಲ್ಲೆ): ವಿದ್ಯಾರ್ಥಿ- ಯುವಜನತೆಯಲ್ಲಿ ಸ್ವಾಭಿಮಾನ, ದೇಶಪ್ರೇಮದ ಕಿಚ್ಚು ಹಚ್ಚಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರು “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂಬ ಘೋಷಣೆ ಸಮಾಜದಲ್ಲಿ ಪ್ರತಿಯೊಬ್ಬರನ್ನು ಬಡಿಡೆಬ್ಬಿಸುವ ಮೂಲಕ ಸ್ಫೂರ್ತಿ ನೀಡುವಂತಹ ಮಾತು ಇಂದಿಗೂ ಎಲ್ಲರನ್ನೂ ಅನ್ವಯಿಸುತ್ತೇ ಎಂದು ಕಲಬುರ್ಗಿಯ ಸಾಮಾಜಿಕ ಹೋರಾಟಗಾರ ಭೀಮಾಶಂಕರ ಪಾಣೇಗಾಂವ ತಿಳಿಸಿದರು.
ಅವರು ಪಟ್ಟಣದ ವಿದ್ಯಾನಂದ ಗುರುಕುಲ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ವಿದ್ಯಾರ್ಥಿಗಳು ಸತತ ಅಧ್ಯಯನ, ಪರಿಶ್ರಮ, ಆತ್ಮವಿಶ್ವಾಸ, ಧ್ಯಾನ ಮತ್ತು ಏಕಾಗ್ರತೆ ಕುರಿತು ವಿವೇಕಾನಂದರ ಪುಸ್ತಕಗಳನ್ನು ಓದಬೇಕು ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ ಆದರ್ಶವಿಲ್ಲದೆ ಬದುಕಿದ್ದರೆ ಬದುಕಿಗೆ ಅವಮಾನ ಎಂಬ ಮಹತ್ವದ ಘೋಷವಾಕ್ಯ ಮೂಲಕ ಮನುಷ್ಯನಿಗೆ ಸಾಧನೆ ಮಾಡಲು ಪ್ರೇರಣೆ ನೀಡಿದರು ಎಂದರು. ನಿಜವಾದ ಯುವಕರ ಸರ್ವಾಂಗೀಣ ಅಭಿವೃದ್ಧಿ ಅಭಿವೃದ್ಧಿಯಾಗಬೇಕು ದೇಶಕಟ್ಟುವ ಯುವಕರ ಪಾತ್ರ ಅತ್ಯಂತ ಮುಖ್ಯವಾಗಿದೆ. ಜಾತಿ ಧರ್ಮ ಭೇದ ಭಾವ ತೋರಿದ ಎಲ್ಲರೂ ಮನುಷ್ಯರಾಗಿ ಬಾಳಬೇಕು ಎಂದು ವಿವೇಕಾನಂದರು ಹೇಳಿದ ಮಾತು ಇಲ್ಲಿ ಸ್ಮರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಉಪಪ್ರಾಂಶುಪಾಲರಾದ ಸೋಮಶೇಖರ ಎಲ್ ಲಮಾಣಿ ಮಾತನಾಡಿ ‘ರಾಮಕೃಷ್ಣ ಪರಮಹಂಸರ ಅಪ್ಪಟ ಶಿಷ್ಯರಾಗಿ ಅದ್ಭುತ ಒಂದು ಜ್ಞಾನದ ಶಕ್ತಿಯಾಗಿ ಹೊರಹೊಮ್ಮಿದರು ಮತ್ತು ಅವರ ಸಲಹೆ ಮಾರ್ಗದರ್ಶನ ಚಾಚೂ ತಪ್ಪದಂತೆ ಪಾಲಿಸುತ್ತಿದ್ದರು ಎಂದರು. ಅದೇ ರೀತಿ ಗುರು-ಶಿಷ್ಯರ ಸಂಬಂಧ ಇಂದಿನ ವಿದ್ಯಾರ್ಥಿ ಶಿಕ್ಷಕರ ಮಧ್ಯೆ ಆಗಬೇಕು ಎಂದರು. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದಲ್ಲಿನ ಹಳೆಯ ರೂಢಿಗಳು, ಕಂದಚಾರ. ಮತ್ತು ಸಂಪ್ರದಾಯ ಮೌಲ್ಯಗಳನ್ನು ವಿರೋಧಿಸಿ ಭಾರತ ದೇಶ ಬಲಿಷ್ಠ ಹೊಸ ರಾಷ್ಟ್ರ ಕಟ್ಟುವಲ್ಲಿ ವಿವೇಕಾನಂದರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿಗಳಾದ ರಾಜು ಪೂಜಾರ, ಉಮಾ ದೇಸಾಯಿ, ಗೀತಾ ಪದಕಿ, ಆರ್. ಎಮ್.ದೇವರೆಡ್ಡಿ, ಶ್ರೀಲತಾ ಕೆ, ವಿದ್ಯಾಪತಿ ಅರುಂದತಿ ಬಟನೂರ,ಮಂಜುನಾಥ್ ಲಿಂಗದಳಿ ಜ್ಯೋತಿ, ಪೂಜಾ ಪಾಟೀಲ್, ಚನ್ನಯ್ಯ ಹಿರೇಮಠ್ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…