ಶಹಾಬಾದ:ನಗರದಲ್ಲಿ ನೈರ್ಮಲ್ಯದ ನಿರ್ವಹಣೆ ಸಾಧಿಸುವುದು ಅತೀ ಅವಶ್ಯಕವಾಗಿದ್ದು, ನಗರಸಭೆ ಈ ನಿಟ್ಟಿನಲ್ಲಿ ಎಂದಿಗಿಂತಲೂ ಸಕ್ರಿಯವಾಗಿ ತಮ್ಮದೇಯಾದಂತಹ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಮಾರ್ಗಗಳನ್ನು ರೂಪಿಸಿಕೊಳ್ಳುತ್ತಿದೆ ಅದಕ್ಕೆ ವ್ಯಾಪಾರಸ್ಥರ ಸಲಹೆ ಸೂಚನೆ ಪಡೆಯಬೇಕಾಗಿದೆ ಎಂದು ನಗರಸಭೆಯ ವಿಶೇಷ ಐಎಎಸ್ ಅಧಿಕಾರಿ ಡಾ.ಆಕಾಶ ಶಂಕರ ಹೇಳಿದರು.
ಅವರು ಸೋಮವಾರ ನಗರಸಭೆಯಲ್ಲಿ ಆಯೋಜಿಸಲಾದ ಘನತ್ಯಾಜ್ಯ ನಿರ್ವಹಣೆ ಕುರಿತು ವ್ಯಾಪಾರಸ್ಥರೊಂದಿಗೆ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.
ಘನ ತ್ಯಾಜ್ಯ ನಿರ್ವಹಣೆ ಸ್ಥಳದಲ್ಲಿಯೇ ಹಸಿ ಮತ್ತು ಒಣ ತ್ಯಾಜ್ಯವನ್ನು ವರ್ಗೀರಿಸಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.ಅದಕ್ಕೆ ಬೇಕಾದ ಕಸ ಸಂಗ್ರಹ ಮಾಡುವ ಆಟೋಗಳು, ಟಿಪ್ಪರ್ ಇದ್ದು ಇದ್ದು, ಸಿಬ್ಬಂದಿಗಳು ಪ್ರತಿಯೊಂದು ವಾರ್ಡಗೆ ತೆರಳಿ ಕಸ ಸಂಗ್ರಹಕ್ಕೆ ಮುಂದಾಗುತ್ತಾರೆ.ಆದರೆ ಸಾರ್ವಜನಿಕರು ಮಾತ್ರ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಖವಾಗಿ ನೀಡಬೇಕಾಗಿದೆ ಎಂದು ತಿಳಿಸಿದರು.ಅದಕ್ಕಾಗಿ ತಮ್ಮೇಲ್ಲರ ಸಲಹೆ-ಸೂಚನೆಗಳನ್ನು ತಿಳಿಸಿ ಎಂದು ಹೇಳಿದರು.
ವ್ಯಾಪಾರಸ್ಥರ ಸಂಘದ ಪರವಾಗಿ ಅರುಣ ಪಟ್ಟಣಕರ್ ಮಾತನಾಡಿ, ನಗರಸಭೆಯ ವ್ಯಾಪ್ತಿಯ ಕಸ ಸಾಗಾಟಕ್ಕೆ ಸರಿಯಾದ ಪ್ರಮಾಣದಲ್ಲಿ ವಾಹನ ವ್ಯವಸ್ಥೆ ಇಲ್ಲ, ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರಿಂದ ಕೇಳಿ ಬರುತ್ತಿತ್ತು.ಈಗ ಸ್ವಲ್ಪ ಸುಧಾರಣೆಗೊಂಡಿದೆ.ಆದರೆ ಇಂಡಿಯಾ ಲಾಡ್ಜ್ ಹತ್ತಿರ, ರಾಘವೇಂದ್ರ ಮಂದಿರ ರಸ್ತೆ, ಗಾಂಧಿ ವೃತ್ತ, ಯಲಶೆಟ್ಟಿ ಆಸ್ಪತ್ರೆ ಹತ್ತಿರ, ಇಎಸ್ಐ ಆಸ್ಪತ್ರೆ ಹತ್ತಿರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಹೆಚ್ಚು ಸಂಗ್ರಹವಾಗುತ್ತದೆ.ಆದ್ದರಿಂದ ಇಲ್ಲಿ ಮೇಲಿಂದ ಮೇಲೆ ಹೆಚ್ಚು ತ್ಯಾಜ್ಯ ವಿಲೇವಾರಿ ಮಾಡಿ.ಉಳಿದ ಸ್ಥಳಗಳಲ್ಲಿ ದಿನಬಿಟ್ಟು ದಿನ ವಿಲೇವಾರಿ ಮಾಡುವಂತೆ ತಿಳಿಸಿದರು.
ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ನಗರದಲ್ಲಿ ಕಸ ಸಾಗಾಟಕ್ಕೆ ವಾಹನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ನಗರಸಭೆಯ ಸಿಬ್ಬಂದಿಗಳ ಜತೆಜತೆಯಾಗಿ ಗುತ್ತಿಗೆ ಆಧಾರದ ಪೌರಾಕಾಮರ್ಿಕರನ್ನು ತೆಗೆದುಕೊಳ್ಳಲಾಗಿದೆ.ದಿನನಿತ್ಯ ನಮ್ಮ ಪೌರಕಾಮರ್ಿಕರು ಮನೆಮನೆಗೆ ತೆರಳಿ ಕಸ ಸಂಗ್ರಹ ಮಾಡಲು ಮುಂದಾಗುತ್ತಾರೆ.ಅದನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ನೈರ್ಮಲ್ಯ ನಿರೀಕ್ಷರು ಹೆಚ್ಚಿನ ಕಾಳಜಿ ವಹಿಸಲು ಆದೇಶ ನೀಡಲಾಗುತ್ತದೆ ಎಂದು ಹೇಳಿದರು.ಪರಿಸರ ಅಭಿಯಂತರ ಅಭಯಕುಮಾರ ಘನತ್ಯಾಜ್ಯ ವಿಲೇವಾರಿ ಕುರಿತು ತಿಳಿಸಿದರು.
ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ, ವ್ಯಾಪಾರಸ್ಥರಾದ ಅಣವೀರ ಇಂಗಿನಶೆಟ್ಟಿ, ರವಿಕುಮಾರ, ಎಇಇ ಪುರುಷೋತ್ತಮ, ಎಇ ಶಾಂತರೆಡ್ಡಿ, ನಗರಸಭೆಯ ಕಛೇರಿ ವ್ಯವಸ್ಥಾಪಕ ಶಂಕರ ಇಂಜನಗೇರಿ, ಸಮುದಾಯ ಸಂಘಟನಾ ಅಧಿಕಾರಿ ರಘುನಾಥ ನರಸಾಳೆ, ಕಂದಾಯ ಅಧಿಕಾರಿ ಸುನೀಲ ವೀರಶೆಟ್ಟಿ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಜೆಇ ಬಸವರಾಜ, ನೈರ್ಮಲ್ಯ ನಿರೀಕ್ಷರಾದ ಶರಣು, ರಾಜೇಶ, ಶಂಕರ, ಅನಿಲ ಹೊನಗುಂಟಿಕರ,ಉಣೇಶ ದೊಡ್ಡಮನಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…