ಕಲಬುರಗಿ : ರೈತರು ಸಸ್ಯ ಜೀವಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಭೂತಾಯಿಯನ್ನು ಆರಾಧಿಸಿ, ಹೊಲದಲ್ಲಿ ಸಾಮೂಹಿಕ ಪೂಜೆ ಮತ್ತು ಭೋಜನ ಮಾಡುವುದು, ಬೆಳೆಗೆ ನಮಿಸಿ, ಗೌರವಿಸುವ ಸಂಕೇತ ಎಳ್ಳ ಅಮವಾಸ್ಯೆಯಾಗಿದೆಯೆಂದು ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಅಭಿಪ್ರಾಯಪಟ್ಟರು.
ಸೇಡಂ ತಾಲ್ಲೂಕಿನ ತರನಳ್ಳಿ ಗ್ರಾಮದಲ್ಲಿರುವ ಶಿವರಾವ ಭೋವಿ ಅವರ ಹೊಲದಲ್ಲಿ ’ಕನ್ನಡ ಜಾನಪದ ಪರಿಷತ್’ ಮತ್ತು ’ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಕಜಾಪ ತಾಲ್ಲೂಕಾ ಘಟಕವು ಬುಧವಾರ ಹಮ್ಮಿಕೊಂಡಿದ್ದ ’ಎಳ್ಳ ಅಮವಾಸ್ಯೆ ಸಂಭ್ರಮ’, ’ಶರಣ ವಕ್ಕಲಿಗ ಮುದ್ದಣ್ಣ ಜಯಂತಿ’ಯ ಮತ್ತು ಪ್ರಗತಿಪರ ರೈತರಿಗೆ ಸತ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಬರುವ ಯವ್ವಾ ! ಒಕ್ಕಲಿಗ್ಯಾನ ಹೆಂಡಿತಿನಾನ, ಚರಗ ಹೊಡೀಬೇಕ ಎಳ್ಳಮಾಸಿ ದಿನ ಎಂದು ತಿಳಿಸಿರುವಂತೆ ಇದು ರೈತರ ಹಬ್ಬವಾಗಿದೆ. ಕುಟುಂಬ ಸಮೇತ ಜೊತೆಗೆ ತಮ್ಮ ಸ್ನೇಹಿತ, ಬಂಧು ಬಾಂಧವರನ್ನು ತಮ್ಮ ಹೊಲಕ್ಕೆ ಕರೆದುಕೊಂಡು ಹೋಗಿ ಚರಗವನ್ನು ಬೀರಿ, ಸಾಮೂಹಿಕವಾಗಿ ಭೋಜನ ಸವಿಯಲಾಗುತ್ತೆದೆ. ಎಳ್ಳ ಅಮವಾಸ್ಯೆ ನಂತರ ಚಳಿಯು ಕಡಿಮೆಯಾಗುತ್ತಾ ಹೋಗಿ ಎಳ್ಳಕಾಳಿನಷ್ಟು ಬಿಸಿಲು ಹೆಚ್ಚಾಗುತ್ತಾ ಹೋಗುತ್ತದೆ ಎಂಬುವದರಿಂದ ಇದಕ್ಕೆ ಎಳ್ಳ ಅಮವಾಸ್ಯೆಯೆಂದು ಹೆಸರು ಪಡೆದಿದೆ. ಶರಣ ವಕ್ಕಲಿಗ ಮುದ್ದಣ್ಣನವರು ಕೃಷಿ ಕಾಯಕದ ಮಹತ್ವವವನ್ನು ನೂರಾರು ವರ್ಷಗಳ ಹಿಂದೆಯೆ ಸಾರಿದ್ದಾರೆ. ’ಕಾಮಭೀಮ ಜೀವಧನದೊಡೆಯ’ ಎಂಬ ಅಂಕಿತದೊಂದಿಗೆ ವಚನಗಳನ್ನು ರಚಿಸಿದ್ದಾರೆಂದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಭೋಗಪ್ಪ ಬೋಳದ ಮತ್ತು ಅರ್ಜುನ ಚನ್ನೀರ್ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಜಾನಪದ ಗೀತೆಗಳನ್ನು ಹಾಡಲಾಯಿತು.
ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾ ಸದಸ್ಯರಾದ ಈರಗಪ್ಪ ಬರಗಲಿ, ಶಿವಶಂಕರ ಬಿ., ತಾಲೂಕಾ ಘಟಕದ ಅಧ್ಯಕ್ಷ ಶಿವರಾವ ಭೋವಿ, ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ಬಸವರಾಜ ಎಸ್.ಪುರಾಣೆ, ಡಾ.ಸಾಬಯ್ಯ ಭೋವಿ, ಬಸವರಾಜ ತಾಂಡೂರಕರ್, ತಿಪ್ಪಣ್ಣ ಚಿಲಕನೂರ್, ರಾಜಕುಮಾರ ಚನ್ನೀರ್, ಹಣಮಂತರಾವ ರಾಜೋಳಕರ್, ಉಮಾಕಾಂತ ಕಲಬುರ್ಗಿ, ನಾಗಮ್ಮ, ಜಗದೇವಿ, ಪಾರ್ವತಿ, ಜಯಶ್ರೀ, ಲಕ್ಷ್ಮೀ, ರಾಜು ತ್ರ್ರಿಕೂಳ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…