ಕಲಬುರಗಿ: ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಅಧಿಕಾರಿ ಕಚೇರಿ ಎದುರು ನಡೆಯುತ್ತಿರುವ ರೈತ ಸಂಘದ ಧರಣಿ ಸತ್ಯಾಗ್ರಹದಲ್ಲಿ ರೈತ ಹೋರಾಟಗಾರ ಕಾಂ ಕಲ್ಲಪ್ಪ ಚಿಲಿಯವರಿಗೆ ಗೌರವ ಶ್ರದ್ದಾಂಜಲಿ ಸಭೆ ಜರುಗಿತು.
ಸಭೆಯಲ್ಲಿ ಹೋರಾಟಗಾರರಾದ ಸುನೀಲ ಮಾನಪಡೆ ಮತನಾಡಿ, ರೈತ ಸಂಘದ ಮುಖಂಡರು ಹಾಗೂ ಕಲ್ಲಪ್ಪ ಚಿಲಿಯವರು ಒಡನಾಡಿ ಸುಧಾಮ ದನ್ನಿಯವರು ಮಾತನಾಡುತ್ತಾ ಕಲ್ಲಪ್ಪ ಚಿಲಿಯವರು ನಾಲ್ಕು ಬಾರಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು ಒಂದು ಬಾರಿ ತಾಲೂಕಾ ಪಂಚಾಯತ್ ಸದಸ್ಯರಾಗಿ ಆಯ್ಕೆ ಆಗಿದ್ದರು ೧೯೮೭ ರಿಂದ ಸಿಪಿಐಎಂ ಪಕ್ಷದ ಅಂಬಲಗಾ ಗ್ರಾಮ ಶಾಖೆಯ ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡರಾಗಿದ್ದ ಕಲ್ಲಪ್ಪ ಚಿಲಿಯವರು ಹಲವಾರು ರೈತರ ಹೋರಾಟಗಳ ನಾಯಕತ್ವ ವಹಿಸಿದ್ದರು.
ಅಗಲಿಕೆಯಿಂದ ದುಡಿಯುವ ವರ್ಗದ ಚಳುವಳಿಗೆ ವಿಶೇಷವಾಗಿ ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಜನರಿಗೆ ದೊಡ್ಡ ನಷ್ಟವಾಗಿದೆ ದಿವಂಗತ ಮಾರುತಿ ಮಾನಪಡೆವರ ಒಡನಾಡಿಯಾಗಿದ್ದ ಇವರು ಬೆಣ್ಣೆತೋರಾ , ಗಂಡೋರಿ ನಾಲಾ ನೀರಾವರಿ ಯೋಜನೆ ಜಾರಿಗೆ ನಡೆದ ಹೋರಾಟದ ಮುಂಚೂಣಿ ನಾಯಕರಾಗಿದ್ದರು ಕಲ್ಲಪ್ಪ ಚಿಲಿಯವರು ಜನರಿಗೆ ಮತ್ತು ಪಕ್ಷದ ಕಾರ್ಯಕರ್ತರು ತುಂಬಾ ಪ್ರೀತಿಯಿಂದ ” ಮಮ್ಮಾ” ಎಂದು ಕರೆಯುತ್ತಿದ್ದರು ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾದ ಶರಣಬಸಪ್ಪ ಮಮಶೇಟ್ಟಿ ಪ್ರಕಟಣೆಯಲ್ಲಿ ತಿಳಿಸಿದರು.
ಗ್ರಾಮೀಣ ಪ್ರದೇಶದ ಜನರ ರಸ್ತೆ ,ನೀರು, ಮನೆ ನಿವೇಶನ, ರೇಷನ್ ವ್ಯವಸ್ಥೆಗಾಗಿ ಹಲವಾರು ಯಶಸ್ವಿ ಹೋರಾಟ ನಡೆಸಿದ್ದಾರೆ ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆ ಇದ್ದರು ಜನರನ್ನು ಕಷ್ಟಾ ಅಂತ ಬಂದರೆ ಸಾಕು ಮೈಕೋಡವಿ ಎದ್ದು ನಡೆದು ಬಿಡುತ್ತಿದ್ದರು ದಣಿವರಿಯದ ಜೀವಿ , ಪಕ್ಷದ ಕಾರ್ಯಕರ್ತರು ಉಪವಾಸ , ವನವಾಸ ಇರುತ್ತಾರೆ ಅಂತ ಹೇಳಿ ಊರಿಂದ ಕಲಬುರಗಿ ಬರಬೇಕಾದರೆ ರೊಟ್ಟಿ ಪಲ್ಲ್ಯಾ ಸೇಂಗಾ ಹಿಂಡಿ ಕಟ್ಟಕೊಂಡು ಬರೋರು ಇವರ ಅಗಳಿಕೆಯಿಂದ ಕಲಬುರಗಿ ಗ್ರಾಮೀಣ ಪ್ರದೇಶ ಚಳುವಳಿಗೆ ತುಂಬಲಾರದ ನಷ್ಟವಾಗಿದೆ ಎಂದು ದುಃಖ ವ್ಯಕ್ತಪಡಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ, ಸಿದ್ದಲಿಂಗ ಪಾಳ, ಸುಭಾಷ್ ಹೊಸಮನಿ, ಸಿದ್ದರಾಮ ಹರವಾಳ, ಮಲ್ಲಿನಾಥ್ ಪಾಟೀಲ, ಕಾಶಿನಾಥ್ ಬಂಡಿ, ದಿಲೀಪ ನಾಗೂರ, ಶಾಂತಪ್ಪ ಪಾಟೀಲ, ಮಲಕಪ್ಪ ಹರನೂರ ಉಪಸ್ಥಿತರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…