ಜೇವರ್ಗಿ: ಇಲ್ಲಿನ ಕೋಳಕೂರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು ಅನುಭವಿಸಿದ ವ್ಯಕ್ತಿ ಸುಮಾರು ವರ್ಷಗಳಿಂದ ಪರಿಶಿಷ್ಟಜಾತಿ ಮತ್ತು ಇತರ ಮೇಲ್ವರ್ಗದ ಸಾರ್ವಜನಿಕರಿಗೆ ಪಂಪ್ ಹೌಸ್ ಗಳಿಂದ ನೀರು ಸರಬರಾಜು ಆಗುವುದನ್ನು ತಡೆಹಿಡಿಯುವ ಮೂಲಕ ಸುಮಾರು ಒಂದು ವಾರದಿಂದ ನೀರಿಲ್ಲದೆ ಜನರು ಪರದಾಡುತ್ತಿದ್ದು ನೀರನ್ನು ಪೂರೈಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಚುನಾವಣೆ ಸೋಲಿನಿಂದ ಆಕ್ರೋಶ: ಕೋಳಕೂರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ ನಾಲ್ಕರಲ್ಲಿ ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಶ್ರೀಮತಿ ಸುಧಾ ಗಂಡ ರಮೇಶ್ ಗೌಡ ಪೆಟ್ ಪಾಟೀಲ್ ಅವರು ಸ್ಪರ್ಧೆ ಮಾಡಿ 484 ಮತಗಳನ್ನು ಪಡೆದು 8 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಚುನಾವಣೆ ಎಂದ ಮೇಲೆ ಗೆಲುವು ಮತ್ತು ಸೋಲು ಅನಿವಾರ್ಯವಾಗಿದ್ದು ಸೋತಿರುವ ಶ್ರೀಮತಿ ಸುಧಾ ಪಾಟೀಲ್ ಇವರ ಪತಿಯಾದ ರಮೇಶಗೌಡ ಪಾಟೀಲ್ ಇದನ್ನೇ ನೆಪವಾಗಿಟ್ಟುಕೊಂಡು ಸುಮಾರು ವರ್ಷಗಳಿಂದ ಗ್ರಾಮದ ಪರಿಶಿಷ್ಟ ಇತರ ವರ್ಗದ ಜನರಿಗೆ ತಮ್ಮ ಅಂಚಿನ ಹೊಲದಿಂದ ಗ್ರಾಮದ ಎರಡು ಪಂಪನ ನೀರು ಪೂರೈಕೆ ಇರುವುದನ್ನು ಗಮನಿಸಿ ಇದನ್ನು ತಡೆದು ಗ್ರಾಮದ ಮಹಿಳೆಯರು ಮಕ್ಕಳು ವೃದ್ಧರು ಹಾಗೂ ಸಾಮಾನ್ಯ ಜನರು ಪರದಾಡುವಂತೆ ಮಾಡಿದ್ದಾರೆ.
ಇದನ್ನು ಸಾರ್ವಜನಿಕರು ಹಾಗೂ ಸಾಮಾಜಿಕ ಸಂಘಟನೆಗಳಾದ ದಲಿತ ಸಂಘರ್ಷ ಸಮಿತಿ ಹಾಗೂ ಕನ್ನಡ ಪ್ರಾಂತ ರೈತ ಸಂಘದ ವತಿಯಿಂದ ಗ್ರಾಮ ಪಂಚಾಯತಿಯವರು ಧರಣಿ ಸತ್ಯಾಗ್ರಹ ಮಾಡುವ ಮೂಲಕ ಹಮ್ಮಿಕೊಳ್ಳಲಾಗಿತ್ತು,
ತಸಿಲ್ದಾರ್ ಭೇಟಿ ಹಾಗೂ ಸಮಸ್ಯೆ ಪರಿಹಾರ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರೇಟು 2ತಹಸೀಲ್ದಾರರಾದ ರಮೇಶ್ ಹಾಲು ಕೂಡಲೇ ನೀರನ್ನು ಪೂರೈಕೆ ಮಾಡಿ ಸಾರ್ವಜನಿಕರ ಮನವೊಲಿಸುವ ಮೂಲಕ ಇನ್ನೊಂದು ವಾರದೊಳಗಾಗಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ರೂಪಿಸುವ ಮೂಲಕ ಇರುವ ನೀರಿನ ಆಕರಗಳನ್ನು ಸರಕಾರ ತಮ್ಮ ಅಧೀನಕ್ಕೆ ಪಡೆದುಕೊಳ್ಳುವುದಾಗಿ ಭರವಸೆಯನ್ನು ನೀಡಿದ ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದುಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಸಿದ್ದರಾಮ ಪಟ್ಟಿ, ಸಿದ್ದಣ್ಣ ಹಂಗರಗಿ ,ಬಸಪ್ಪ ನಡುವಿನಕೆರಿ ,ಶಾಂತಕುಮಾರ ನೂಲಿನ , ರಾಜು ಸರಕಾರ, ಮಹಾದೇವಕಟ್ಟೆ ,ನಾಗರಾಜ್ ಕಟ್ಟಿ, ಅಪ್ಪಸಾಬ್ ಮಡಿವಾಳರ್ , ಮಲ್ಲಯ್ಯಸ್ವಾಮಿ ನಂದೂರ ಮಠ, ಸೇರಿದಂತೆ ಮಲ್ಲಿಕಾರ್ಜುನ್ ಬಿಲಾರ್ ಎಂ,ಎಸ್ಸ್.ಎಸ ರಾಜ್ಯ ಉಪಾಧ್ಯಕ್ಷರು, ಸುಭಾಸ್ ಹೊಸ್ಮನಿ ಪ್ರಾಂತ ರೈತ ಸಂಘದ ಮುಖಂಡರು ಹಾಗೂ ದಲಿತ ಮುಖಂಡರಾದ ಶ್ರೀಹರಿ ಕರ್ಕಿಹಳ್ಳಿ ,ದೇವರಾಜ್ ಬಣಮಿ, ಸಿದ್ದಣ್ಣ ಹರವಾಳ , ಗ್ರಾಮದ ಮಹಿಳಾ ಮುಖಂಡರಾದ ಮಹಾನಂದ ಹಂಗರಗಿ ,ಸಿದ್ದಮ್ಮ ಹಂದನೂರ ದೇವಕಿ ನಡುವಿನಕೆರಿ, ಶರಣಮ್ಮ ಕಟ್ಟಿ ಇತರ ಮುಖಂಡರು ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…