ಬಿಸಿ ಬಿಸಿ ಸುದ್ದಿ

ಉದ್ಯಮಿ ಪುತ್ರನ ಕೊಲೆ: ಆರೋಪಿಗಳು ಅಂದರ್

ಯಾದಗಿರಿ: ಹುಣಸಗಿ ಪಟ್ಟಣದ ಬಸ್  ನಿಲ್ದಾಣದ ಬಳಿಯಲ್ಲಿ ನಡೆದಿದ್ದ ಧನಲಕ್ಷ್ಮೀ ಜ್ಯೂವೆಲರ‍್ಸ್ ಮಾಲೀಕನ ಮಗನ ಹತ್ಯೆ ಪ್ರಕರಣವನ್ನು ಯಾದಗಿರಿ ಜಿಲ್ಲಾ ಪೊಲೀಸರು ಭೇದಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಜ್ಯೂವೆಲರ್ ಶಾಪ್ ಮಾಲೀಕ ಜಗದೀಶ ಶಿರವಿಯವರ ಪುತ್ರ ೨೨ ವರ್ಷದ ನರೇಂದ್ರನನ್ನು ಬುಧವಾರ ಮದ್ಹ್ಯಾನ ಹಾಡಹಗಲೆ ಬರ್ಬರವಾಗಿ ಕೊಲೆ ಮಾಡಲಾಗಿತ್ತು.ಅಲ್ಲದೆ ಇವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಯುವಕ ಕಿಶೋರ ಎಂಬುವವನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಲಾಗಿತ್ತು.ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಯಾದಗಿರಿ ಜಿಲ್ಲಾ ಪೊಲೀಸರು ಈಗ ಘಟನೆ ನಡೆದ ನಾಲ್ಕೇ ಗಂಟೆಗಳಲ್ಲಿ ಆರೋಪಿಗಳನ್ನು ಎಳೆದು ತರುವ ಮೂಲಕ ಎಲ್ಲರಿಂದ ಮೆಚ್ಚುಗೆಗಳಿಸಿದ್ದಾರೆ.

ಜಗದೀಶ ಶಿರವಿಯವರ ಬಳಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕಿಶೋರ ಅಪಹರಣಕ್ಕೊಳಗಾಗಿದ್ದಾನೆ ಎಂದು ಏನು ಹೇಳಲಾಗಿತ್ತು,ಅವನೇ ಕೃತ್ಯವನ್ನು ಎಸಗಿ ಮನೆಯಲ್ಲಿದ್ದ ಬಂಗಾರ ಮತ್ತು ಬೆಳ್ಳಿ ಸಮೇತ ಪರಾರಿಯಾಗಿದ್ದ,ಅಲ್ಲದೆ ಮತ್ತೊಬ್ಬ ಮಹಾರಾಷ್ಟ್ರ ಮೂಲಕ ಅಜಿತ್ ಎಂಬುವವನ ಮೂಲಕ ಅಪಹರಣವಾಗಿದ್ದಾನೆ ಎಂದು ಸುಳ್ಳು ಸುದ್ದಿ ಹಬ್ಬಿಸುವಂತೆ ನೋಡಿಕೊಂಡಿದ್ದ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ರುಶಿಕೇಶ ಭಗವಾನ್ ಹಾಗು ಸುರಪುರ ಉಪವಿಭಾಗದ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಮತ್ತು ಶಿವಾಂಶು ರಜಪೂತ್ ಐಪಿಎಸ್ ಕೆಂಭಾವಿ ಮತ್ತು ಯವರು ನಾಲ್ಕು ತಂಡಗಳನ್ನು ರಚನೆ ಮಾಡಿ ತನಿಖೆಗೆ ಮಾರ್ಗದರ್ಶನ ಮಾಡಿದ್ದರು.ಅದರಂತೆ ಸಂಜೆ ೭ ಗಂಟೆಯ ಸುಮಾರಿಗೆ ಹುಣಸಗಿ ಸಮೀಪದ ಗ್ರಾಮದ ಬಳಿಯಲ್ಲಿ ಅಡವಿಯಲ್ಲಿದ್ದವನನ್ನು ಪತ್ತೆ ಮಾಡಿ ಎಳೆದು ತಂದಿದ್ದು,ಜಗದೀಶ ಶಿರವಿ ಮನೆಯಲ್ಲಿದ್ದ ೧ ಕೆಜಿ ೫೭೦ ಗ್ರಾಂ ಬಂಗಾರ ಹಾಗು ೨ ಕೆಜಿ ಬೆಳ್ಳಿ ಒಂದು ಬೈಕ್ ಸೇರಿ ಒಟ್ಟು ೧ ಕೋಟಿ ರೂಪಾಯಿಗಳ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.ಅಲ್ಲದೆ ಇವನಿಗೆ ಸಹಕಾರ ನೀಡಿ ಅಪಹರಣವಾಗಿದ್ದಾನೆಂದು ಸುಳ್ಳು ಸುದ್ದಿ ಹಬ್ಬಿಸಿದ್ದ ಮಹಾರಾಷ್ಟ್ರ ಮೂಲದ ಅಜಿತ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

ಇದರಿಂದಾಗಿ ಇಡೀ ಹುಣಸಗಿ ಜನರನ್ನೇ ಬೆಚ್ಚಿ ಬೀಳಿಸಿದ್ದ ನರೇಂದ್ರನ ಕೊಲೆಯನ್ನು ಭೇದಿಸುವ ಮೂಲಕ ಜನರಲ್ಲಿದ್ದ ಭಯವನ್ನು ದೂರ ಮಾಡಿದಂತಾಗಿದ್ದು ಬಂಧನಕ್ಕೊಳಪಡಿಸಿದ ಇಬ್ಬರು ಆರೋಪಿಗಳನ್ನು ಹಾಗು ಕದ್ದ ಎಲ್ಲಾ ಮಾಲನ್ನು ಪೊಲೀಸರು ಪ್ರದರ್ಶಿಸಿದರು.ಈ ಸಂದರ್ಭದಲ್ಲಿ ಎಸ್ಪಿ ರುಶಿಕೇಶ್ ಭಗವಾನ್ ಸೋನೆವಾಣೆ ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಶಿವಾಂಶು ರಜಪೂತ್ ಐಪಿಎಸ್ ಕೆಂಭಾವಿ ಹಾಗು ಸಿಪಿಐ ದೌಲತ್ ಎನ್.ಕೆ ಪಿಎಸೈ ಬಾಪುಗೌಡ ಪಾಟೀಲ್ ಸೇರಿದಂತೆ ತನಿಖಾ ತಂಡದಲ್ಲಿದ್ದ ಎಲ್ಲಾ ಪೊಲೀಸರು ಹಾಜರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago