ಬಿಸಿ ಬಿಸಿ ಸುದ್ದಿ

ರಾಜ್ಯ ಮಟ್ಟದ ದೃಶ್ಯಬೆಳಕು ಗೌರವ ಪುರಸ್ಕಾರ, ಪ್ರಶಸ್ತಿ ಪ್ರದಾನ ಸಮಾರಂಭ 17 ರಂದು

ಕಲಬುರಗಿ: ನಗರದ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯು ತನ್ನ ಏಳನೆಯ ವಾರ್ಷಿಕೋತ್ಸವವನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ ದಿನಾಂಕ: ೧೭ನನೆವರಿ ೨೦೨೧ರಂದು ನಗರದ ರಂಗಾಯಣದ ಕಲಾಗ್ಯಾಲರಿಯಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಪ್ರದರ್ಶನ, ರಾಜ್ಯ ಮಟ್ಟದ ದೃಶ್ಯಬೆಳಕು ಗೌರವ ಪುರಸ್ಕಾರ, ದೃಶ್ಯಬೆಳಕು ಪ್ರಶಸ್ತಿ ಮತ್ತು ದೃಶ್ಯಕಲಾ ಕ್ಷೇತ್ರದಲ್ಲಿ ಸಾಧನೆಮಾಡಿದ ಕಲಾವಿದರಿಗೆ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೋಳ್ಳಲಾಗಿದೆ.

ಕಲಬುರಗಿಯ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯು ಸ್ಥಾಪಿಸಿದ “ದೃಶ್ಯಬೆಳಕು ಪ್ರಶಸ್ತಿ”ಯು ಇಂದು ಕಲಬುರಗಿ ಗಡಿದಾಟಿ ರಾಜ್ಯದ ಅಗಲಕ್ಕೂ ವ್ಯಾಪಿಸಿದೆ. “ದೃಶ್ಯಬೆಳಕು” ಎನ್ನುವ ಹೆಸರೇ ದೃಶ್ಯಕಲಾವಿದರಿಗೆ ಈ ಪ್ರಶಸ್ತಿಯ ಜೊತೆ ಭಾವನಾತ್ಮಕ ಸಬಂಧ ಬೆಳಿಸಿಕೊಳ್ಳುವ ಹಾಗೆ ಮಾಡಿದೆ. ಇಂತಹ ಪ್ರಶಸ್ತಿಗೆ ಈಗ ಏಳನೆ ವರ್ಷದ ಸಂಭ್ರಮ.

ದೃಶ್ಯಬೆಳಕು ಪ್ರಶಸ್ತಿ: ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ಏಳನೆಯ ರಾಜ್ಯಮಟ್ಟದ ವಾರ್ಷಿಕ ಕಲಾಸ್ಪರ್ಧೆ ಏರ್ಪಡಿಸಿ, ಕಲಾಸ್ಪರ್ಧೆಯಲ್ಲಿ ವಿಜೇತರಾದ ಆರು ಜನ ಚಿತ್ರ-ಶಿಲ್ಪ ಮತ್ತು ಛಾಯಾಚಿತ್ರ ಕಲಾವಿದರಿಗೆ ’ದೃಶ್ಯಬೆಳಕು’ ಪ್ರಶಸ್ತಿ ನೀಡುತ್ತದೆ. ದೃಶ್ಯಬೆಳಕು ಪ್ರಶಸ್ತಿಯು ೫,೦೦೦/- ರೂ.ಗಳ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಈ ಸಾಲಿನ ಏಳನೆಯ ವಾರ್ಷಿಕ ’ದೃಶ್ಯಬೆಳಕು’ ಪ್ರಶಸ್ತಿಗೆ ಶೋಭಾ ಚೌಧರಿ (ಕಲಬುರಗಿ) ಅಭಿಲಾಷ ಡಿ. (ಮಂಡ್ಯ) ನಿಂಗನಗೌಡ ಸಿ. ಪಾಟೀಲ (ಕಲಬುರಗಿ) ರಾಮಪ್ಪ ಸಾಸನೂರ (ವಿಜಯಪೂರ) ಜಗದೀಶ ಎನ್. ಜೀರಗಾಳ (ಬಾಗಲಕೋಟೆ) ಭೀಮಪ್ಪ ಎಂ. ಕಂಬಾರ (ಬಾಗಲಕೋಟೆ)ಅವರು ಆಯ್ಕೆಯಾಗಿದ್ದಾರೆ.

ರಾಜ್ಯಮಟ್ಟದ ಏಳನೆಯ ವಾರ್ಷಿಕ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ: ಜನೆವರಿ ೧೭, ೧೮ ಮತ್ತು ೧೯ರಂದು ರಾಜ್ಯಮಟ್ಟದ ಚಿತ್ರ-ಶಿಲ್ಪಕಲಾ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ. ಈ ಚಿತ್ರಕಲಾ ಪ್ರದರ್ಶನದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ೧೦೦ಕ್ಕೂ ಹೆಚ್ಚು ಚಿತ್ರಕಲಾವಿದರ ಚಿತ್ರ-ಶಿಲ್ಪ ಮತ್ತು ಛಾಯಾಚಿತ್ರಗಳು ಬೆಳಿಗ್ಗೆ ೧೦.೦೦ ರಿಂದ ಸಂಜೆ ೫.೩೦ರ ವರೆಗೆ ಪ್ರದರ್ಶನಗೊಳ್ಳಲಿವೆ. ದಿನಾಂಕ: ಜನೆವರಿ ೧೭ರಂದು ಬೆಳಿಗ್ಗೆ ೧೦.೪೫ ಗಂಟೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾದ ಡಾ. ಹಣಮಂತ ವ್ಹಿ. ಮಂತಟ್ಟಿ ಅವರು ಕಲಾಪ್ರದರ್ಶನವನ್ನು ಉದ್ಘಾಟಿಸುವರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾದ ಶ್ರೀ ನಟರಾಜ ಎಂ. ಶಿಲ್ಪಿ ಮತ್ತು ಕಲಬುರಗಿಯ ರಾಯನ್ ಬಿಲ್ಡರ‍್ಸ್ ಮತ್ತು ಡೇವಲಪರ‍್ಸ್ ನ ಮುಖ್ಯಸ್ಥರಾದ ಶೇಕ್ ಖದಿರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ವಿಭಿನ್ನ ಮಾಧ್ಯಮದ ಅತ್ಯುತ್ತಮವಾದ ಚಿತ್ರಕಲಾಕೃತಿಗಳನ್ನು ಏಳನೆಯ ವಾರ್ಷಿಕ ಕಲಾಪ್ರದರ್ಶನದ ಅಂಗವಾಗಿ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು. ನಗರದ ವಾಣಿಜ್ಯೊದ್ಧಿಮಿಗಳು, ಕೈಗಾರಿಕೋದ್ಯಮಿಗಳು, ಇಂಜೀನಿಯರ‍್ಸ್‌ಗಳು, ವೈದ್ಯರು, ಕಲಾಸಕ್ತರು ಈ ಕಲಾಪ್ರದರ್ಶನಕ್ಕೆ ಆಗಮಿಸಿ ಕಲಾಕೃತಿಗಳನ್ನು ಖರೀದಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು.

೧೭-೦೧-೨೦೨೧ರಂದು ಬೆಳಿಗ್ಗೆ ೧೧:೦೦ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ನಿಕಾಯದ ಡೀನರು ಮತ್ತು ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ. ರವಿಂದ್ರನಾಥ ಅವರು ನಡೆಸಿಕೊಡುವವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಲಬುರಗಿ ರಂಗಾಯಣದ ನಿರ್ದೇಶಕರಾದ ಶ್ರೀ ಪ್ರಭಾಕರ ಜೋಶಿ, ಕಲಬುರಗಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ದತ್ತಪ್ಪ ಸಾಗನೂರ ಅವರು ಭಾಗವಹಿಸುವರು. ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರು ಮತ್ತು ಹಿರಿಯ ಜಾನಪದ ತಜ್ಞರಾದ ಡಾ. ರಾಜೇಂದ್ರ ಯರನಾಳೆ ಅವರು ಕಾರ್ಯಕ್ರಮದ ಅಧ್ಯಕಷತೆ ವಹಿಸಲಿದ್ದಾರೆ.

ವಿಶೇಷ ಸನ್ಮಾನಿತರು: ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಪ್ರಕಾಶ ಗಡಕರ ಯಿಜಿಸಿ ನವದೆಹಲಿಯ ನೆಟ್ ಪರಿಕ್ಷೆ ಮತ್ತು ಕೆಸೆಟ್ ಪರಿಕ್ಷೆಯಲ್ಲಿ ಉತ್ತೀರ್ಣಗೊಂಡು ರಾಷ್ಟ್ರೀಯ ಫೆಲೋಶಿಪ್‌ಗೆ ಆಯ್ಕೆಗೊಂಡ ಚಿತ್ರಕಲಾವಿದೆ ನಯನಾ ಬಿ. ಅವರನ್ನು ಸನ್ಮಾನಿಸಲಾಗುವುದು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago