ಸುರಪುರ: ನಮ್ಮ ಸುರಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುರಪುರ ಉಪ ವಿಭಾಗದ ಡಿವೈಎಸ್‌ಪಿ ಹಾಗೂ ಸುರಪುರ ಪೋಲಿಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಐ ಮತ್ತು ಕೊಡೇಕಲ್ ಪೋಲಿಸ್ ಠಾಣೆಯ ಪಿಎಸ್‌ಐ ಇವರುಗಳು ಕ್ಷೇತ್ರದಲ್ಲಿ ನಡೆಯುತ್ತಿರುವ ಅಮಾಯಕರ ಮೇಲಿನ ದೌರ್ಜನ್ಯಗಳು ಹಾಗೂ ಇನ್ನೀತರ ಕಾನೂನು ಬಾಹಿರ ಕೆಲಸಗಳಿಗೆ ನೇರವಾಗಿ ಸಹಕರಿಸುವ ಮೂಲಕ ಬಿಜೆಪಿ ಪಕ್ಷದ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ಪಕ್ಷ ಬೇಧವಿಲ್ಲದೇ ಜನಸಾಮಾನ್ಯರನ್ನು ರಕ್ಷಣೆಯ ಹೊಣೆ ಹೊತ್ತಿರುವ ಪೋಲಿಸ್ ಹಿರಿಯ ಅಧಿಕಾರಿಗಳು ತಾವೇ ಮುಂದೇ ನಿಂತು ಅಮಾಯಕರ ಮೇಲೆ ದೌರ್ಜನ್ಯವೆಸಗಲು ಸಹಕರಿಸುತ್ತಿದ್ದು ಸ್ವತ: ಈ ಅಧಿಕಾರಿಗಳೇ ಬಿಜೆಪಿ ಪಕ್ಷದ ಮುಖಂಡರ ಮಾತು ಕೇಳಿ ಅಮಾಯಕರನ್ನು ಹೆದರಿಸುವ,ಬೆದರಿಸುವ ಕೆಲಸದಲ್ಲಿ ತೊಡಗಿದ್ದಾರೆ, ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗರ ಮೇಲೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ದೈಹಿಕವಾಗಿ ಹಲ್ಲೆವೆಸಗಿ ಗಾಯಗೊಳಿಸಿ ದೌರ್ಜನ್ಯವೆಸಗಿರುವ ಘಟನೆಗಳು ಸಂಭವಿಸಿದ್ದು ಆದರೆ ಇಲ್ಲಿನ ಪೋಲಿಸ್ ಅಧಿಕಾರಿಗಳು ಈ ಘಟನೆಗಳಲ್ಲಿ ಅಮಾಯಕರ ಮೇಲೆ ನಡೆದಿರುವ ಹಲ್ಲೆ ಕುರಿತು ವಿಚಾರಣೆ ನಡೆಸದೇ ಹಲ್ಲೆವೆಸಗಿರುವ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಪರವಾಗಿ ನಿಂತುಕೊಂಡು ಹಲ್ಲೆಗೆ ಒಳಗಾಗಿರುವ ನಮ್ಮ ಪಕ್ಷದ ಬೆಂಬಲಿಗರು ಹಾಗೂ ಕಾರ್ಯಕರ್ತರ ಮೇಲೆ ದೂರು ದಾಖಲಿಸುತ್ತಿರುವುದು ಇದು ಯಾವ ನ್ಯಾಯ? ತಾಲೂಕಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುತ್ತಿಲ್ಲ, ಹಲ್ಲೆಗೊಳಗಾದ ಜನರು ಠಾಣೆಗೆ ಹೋಗಿ ಅರ್ಜಿ ಸಲ್ಲಿಸಲು ಹೋದಾಗ ಅಧಿಕಾರಿಗಳು ಅವರನ್ನು ಬೆದರಿಸಿ ವಾಪಾಸು ಕಳುಹಿಸುತ್ತಿದ್ದಾರೆ ಹಲ್ಲೆವೆಸಗಿ ನಂತರ ತಾವೇ ಬಂದು ಠಾಣೆಗೆ ಅರ್ಜಿ ಸಲ್ಲಿಸುವ ಬಿಜೆಪಿ ಪಕ್ಷದವರ ಮಾತು ಕೇಳುವ ಮೂಲಕ ಹಲ್ಲೆಗೆ ಒಳಗಾದ ಅಮಾಯಕರ ಮೇಲೆಯೇ ದೂರು ದಾಖಲಿಸಿರುವ ಅನೇಕ ಪ್ರಕರಣಗಳು ಕಂಡು ಬರುತ್ತಿವೆ.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮ ಪಂಚಾಯತಿಯಲ್ಲಿ ನಮ್ಮ ಪಕ್ಷದ ಬೆಂಬಲಿಗ ಸದಸ್ಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸುರಪುರಕ್ಕೆ ಬಂದ ಸಂದರ್ಭದಲ್ಲಿ ರಾತ್ರಿ ಗ್ರಾಮಕ್ಕೆ ಮರಳಿ ಹೋಗಲು ಬಸ್ ಸೌಕರ್ಯ ಇಲ್ಲದ್ದರಿಂದ ನಗರದ ಲಾಡ್ಜವೊಂದರಲ್ಲಿ ತಂಗಿದ್ದರು ಆಗ ಬಿಜೆಪಿ ಪಕ್ಷದ ಶಾಸಕರು ಹಾಗೂ ಆತನ ಸಹೋದರನ ಮಾತು ಕೇಳಿ ಕೊಡೇಕಲ್ ಪೋಲಿಸ್ ಠಾಣೆಯಲ್ಲಿ ಯಾವುದೇ ಕೇಸು ದಾಖಲಿಸದೇ ಸುರಪುರ ಡಿವೈಎಸ್‌ಪಿ ಸಹಕಾರ ಪಡೆದು ಸುರಪುರ ಠಾಣೆಯ ಪಿಐರವರು ಗ್ರಾಮ ಪಂಚಾಯತಿ ಮಹಿಳಾ ಸದಸ್ಯೆ ತಂಗಿದ್ದ ಲಾಡ್ಜನ ರೂಮಿಗೆ ಯಾವುದೇ ಮಹಿಳಾ ಪೋಲಿಸ್ ಸಹ ಇಲ್ಲದೇ ನುಗ್ಗಿ ಗೂಂಡಾ ರೀತಿ ವರ್ತಿಸಿ ಮಹಿಳಾ ಸದಸ್ಯೆಯನ್ನು ತಮ್ಮ ವಾಹನದಲ್ಲಿ ಸ್ವತ: ಪಿಐರವರೇ ಕೊಡೇಕಲ್‌ಗೆ ಕರೆದುಕೊಂಡು ಹೋಗಿ ಠಾಣೆಯಲ್ಲಿ ಕೂಡಿಸಿ ವಿಚಾರಿಸಿ ನಂತರ ಆ ಮಹಿಳೆಯನ್ನು ಆಕೆಯ ಗಂಡ ಮತ್ತು ಮಕ್ಕಳಿಗೆ ಒಪ್ಪಿಸದೇ ಅಜ್ಞಾತ ಸ್ದಳಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೂ ಆ ಸದಸ್ಯೆ ಎಲ್ಲಿದ್ದಾಳೆ ಗೊತ್ತಿಲ್ಲ ಈ ಬಗ್ಗೆ ಸದಸ್ಯೆಯ ಪತಿ ಹಾಗೂ ಮಗಳು ಪೋಲಿಸರನ್ನು ಕೇಳಿದಾಗ ಹಾರಿಕೆ ಉತ್ತರ ನೀಡುತ್ತಿದ್ದಾರೆ ಇದರಿಂದ ಆಕೆಯ ಪತಿ ಹಾಗೂ ಮಗಳು ಭಯಭೀತರಾಗಿ ಸುರಪುರ ಪೋಲಿಸ್ ಠಾಣೆಗೆ ಬಂದು ಕಾಣೆಯಾಗಿರುವ ದೂರು ಸಲ್ಲಿಸಿರುತ್ತಾರೆ. ಆದರೆ ಈ ದೂರಿಗೆ ಇಲ್ಲಿಯವರೆಗೂ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿರುವದಿಲ್ಲ.ಇಂತಹ ಅನೇಕ ಘಟನೆಗಳು ನಡೆದಿವೆ.
ಮುಂಬರುವ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಸುರಪುರ ಉಪ ವಿಭಾಗದ ಡಿವೈಎಸ್‌ಪಿ ಮತ್ತು ಸುರಪುರ ಠಾಣೆಯ ಪಿಐ ಹಾಗೂ ಕೊಡೇಕಲ್ ಠಾಣೆಯ ಪಿಎಸ್‌ಐ ಅವರನ್ನು ನನ್ನ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಸದಂತೆ ಕ್ರಮವಹಿಸಬೇಕು. ಮತ್ತು ಬೇರೆ ಪೊಲೀಸ್ ಅಧಿಕಾರಿಗಳನ್ನು ಚುನಾವಣೆಗಾಗಿ ನಿಯೋಜಿಸಬೇಕು. ನನ್ನ ಮನವಿಗೆ ಸ್ಪಂದಿಸದೆ ತಾವುಗಳು ಯಾವುದೇ ಕ್ರಮ ಜರುಗಿಸದಿದ್ದಲ್ಲಿ, ನನ್ನ ಪಕ್ಷದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರೊಂದಿಗೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬರೆದ ಮನವಿಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…