ಸುರಪುರ: ಶ್ರೀ ರಾಮ ಒಂದು ಸಮುದಾಯಕ್ಕೆ ಸೀಮಿತವಲ್ಲ ಮತ್ತು ಅಯೋಧ್ಯಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ದೇಗುಲಕ್ಕೆ ನಾವು ಜಾತಿ ಮತ್ತು ಪಕ್ಷಾತಿತವಾಗಿ ದೇಶದ ಪ್ರತಿಯೊಬ್ಬರು ನಿರ್ಮಾಣಕ್ಕೆ ಸಹಕಾರ ನೀಡಬೇಕು ಹಾಗೆ ನಿಧಿಸಂಗ್ರಹಿಸಲು ನೆರವಾಗುವಂತೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ನರಸಿಂಹ ನಾಯಕ ಕರೆನೀಡಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಹಮ್ಮಿಕೊಂಡ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ರಾಮಮಂದಿರವು ರಾಷ್ಟ್ರೀಯ ಸ್ಮಾರಕವಾಗಿದೆ ಇದಕ್ಕೆ ದೇಶ ಪ್ರತಿಯೊಬ್ಬರ ನಿರ್ಮಾಣದಲ್ಲಿ ತಮ್ಮಗೆ ಆದಷ್ಟು ಧನವನ್ನು ನೀಡಬೇಕು ಹಾಗೂ ಈಗಾಗಲೆ ತಾಲೂಕಿನಲ್ಲಿ ನಿಧಿ ಸಂಗ್ರಹಕ್ಕೆ ರಾಮಭಕ್ತರ ೪೦ ತಂಡಗಳಿನ್ನು ರಚಿಸಲಾಗಿದೆ ಶನಿವಾರದಿಂದ ನಿಧಿಸಂಗ್ರಹ ಕಾರ್ಯ ಆರಂಭವಾಗಿದೆ ಇನ್ನು ಐದಾರು ದಿನಗಳಲ್ಲಿ ತಾಲೂಕಿನಾದ್ಯಂತ ನಿಧಿಸಂಗ್ರಹಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಂತರ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಅಭಿಯಾನ ಆರಂಭಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸರ್ವಜನಿಕರಿಂದ ನಿಧಿಯನ್ನು ಸಂಗ್ರಹಿಸಲಾಯಿತು.
ಮಾಜಿ ಜಿಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ(ತಾತಾ), ನಗರಸಭೆ ಅಧ್ಯಕ್ಷೆ ಸುಜಾತ ಜೇವರ್ಗಿ, ನಗರಸಭೆ ಸದಸ್ಯ ವೇಣುಮಾಧವ ನಾಯಕ ಬಿಜೆಪಿ ಮಂಡಲಾಧ್ಯಕ್ಷ ಮೇಲಪ್ಪ ಗುಳಗಿ, ಅಮರಣ್ಣ ಹುಡೇದ, ಸುರೇಶ ಸಜ್ಜನ, ದೊಡ್ಡದೇಸಾಯಿ, ವೇಣುಗೋಪಾಲ ಜೇವರ್ಗಿ. ಶಂಕರ ನಾಯಕ,ಆರ್‌ಎಸ್‌ಎಸ್ ಜಿಲ್ಲಾ ಶಾರೀರಿಕ ಪ್ರಮುಖ ಸೋಮಯ್ಯ ಸಾತನೂರ್, ತಾಲೂಕು ಲೆಕ್ಕಪತ್ರ ಪ್ರಮುಖ ನಾಗರಾಜ ಮಕಾಶಿ ಉದ್ಯಮಿಗಳಾದ ನಂದಕಿಶೋರ ರಾಠಿ, ರಾಜುರಾಠಿ, ಎಸ್.ಎಸ್.ರಾಠಿ, ಜ್ಞಾನಚಂದ ಜೈನ, ಕಿಶೋರ ಚಂದ ಜೈನ್, ಪಾರಾಪ್ಪ ಗುತ್ತೆದಾರ, ತಾಲೂಕು ಲೆಕ್ಕಪತ್ರ ಪ್ರಮುಖ ನಾಗರಾಜ ಮಕಾಶಿ ಸೇರಿದಂತೆ ನೂರಾರು ರಾಮಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…