ಇತ್ತೀಚಿನದಿನಗಳಲ್ಲಿ ಹಲವು ತಪ್ಪು ತಿಳುವಳಿಕೆ ಹಾಗೂ ಗ್ರಹಿಕೆಯಿಂದ ಹಲವರ ಸಂಬಂಧಗಳಲ್ಲಿ ಬಿರುಕು ಬಂದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಸೃಷ್ಠಿಕರ್ತ ನೀಡುವ ಸುಂದರ ಜೀವನವನ್ನು ತಪ್ಪು ಮತ್ತು ಅಹಿತವಾದಗಳಲ್ಲಿ ಸಿಲುಕಿ ಕೊಪವೆಂಬ ಅಪಶಕುನಿ ಸ್ವಭಾವಕ್ಕೆ ಬಲಿಯಾಗುತ್ತಿರುವುದು, ಸರ್ವೆ ಸಾಮಾನ್ಯ ಸಂಗತಿ. ಆದರೆ ಇಂತಹ ತಪ್ಪು ಗ್ರಹಿಕೆಯಿಂದ ದೂರ ಉಳಿಯುವುದು ಮತ್ತು ಇಸ್ಲಾಂನಲ್ಲಿ ಕುಟುಂಬ ಸಂಬಂಧಗಳ ಮೇಲೆ ಬೆಳಕು ಚೆಲ್ಲಿದೆ ಎಂಬುದರ ಬಗ್ಗೆ ಇ-ಮೀಡಿಯಾ ಲೈನ್ ಓದುಗರಿಗೆ ಸಂಚಿಕೆ ರೂಪದಲ್ಲಿ “ಕುಟುಂಬ ಸಂಬಂಧ ಕಡಿಯುವುದಕ್ಕೆ ಮುಂಚೆ”,” ಕುಟುಂಬ ಪಂಬಂಧ ಜೋಡಿಸುವುದರ ಶ್ರೇಷ್ಠತೆಗಳು” ಹಾಗೂ “ಕುಣುಂಬ ಸಂಬಂಧವನ್ನು ಜೋಡಿಸುವುದು ಹೇಗೆ?” ಎಂಬುದರ ಬಗ್ಗೆ ತಿಳಿಸುವ ಉದ್ದೇಶ ವಿದ್ದು, ಈ ಮೂಲಕ ಮಾನವ ಜೀವನ ಸೌಂದರ್ಯವನ್ನು ಅರಿತುಕೊಂಡು ಬಾಳಬೇಕೆಂಬ ಮಹತ್ವಕಾಂಕ್ಷೆಯಿಂದ ಈ ಸಂಚಿಕೆ ತಮ್ಮಗೆ ನೀಡಲಾಗುತ್ತಿದೆ. ಸಂಚಿಕೆಯ ಕುರಿತು ಓದಿ ತಮ್ಮ ಅಭಿಪ್ರಾಯಗಳು ಹಂಚಿಕೊಳಬೇಕೆಂದು ಕೋರುತ್ತೇವೆ.
ಕುಟುಂಬ ಸಂಬಂಧ ಜೋಡಿಸಲು, ಸ೦ಬಂಧಿಕರಿಗೆ ಒಳಿತು ಮಾಡಲು ಮತ್ತು ಅವರೊಡನೆ ಉತ್ತಮವಾಗಿ ವರ್ತಿಸಲು ಅಲ್ಲಾಹು ಆಜ್ಞಾಪಿಸಿದ್ದಾನೆ. ಹಾಗೆಯೇ ಕುಟುಂಬ ಸಂಬಂಧ ಕಡಿಯುವುದು, ಸ೦ಬಂಧಿಕರಿಗೆ ಕೆಡುಕು ಬಗೆಯುವುದು ಮತ್ತು ಅವರೊಡನೆ ಕೆಟ್ಟದಾಗಿ ವರ್ತಿಸುವುದನ್ನು ಅಲ್ಲಾಹು ವಿರೋಧಿಸಿದ್ದಾನೆ. ಕುಟುಂಬ ಸ೦ಬ೦ಧ ಕಡಿಯುವುದರಿಂದ ಸ್ವರ್ಗ ಪ್ರವೇಶಕ್ಕೆ ತಡೆಯಾಗುತ್ತದೆ ಮತ್ತು ಕುಟುಂಬ ಸಂಬಂಧಗಳೊಡನೆ ತೀರಾ ಕೀಳಾಗಿ ವರ್ತಿಸುವ ವ್ಯಕ್ತಿ ನರಕವನ್ನು ಪ್ರವೇಶಿಸುತ್ತಾನೆ೦ದು ಪ್ರವಾದಿ (ಸ) ಹೇಳಿದ್ದಾರೆ.
ಕುಟುಂಬ ಸಂಬಂಧ ಜೋಡಿಸುವುದನ್ನು ಕುಟುಂಬ ಸ೦ಬಂಧಿಗಳಿಗೆ ಒಳಿತು ಮಾಡುವುದನ್ನು ಅಲ್ಲಾಹು ‘ಹತ್ತು ಹಕ್ಕು’ಗಳಲ್ಲಿ (ಅಲ್‌ಹುಕೂಕುಲ್ ಅತ್ರ) ಸೇರಿಸಿದ್ದಾನೆ. ಆದರೆ ದುರಾದೃಷ್ಟವಶಾತ್, ಇ೦ದು ಮುಸ್ಲಿಮನರಲ್ಲಿ ಹೆಚ್ಚಿನವರೂ ಇತರೆಲ್ಲ ಹಕ್ಕುಗಳಂತೆ ಈ ಹಕ್ಕನ್ನೂ ಮರೆತಿದ್ದಾರೆ. ತನ್ನಿಮಿತ್ತ ಕುಟುಂಬ ಸಂಬಂಧಿಗಳ ಮಧ್ಯೆ ಇರಬೇಕಾದ ಪ್ರೀತಿ, ಅನ್ಯೋನ್ಯತೆ, ಆತ್ಮೀಯತೆ, ದಯೆ, ಒಲವು, ಅನುಕಂಪ ಮಾಯವಾಗಿ ಅಲ್ಲಿ ಕೋಪ, ದ್ವೇಷ, ರೋಷ, ಸಂಶಯ, ಅಸೂಯೆ, ಮತ್ಸರ ರಾರಾಜಿಸುತ್ತಿವೆ. ಎಲ್ಲಿಯವೆರೆಗೆಂದರೆ ತಂದೆ- ಮಗ, ತಾಯಿ-ಮಗಳು, ಅಣ್ಣ-ತಮ್ಮ೦ದಿರು, ಅಕ್ಕ-ತಂಗಿಯರು ಅನೇಕ ವರ್ಷಗಳಿಂದ ಪರಸ್ಪರ ಮುಖ ನೋಡದೆ ಕೋಪ ಮತ್ತು ದ್ವೇಷದೊಂದಿಗೆ ಬದುಕು ಸಾಗಿಸುವುದನ್ನು ನಮಗೆ ಯಥೇಚ್ಛವಾಗಿ ಕಾಣಬಹುದು.
ಕುಟುಂಬ ಸಂಬಂಧಿದಳು ಯಾರು? : ಕುಟುಂಬ ಸ೦ಬ೦ಧ ಜೋಡಿಸಬೇಕೆಂದು ಅಲ್ಲಾಹು ಮತ್ತು ಪ್ರವಾದಿ(ಸ) ರವರು ಆದೇಶಿಸಿದ್ದಾರೆ. ಆದರೆ ಆ ಕುಟುಂಬ ಸಂಬಂಧಿಗಳು ಯಾರು? ಕುಟುಂಬ ಸಂಬಂಧಿಗಳು ಯಾರೆಂಬ ವಿಷಯದಲ್ಲಿ ವಿದ್ವಾಂಸರ ಮೂರು ಅಭಿಪ್ರಾಯಗಳಿವೆ: 1… ನಮಗೆ ವಿವಾಹ ನಿಷಿದ್ಧವಾಗಿರುವವರು. 2. ನಮ್ಮ ಉತ್ತರಾಧಿಕಾರ ಸೊತ್ತು ಪಡೆಯುವ ಹಕ್ಕನ್ನು ಹೊ೦ದಿರುವವರು. 3, ನಮ್ಮ ತಂದೆ ಅಥವಾ ತಾಯಿಯ ವಂಶಕ್ಕೆ ಸೇರಿದವರು.
(ಅವರಿಗೆ ನಮ್ಮ ಉತ್ತರಾಧಿಕಾರ ಸೊತ್ತು ಪಡೆಯುವ ಹಕ್ಕು ಇದ್ದರೂ, ಇಲ್ಲದಿದ್ದರೂ ಸಹ). ಮೂರನೆಯ ಅಭಿಪ್ರಾಯವು ಹೆಚ್ಚು ಪ್ರಬಲವಾಗಿದೆ. ಕುಟು೦ಬ ಸಂಬಂಧಿಗಳು ಎ೦ದರೆ ರಕ್ತ ಸಂಬಂಧದಿಂದ ಉಂಟಾಗುವ ಸಂಬಂಧಿಗಳು. ಸ್ತನಪಾನದ ಮೂಲಕ ಅಥವಾ ವಿವಾಹದ ಮೂಲಕ ಉಂಟಾಗುವ ಸಂಬ೦ಧಿಗಳು ಕುಟುಂಬ ಸ೦ಬಂಧಿಗಳಲ್ಲಿ ಒಳಪಡುವುದಿಲ್ಲ.
ಶೈಖ್ ಇಬ್ನ್ ಬಾರು್(ರ) ಹೇಳುತ್ತಾರೆ: ಕುಟುಂಬ ಸಂಬಂಧಿಗಳು ಎ೦ದರೆ ತ೦ದೆ ಮತ್ತು ತಾಯಿಯ ವಂಶದಿಂದ ಉಂಟಾಗುವ ಸಂಬಂಧಿಗಳು. “ಅಲ್ಲಾಹನ ವಿಧಿನಿಯಮದ ಪ್ರಕಾರ ಕುಟುಂಬ ಸ೦ಬ೦ಧಿಗಳು ಪರಸ್ಪರ ಹತ್ತಿರವಿರುವವರಾಗಿರುತ್ತಾರೆ.’ [ಕುರ್‌ಆನ್ 8:75: 33:61 ಎ೦ದು ಅಲ್ಲಾಹು ಕುರ್‌ಆನ್‌ನಲ್ಲಿ ಹೇಳಿದ ಕುಟುಂಬ ಸಂಬಂಧಿಗಳು ಎ೦ದರೆ ಇವರೇ. ಇವರಲ್ಲಿ ಹೆಚ್ಚು ಹತ್ತಿರವಿರುವವರು ತಂದೆ, ತಂದೆಯ ತಂದೆ, ಅಜ್ಜ, ಮುತ್ತಜ್ಜ… ಹೀಗೆ ಮೇಲಿನವರೆಗೆ.
ತಂದೆಯ ತಾಯಿ, ಅಜ್ಜಿ, ಮುತ್ತಜ್ಜಿ… ಹೀಗೆ ಮೇಲಿನವರೆಗೆ. ತಾಯಿ, ತಾಯಿಯ ತಂದೆ, ಅಜ್ಜ, ಮುತ್ತಜ್ಜ… ಹೀಗೆ ಮೇಲಿನ ವರೆಗೆ. ತಾಯಿಯ ತಾಯಿ, ಅಜ್ಜಿ, ಮುತ್ತಜ್ಜಿ.. ಹೀಗೆ ಮೇಲಿನ ವರೆಗೆ. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಅವರ ಮಕ್ಕಳು… ಹೀಗೆ ಕೆಳಗಿನವರೆಗೆ. ಇವರು ಅತಿ ಹತ್ತಿರದ ಸ೦ಬಂಧಿಗಳು.
ಇವರ ನ೦ತರ ಸೋದರ-ಸೋದರಿಯರು ಮತ್ತು ಅವರ ಮಕ್ಕಳು. ನಂತರ ತಂದೆಯ ಸೋದರ-ಸೋದರಿಯರು ಮತ್ತು ಅವರ ಮಕ್ಕಳು, ತಾಯಿಯ ಸೋದರ-ಸೋದರಿಯರು ಮತ್ತು ಅವರ ಮಕ್ಕಳು. ಗಂಡನ ಕುಟುಂಬ ಸಂಬಂಧಿಗಳು ಹೆಂಡತಿಗೆ ಸ೦ಬ೦ಧಿಗಳಲ್ಲ ಮತ್ತು ಹೆ೦ಡತಿಯ ಕುಟುಂಬ ಸ೦ಬಂ೦ಧಿಗಳು ಗಂಡನಿಗೆ ಸಂಬ೦ಧಿಗಳಲ್ಲ. ಆದರೆ ಇವರ ಮಕ್ಕಳಿಗೆ ಅವರೆಲ್ಲರೂ ಕುಟುಂಬ ಸ೦ಬಂಧಿಗಳಾಗಿದ್ದಾರೆ.” [ಫತಾವಾ ಇಸ್ಲಾಮಿಯ್ಯ 4/195] ಸ್ತನಪಾನದ ಮೂಲಕ ಮತ್ತು ವಿವಾಹದ ಮೂಲಕ ಉಂಟಾಗುವ ಸಂಬಂಧಿಗಳು ಕುಟು೦ಬ ಸ೦ಬಂಧಿಗಳಲ್ಲಿ ಒಳಪಡದಿದ್ದರೂ ಸಹ ಅವರಿಗೆ ಒಳಿತು ಮಾಡುವುದು ಮತ್ತು ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…