ಬಿಸಿ ಬಿಸಿ ಸುದ್ದಿ

ಇನ್‌ಕ್ಲಾಬ್ ಎ ಡೆಕ್ಕನ್ ಉರ್ದು ಪತ್ರಿಕೆ ರಜತೋತ್ಸವಕ್ಕೆ ಕನ್ನಡ ಪತ್ರಿಕೆ ಬಿಡುಗಡೆಗೆ ಸಿದ್ಧತೆ

ಶಹಾಬಾದ: ಕಳೆದ ೨೫ ವರ್ಷಗಳಿಂದ ಉರ್ದು ಭಾಷೆಯ ಪತ್ರಿಕೆಯನ್ನು ಪ್ರಕಟಿಸುತ್ತಿದ್ದು, ರಜತ ಮಹೋತ್ಸವದ ಶುಭ ಸಂದರ್ಭದಲ್ಲಿ ಕನ್ನಡ ಭಾಷೆಯ ಪತ್ರಿಕೆಯೊಂದನ್ನು ಶೀಘ್ರದಲ್ಲಿಯೇ ಪ್ರಾರಂಭಿಸುವದಾಗಿ ಕಲಬುರಗಿಯ ಇನ್‌ಕ್ಲಾಬ್ ಎ ಡೆಕ್ಕನ್ ಪತ್ರಿಕೆ ಸಂಪಾದಕ ಮಹಿಯೋದ್ದಿನ್ ಪಾಶಾ ಹೇಳಿದರು.

ಅವರು ನಗರದಲ್ಲಿ ಇನ್‌ಕ್ಲಾಬ್ ಎ ಡೆಕ್ಕನ್ ಉರ್ದು ಪತ್ರಿಕೆಯ ರಜತ ಮಹೋತ್ಸವ ನಿಮಿತ್ತ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಮೂಲತ ರಾಜಕೀಯದಿಂದ ಪತ್ರಿಕಾ ರಂಗಕ್ಕೆ ಬಂದಿದ್ದರಿಂದ ಜನರ ಯೋಚನೆ, ವಿಚಾರಗಳ, ಜನರ ನಾಡಿ ಮಿಡಿತ ಅರಿತಿದ್ದರಿಂದ ಒಂದು ಪತ್ರಿಕೆ ಪ್ರಾರಂಭಿಸುವದು ಕಷ್ಟವಾಗಲಿಲ್ಲ, ಇನ್ನೂ ಓದುಗರು, ಅಭಿಮಾನಿಗಳು ಪತ್ರಿಕೆ ಮುನ್ನಡೆಯಲು ಸಹಕರಿಸಿದ್ದಾರೆ ಎಂದು ಹೇಳಿ, ಶೇ. ೯೦ ರಷ್ಟು ಕನ್ನಡ ಭಾಷೆಯ ವರದಿಗಳನ್ನು ಉರ್ದು ಭಾಷೆಯಲ್ಲಿ ತರ್ಜುಮೆ ಮಾಡುವದಲ್ಲದೆ ಅದನ್ನು ಪತ್ರಿಕೆ ಭಾಷೆಗೆ ಅಳವಡಿಸಿಕೊಳ್ಳುವದು ಒಂದು ಛಾಲೆಂಜಿಂಗ್ ಕೆಲಸವಾಗಿದೆ ಎಂದು ಹೇಳಿ, ಉರ್ದು ಪತ್ರಿಕೆಗೆ ಓದುಗರು ಕೊಟ್ಟ ಪ್ರೀತಿ, ವಿಶ್ವಾಸ ಮುಂದೆ ಬರುವ ಕನ್ನಡ ಪತ್ರಿಕೆಗೆ ಕೊಡಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ನಗರ ಅಧ್ಯಕ್ಷ ಡಾ.ರಶೀದ ಮರ್ಚಂಟ್ ಮಾತನಾಡಿ, ೨೫ ವರ್ಷ ಅಲ್ಪಸಂಖ್ಯಾತ ಭಾಷೆಯಲ್ಲಿ ಪತ್ರಿಕೆ ನಡೆಸುವದು ಒಂದು ಸಾಹಸ ಕೆಲಸವಾಗಿದೆ. ಅದರ ಯಶಶ್ವಿಯಲ್ಲಿಯೇ ಕನ್ನಡ ಪತ್ರಿಕೆ ಪ್ರಾರಂಭಿಸುತ್ತಿರುವದು ಸ್ವಾಗತಾರ್ಹವಾಗಿದ್ದು. ಅಬ್ದುಲ್ ಕಲಾಂ ಅವರು ಪತ್ರಿಕೆಯನ್ನು ಮನೆಮನೆಗೆ ಹಂಚಿರುವಂತೆ, ಇವರು ಸಹ ಪ್ರಾರಂಭದಲ್ಲಿ ಮನೆಮನೆಗೆ ಪತ್ರಿಕೆ ಹಂಚುವ ಕೆಲಸ ಮಾಡಿದ್ದು, ಅಂದು ಹಾಸ್ಯ ಮಾಡುತ್ತಿದ್ದ ಜನ ಇಂದು ಮುಖ ಎತ್ತಿ ನೋಡುವಂತೆ ಸಾಧನೆಗೈದಿದ್ದಾರೆ ಎಂದು ಹೇಳಿದರು.

ನಗರ ಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ಮಾತನಾಡಿ, ಉರ್ದು ಪತ್ರಿಕೆಯ ರಜತಮಹೋತ್ಸವ, ಮುಂದೆ ಸುವರ್ಣ,ವಜ್ರ ಮಹೋತ್ವ ಆಚರಿಸಲಿ, ಕನ್ನಡ ಪತ್ರಿಕೆಯ ಇದೇ ಹಾದಿಯಲ್ಲಿ ಸಾಗಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಶಮ್ ಖಾನ್, ಫಜಲ್ ಪಟೇಲ್, ನಗರ ಸಭೆ ಸದಸ್ಯರಾದ ಸೂರ್ಯಕಾಂತ ಕೋಬಾಳ, ರಜನಿಕಾಂತ (ಭಂಟಿ), ಮುಖಂಡರಾದ ಅನ್ವರ ಪಾಶಾ ನಸಿರೋದ್ದಿನ್, ರಾಕೇಶ ಪವಾರ, ಸಲೀಮ್ ಇದ್ದರು.

emedia line

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago