ಕಲಬುರಗಿ: ವಿಜಯಪುರದಲ್ಲಿ ಆಹೇರಿಯ ಶ್ರೀ ಬಸವೇಶ್ವರ ಕರ್ಮವೀರ, ಕಲಾ, ಸಾಹಿತ್ಯ, ಸಂಸ್ಕøತಿ ವೇದಿಕೆ ಕೊಡಮಾಡುವ 2020-21ನೇ ಸಾಲಿನ ಪ್ರತಿಷ್ಠಿತ ಬಸವರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಪತ್ರಕರ್ತ ಭೀಮಾಶಂಕರ ಎಂ. ಫಿರೋಜಾಬಾದ್ ಅವರಿಗೆ ಬೆಂಗಳೂರಿನ ಉಪ ಲೋಕಾಯುಕ್ತ ಬಿ. ಸಿ. ಪಾಟೀಲ್ ಪ್ರದಾನ ಮಾಡಿದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನುಪಮ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಉತ್ತಮ ಕೆಲಸ, ನಾಗರಿಕ ಸಮಾಜ ತಿದ್ದುವಲ್ಲಿ ಮತ್ತು ಸುಧಾರಣೆಯಲ್ಲಿ ಅವರು ಇನ್ನು ಹೆಚ್ಚು ಸೇವೆ ಒದಗಿಸಲಿ. ಒಳ್ಳೆಯ ರೀತಿಯಿಂದ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದ್ದಾರೆ
ಈ ಸಂದರ್ಭದಲ್ಲಿ ಆಹೇರಿಯ ಶ್ರೀ ಬಸವೇಶ್ವರ ಕರ್ಮವೀರ, ಕಲಾ, ಸಾಹಿತ್ಯ, ಸಂಸ್ಕøತಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಂಡೆಪ್ಪ ಜಿ. ತೇಲಿ, ಶರಣಬಸವ ವಿವಿ ಕುಲಪತಿ ಡಾ. ನಿರಂಜನ ನಿಷ್ಠಿ, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ಪರಮೇಶ್ವರ ದೇಸಾಯಿ, ಜಿಲ್ಲಾ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಗುಣಾರಿ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ ಹೂಗಾರ, ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ಪ್ರಗತಿ ಪರ ರೈತ ಮಲ್ಲಿಕಾರ್ಜುನ ಧೂಳಬಾ, ಸರ್ಕಾರಿ ಪಿಯು ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಸುಜಾತಾ ರೆಡ್ಡಿ, ಹಣಮಂತರಾಯ ಅಟ್ಟೂರ್, ಮಂಜು ಆಲಗೂಡ, ಪ್ರಭು ಶ್ರೀಚಂದ, ಸೋಮಶೇಖರ ಚವ್ಹಾಣ, ಎಚ್.ಬಿ. ಪಾಟೀಲ್, ನರಸಪ್ಪ ದೇಗಾಂವ, ಎಂ.ಬಿ. ನಿಂಗಪ್ಪ, ಬಾಬುರಾವ ಕೋಬಾಳ, ರಮೇಶ ಅವರಾದ(ಬಿ), ಹಣಮಂತ ಧೂಳಬಾ, ಜಗದೇವಪ್ಪ ಮುಡಿ, ಜಿ.ಬಿ. ದುಳಬಾ, ಎಸ್.ಬಿ. ಸಿರಗಾಪುರ, ಎಸ್.ಬಿ. ಜಮಾದಾರ್, ಅಂಬಾರಾಯ ಪೂಜಾರಿ ಹರ್ಷ ವ್ಯಕ್ತಪಡಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…