ಸುರಪುರ: ಕಲಬುರಗಿ – ಯಾದಗಿರಿ ಜಿಲ್ಲೆ ಸಹಕಾರ ಸಂಘ ಮತ್ತು ಶ್ರೀ ಪ್ರಭು ಮಹಾವಿದ್ಯಾಲಯ ನೌಕರರ ಸಹಕಾರ ಸಂಘ, ಸುರಪುರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ಸಹಕಾರ ಸಂಘಗಳ ಮಹತ್ವ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕಲಬುರ್ಗಿ ಯಾದಗಿರಿ ಸಹಕಾರ ಸಂಘಗಳ ಅಧಿಕಾರಿಗಳಾದ ರಾಮಚಂದ್ರರವರು ಮಾತನಾಡಿ, ಸಹಕಾರ ಎನ್ನುವ ಪದ ಬದುಕಿನ ಎಲ್ಲ ಹಂತಗಳಲ್ಲಿ ಬೇಕಾಗುವ ಹಾಗೆ ಸಮಾಜದಲ್ಲಿ ಬದುಕಲು ಒಬ್ಬರು ಮತ್ತೊಬ್ಬರ ಮಧ್ಯೆ ಸಹಕಾರ ಬೇಕಾಗುತ್ತದೆ. ಸಹಕಾರ ಸಂಘಗಳ ಮೂಲಕ ಜಾರಿಯಾಗುವ ಕಾರ್ಯಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ಎಚ್. ಹೊಸಮನಿ ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು, ಕೇವಲ ಪಠ್ಯಕ್ಕೆ ಸೀಮಿತವಾಗದೇ ಜೀವನಕ್ಕೆ ನೆರೆವಾಗುವ ಹಲವು ಸಂಗತಿಗಳನ್ನು ತಿಳಿದುಕೊಳ್ಳಬೇಕು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬೌದ್ಧಿಕ ಉನ್ನತಿಗೆ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಎಮ್.ಡಿ.ವಾರೀಸ್ ಸಹಕಾರ ಶಿಕ್ಷಕರಾದ ಸುಜಾತಾ ನೌಕರರ ಸಹಕಾರ ಸಂಘದ ಕಾರ್ಯದರ್ಶಿ ಯಲ್ಲಪ್ಪ ಜಹಗೀರದಾರ ಸದಸ್ಯರುಗಳಾದ ಎಸ್.ಎಮ್. ಸಜ್ಜನ, ವೀರಣ್ಣ ಜಾಕಾ, ಮುನೀಶಕುಮಾರ, ಮಲ್ಹಾರಾವ ಕುಲ್ಕರ್ಣಿ, ಡಾ. ಎಸ್.ಎಮ್. ಹುನಗುಂದ, ಡಾ. ಬಾಲರಾಜ ಸರಾಫ್ ಉಪಸ್ಥಿರಿದ್ದರು.
ಅಲ್ಲದೇ ಕಾಲೇಜು ಸಿಬ್ಬಂದಿಗಳಾದ ಜ್ಯೋತಿ ಕಲಾಲ, ಶಿವಲೀಲಾ, ನಮ್ರತಾ, ಹಣಮಂತ ಸಿಂಗೆ, ಡಾ ಉಪೇಂದ್ರ ನಾಯಕ ಸುಬೇದಾರ ಭಾಗವಹಿಸಿದ್ದರು ಉಪನ್ಯಾಸಕ ಸಾಯಿಬಣ್ಣ ಮುಡಬೂಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ಸುರೇಶ ಮಾಮಡಿ ನಿರೂಪಿಸಿದರು, ಮಂಜುನಾಥ ಚೆಟ್ಟಿ ಸ್ವಾಗತಿಸಿದರು ಜ್ಯೋತಿ ಮಾಮಡಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…