ಕಲಬುರಗಿ: ಪತ್ರಕರ್ತ ಅನರ್ಬ್ ಗೋಸ್ವಾಮಿ ಅವರ ವಾಟ್ಸಪ್ ಚಾಟ್ ದಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದಲ್ಲದೇ ದೇಶದ 40 ಸೈನಿಕರ ಸಾವನ್ನು ಸಂಭ್ರಸಿರುವ ರೀಪಬ್ಲಿಕ್ ವಾಹಿನಿಯ ಪ್ರಸಾರ ಸ್ಥಗಿತಗೊಳಿಸಿ ಅನರ್ಬ್ ಮೇಲೆ ದೇಶದ್ರೋಹದ ಪ್ರಕರಣ ನಡೆಸಿ ಕೇಂದ್ರ ಸರಕಾರ ಭದ್ರತೆಯ ಕುರಿತು ಯಾವುದೇ ರಾಜಿ ಮಾಡಿಕೊಳ್ಳಲ್ಲ ಎಂದು ಸಾಬಿತು ಪಡಿಸಲಿ ಎಂದು ಎಸ್.ಡಿ.ಪಿ ಐ ಪಕ್ಷದ ಕಾರ್ಯಕರ್ತುರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
ಸರಕಾರದ ಪ್ರಮುಖ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡ ಅನರ್ಬ್ ಗೋಸ್ವಾಮಿ ರಾಷ್ಟ್ರೀಯ ಭದ್ರತೆಯ ವಿಷಯಗಳನ್ನು ಕುರಿತು ಮಾಹಿತಿಯನ್ನು ಹಂಚಿಕೊಂಡು ಭದ್ರತೆಗೆ ಧಕ್ಕೆ ತಂದಿದ್ದು, ಕೇಂದ್ರ ಸರಕಾರ ವಿಷಯದಲ್ಲಿ ಜಾಣ ಕುರಡರಂತೆ ವರ್ತಿಸುತ್ತಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೀಜ್ವಾನ್ ಅಹ್ಮದ್ ಆರೋಪಿಸಿದ್ದಾರೆ.
ಸಂಘ ಪರಿವಾರದ ದೊಡ್ಡ ದೇಶಭಕ್ತಿಯ ಕೂಗುಗಳು ದೇಶದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವ್ಯವಸ್ಥೆಯನ್ನು ಹಾಳು ಮಾಡಲು ದೊಡ್ಡ ಪರದೆ ಹಿಂದಿನ ತಂತ್ರವನ್ನು ಮುಚ್ಚಿಹಾಕಲು ಮಾಡುತ್ತಿರುವ ಮುಖವಾಡ ಈ ಘಟನೆಯ ಮೂಲಕ ಬೆಳಕಿಗೆ ಬಂದಿದೆ. ರಾಷ್ಟ್ರದ ಭದ್ರತೆಗೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಮತ್ತು ಟಿಆರ್‌ಪಿ ರೇಟಿಂಗ್ ಪಾಯಿಂಟ್ ಹೆಚ್ಚಿಸಿ, ಖಾಸಗಿ ವ್ಯಕ್ತಿಗಳ ವ್ಯಾಪಾರ ಹೆಚ್ಚಿಸಲು ರಾಷ್ಟ್ರದ ಭದ್ರತೆಯನ್ನು ಮಾರುಕಟ್ಟೆ ಸರಕಾಗಿಸಲು ಅನುಮತಿಸಬಾರದು ಎಂದು ಒತ್ತಾಯಿಸಿದ್ದರು.
ಈ ಬಗ್ಗೆ ಕುಲಂಕುಶ ಉನ್ನತ ಮಟ್ಟದ ತನಿಖೆ ನಡೆಸಲು ತಂಡ ನೇಮಿಸಿ, ಅರ್ನಾಬ್ ನನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಿ, ಗೌಷ್ಯ ಮಾಹಿತಿ ಪಡೆಯಲು ಸಹಾಯ ಮಾಡಿದ ಎಲ್ಲರ ವಿರುದ್ಧ ಕ್ರಮಕೈಹೊಳ್ಳಬೇಕೆಂದು ಪ್ರತಿಭಟನಾ ನೀರತ ಹೋರಾಟಗಾರರು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಸೈಯದ್ ಅಲೀಮ್ ಇಲಾಹಿ, ಪಂಚಾಯಿತ್ ಸದಸ್ಯರಾದ ಶಕೀಲ್ ಪಾಷಾ ಭಂಕೂರು, ಪಕ್ಷದ ಕೌನ್ಸಿಲ್ ಸದಸ್ಯರಾದ ಮೊಹಮ್ಮದ್ ಮೋಹಸಿನ್, ಸೈಯದ್ ಉದ್ದೀನ್ ಫಾರೂಕ್ ಪಕ್ಷದ ಸದಸ್ಯರ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…