ಕುಟುಂಬ ಸ೦ಬ೦ಧ ಜೋಡಿಸಬೇಕೆಂದು ಅನೇಕ ಆಯತ್ಗಳ ಮೂಲಕ ಪ್ರವಾದಿ (ಸ)ರವರು ಸಹ ಆಜ್ಞಾನಿಸಿದ್ದಾರೆ. ಹಾಗಾದರೆ ಕುಟುಂಬ ಸಂಬಂಧ ಜೋಡಿಸುವುದು ಹೇಗೆ? ಕುಟುಂಬ ಸ೦ಬ೦ಧವನ್ನು ಜೋಡಿ- ಸುವುದು ಇಂತಿಂತಹ ಕಾರ್ಯಗಳ ಮೂಲಕವೇ ಆಗಿರ- ಬೇಕೆಂದು ಕುರ್ಆನಿನಲ್ಲೋ ಹದೀಸಿನಲ್ಲೋ ಹೇಳಿಲ್ಲ. ಸಾಮಾನ್ಯ ವಾಗಿ ಈ ಕೆಳಗಿನ ಕಾರ್ಯಗಳನ್ನು ಮಾಡುವ ಮೂಲಕ ಕುಟುಂಬ ಸಂಬಂಧ ಜೋಡಿಸಬಹುದು.
ನಿರಂತರವಾಗಿ ಸಂದರ್ಶಿಸುವುದು: ಕನಿಷ್ಠ ತಿ೦ಗಳಿಗೊಮ್ಮೆ ಎಹಾದರೂ ಎಲ್ಲಾ ಸಂಬಂಧಿಕರನ್ನು ಸ೦ದರ್ಶಿಸಲು ಪ್ರಯತ್ನಿ- ಸುವುದು. ಅದು ಸಾಧ್ಯವಾಗದಿದ್ದರೆ ಫೋನಿನ ಮೂಲಕ ಅವ- ರೊಂದಿಗೆ ಸಂಪರ್ಕದಲ್ಲಿರುವುದು. ಅವರ ಕ್ಷೇಮವನ್ನು ವಿಚಾರಿ- ಸುತ್ತಿರುವುದು.
ಕಾಳಜಿ ಹೊಂದುವುದು: ಸ೦ಬಂಧಿಕರಲ್ಲಿ ಯಾರಾದರೂ ಕಷ್ಟ ದಲ್ಲಿದ್ದರೆ ತಕ್ಷಣ ಅವರ ನೆರವಿಗೆ ಧಾವಿಸುವುದು. ಅವರಿಗೆ ಸಾ೦ತ್ಹನದ ಮಾತುಗಳನ್ನು ಹೇಳುವುದು. ಸಾಧ್ಯವಾದರೆ ಆ ಕಷ್ಟ ವನ್ನು ನಿವಾರಿಸುವುದು. ಸಾಧ್ಯವಾದಷ್ಟು ಸಹಾಯ ಮಾಡುವುದು. ತಿ, ಉಡುಗೊರೆಗಳನ್ನು ಕೊಡುವುದು: ಸ೦ಬಂಧಿಕರನ್ನು ಸ೦ದರ್ಶಿಸುವಾಗ ಅವರಿಗೆ ಉಡುಗೊರೆಗಳನ್ನು ಕೊಡುವುದು. ಅಥವಾ ಉಡುಗೊರೆಗಳನ್ನು ಕಳುಹಿಸುವುದು. ಹಿರಿಯ ಸ೦ಬ೦ಧಿಕರನ್ನು ಗೌರವಿಸುವುದು. ಅವರ ಆರೋಗ್ಯವನ್ನು ವಿಚಾರಿಸುವುದು. ಕಿರಿಯರನ್ನು ಪ್ರೀತಿಸುವುದು.
ದಾನ-ಧರ್ಮ ಮಾಡುವುದು: ಸಂಬಂಧಿಕರಲ್ಲಿ ಬಡವರಿದ್ದರೆ ಅವರಿಗೆ ದಾನಧರ್ಮ ಮಾಡುವುದು. ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಅವರೊಂದಿಗೆ ಬೆರೆಯುವುದು. ಅವರು ಮದುವೆ ಮುಂತಾದ ಔತಣಗಳಿಗೆ ಆಮಂತ್ರಿಸಿದರೆ ತಪ್ಪದೇ ಹಾಜರಾಗುವುದು.
ರೋಗಿಯಾದರೆ ಸ೦ದರ್ಶಿಸುವುದು: ಕುಟುಂಬ ಸಂಬ೦ಧಿ- ಕರು ರೋಗಿಯಾದರೆ ಅವರನ್ನು ಸ೦ದರ್ಶಿಸಲು ಮರೆಯ- ದಿರುವುದು. ಅವರ ರೋಗ ವಾಸಿಯಾಗಲು ಪ್ರಾರ್ಥಿಸುವುದು. ಇನ್ನು ಅವರು ನಿಧನರಾದರೆ ಅವರ ಅಂತ್ಯ ಕ್ರಿಯೆಯಲ್ಲಿ ಕೊನೆಯ ವರೆಗೂ ಪಾಲ್ಗೊಳ್ಳುವುದು. ಅವರ ಮನೆಯವರಿಗೆ ಸಾ೦ತ್ಮನ ಹೇಳುವುದು. ಅವರಿಗೇನಾದರೂ ಸಹಾಯ ಬೇಕಾ- ದರೆ ಮಾಡುವುದು.
ಆಮಂತ್ರಣವನ್ನು ಸ್ವೀಕರಿಸುವುದು: ಸ೦ಬ೦ಧಿಕರು ಮದುವೆ ಮುಂತಾದ ಶುಭ ಕಾರ್ಯಗಳಿಗೆ ಆಮಂತ್ರಿಸಿದರೆ. ಅವರ ಆಮಂತ್ರಣವನ್ನು ಸ್ವೀಕರಿಸುವುದು. ಅದರಲ್ಲಿ ಮುತುವರ್ಜಿಯಿಂದ ಪಾಲ್ಗೊಳ್ಳವುದು. ಪಾಲ್ಗೊಳ್ಳಲು ಸಾಧ್ಯವಾಗದಿದ್ದರೆ. ಮೊದಲೇ ತಿಳಿಸಿ ಕ್ಷಮೆ ಕೇಳುವುದು.
7… ಸಂತೋಷದಲ್ಲಿ ಭಾಗಿಯಾಗುವುದು: ಸಂಬಂಧಿಕರಲ್ಲಿ ಯಾರಿಗಾದರೂ ಮಗುವುಂಟಾದರೆ, ಉದ್ಯೋಗ ಸಿಕ್ಕಿದರೆ, ಪರೀಕ್ಷೆಯಲ್ಲಿ ಉತ್ತೀರ್ಣವಾದರೆ, ಲಾಭವು೦ಟಾದರೆ, ಅನುಗ್ರಹ ಲಭ್ಯವಾದರೆ ಅವರ ಸ೦ತೋಷದಲ್ಲಿ ಭಾಗಿಯಾಗುವುದು. ಶುದ್ಧ ಮನಸ್ಸಿನಿಂದ ಅವರಿಗೆ ಶುಭ ಹಾರೈಸುವುದು. ಅವರ ಅನುಗ್ರಹ ವನ್ನು ಕ೦ಡು ಅಸೂಯೆ ಪಡದಿರುವುದು.
ಮನೆಗೆ ಬಂದರೆ ಗೌರವಿಸುವುದು: ಸಂಬಂಧಿಕರಲ್ಲಿ ಯಾರಾದರೂ ಮನೆಗೆ ಬಂದರೆ ಅವರನ್ನು ಆತ್ಮೀಯವಾಗಿ ಸ್ವಾಗತಿಸುವುದು. ಅವರಿಗೆ ತೃಪ್ತಿಯಾಗುವಂತೆ ಸತ್ಯರಿಸುವುದು. ಅವರ ಆಗಮನಕ್ಕೆ ಮಹತ್ವ ನೀಡುವುದು. ಅವರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುವುದು. ಅವರು ಹಲವಾರು ವರ್ಷಗಳ ನ೦ತರ ಬ೦ದ ಅತಿಥಿಯಾಗಿದ್ದರೆ ಅವರಿಗೆ ಇನ್ನೂ ಹೆಚ್ಚಿನ ಮಹತ್ವ ನೀಡುವುದು.
ಸಂಬಂಧದಲ್ಲಿ ಬಿರುಕುಂಟಾದರೆ ತಕ್ಷಣ ಸರಿಪಡಿಸುವುದು: ಸಂಬ೦ಧಿಕರಲ್ಲಿ ಯಾರೊಂದಿಗಾದರೂ ಮನಸ್ಥಾಪ ಉಂಟಾಗಿ ಅದು ವೈಮನಸ್ಯ ಅಥವಾ ದ್ವೇಷದ ಕಡೆಗೆ ಹೊರಳುವುದಾದರೆ ಮುಂದಾಗಿ ನಿ೦ತು ಅವರಲ್ಲಿ ಕ್ಷಮೆ ಬೇಡಿ ಸಂಬ೦ಧವನ್ನು ಸರಿಪಡಿಸುವುದು. ಮನಸ್ತಾಪ ದ್ವೇಷದ ಭಾವನೆ ಹೊಂದಿರುವ ಸ್ವಭಾವ ಹೊಂದಿರುವ ಸ್ಥಿತಿಯಲ್ಲಿ ಅಗತ್ಯವಿರುವ ಅವರ ಸಹಾಯ ಹಾಗೂ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಪರಸ್ಪರ ತಪ್ಪುಗಳ ಸ್ವೀಕರಿಸುವ ಹಾಗೂ ಉಂಟಾಗಿರುವ ನೋವುಗೆ ಸಂತಾಪ ಸೂಚಿಸುವ ಮೂಲಕ ಸಂಬ೦ಧದಲ್ಲಿ ಬಿರುಕುಂಟಾಗದಂತೆ ಜಾಗರೂಕತೆ ಪಾಲಿಸುವುದು.
ಸದಾಚಾರವನ್ನು ಬೋಧಿಸುವುದು ಮತ್ತು ದುರಾಚಾರವನ್ನು ವಿರೋಧಿಸುವುದು: ಸ೦ಬಂಧಿಕರಿಗೆ ಒಳಿತನ್ನು ಬೋಧಿಸುವುದು ಅವರನ್ನು ಕೆಡುಕಿನಿ೦ದ ತಡೆಯುವುದು ಸಂಬಂಧ ಜೋಡಿ- ಸುವುದರ ಪ್ರಮುಖ ಭಾಗವಾಗಿದೆ. ಸಂಬಂಧಿಕರಿಗೆ ತೌಹೀದ್ ಬೋಧಿಸುವುದು, ಅವರನ್ನು ಶಿರ್ಕ್ನಿ೦ದ ಪಾರುಮಾಡುವುದು, ಅವರಲ್ಲಿ ಯಾರಾದರೂ ಕೆಟ್ಟ ಸ್ವಭಾವದವರಿದ್ದರೆ ಬುದ್ಧಿವಾದ ಹೇಳುವುದು, ಯಾರಾದರೂ ಇಸ್ಲಾಮಿನ ನಿಯಮಗಳಿಗೆ ವಿರುದ್ಧ ವಾಗಿ ಚಲಿಸುವವರಿದ್ದರೆ ಅದನ್ನು ವಿವರಿಸಿಕೊಡುವುದು ಇತ್ಯಾದಿ ಈ ವಿಧದಲ್ಲಿ ಒಳಪಡುತ್ತವೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…