ಕಲಬುರಗಿ: ನೀರು ಮತ್ತು ಒಳಚರಂಡಿಗಳ ಬಾಕಿ ಇರುವ ತೆರಿಗೆ ಪಾವತಿಸಿ ಎಂದು ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಗುರುವಾರ ಹಳೆ ಜೇವರ್ಗಿ ರಸ್ತೆಯಲ್ಲಿರುವ ಪಿ ಆ್ಯಂಡ್ ಟಿ ನೀರಿನ ಟ್ಯಾಂಕ್ ಹತ್ತಿರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ವತಿಯಿಂದ ನಡೆದ ಮೂರು ದಿನಗಳ ನೀರು ಮತ್ತು ಒಳಚರಂಡಿ ಕರ ಸಂಗ್ರಹ ಶಿಬಿರದಲ್ಲಿ ಅವರು ಮಾತನಾಡಿದರು.
ನಗರದಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ತಿಂಗಳಿಗೆ 15 ರೂ. ನೀರಿನ ತೆರಿಗೆ ಇದೆ, ಆದರೂ ಸಹ ಸಾರ್ವಜನಿಕರು ತೆರಿಗೆ ಪಾವತಿ ಮಾಡುತ್ತಿಲ್ಲ. ಹೀಗಾಗಿ ಜನರಲ್ಲಿ ನೀರಿನ ಹಾಗೂ ಒಳಚರಂಡಿ ತೆರಿಗೆ ಬಗ್ಗೆ ಅರಿವು ಮೂಡಿಸುವುದಕ್ಕಾಗಿಯೇ ಈ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಅನಧಿಕೃತ ನಳ ಮತ್ತು ಒಳಚರಂಡಿಗಳನ್ನು ಅಧಿಕೃತ ಮಾಡಲಾಗುತ್ತಿದ್ದು, ಹೊಸ ನೀರಿನ ಹಾಗೂ ಒಳಚರಂಡಿ ಸಂಪರ್ಕ ಬಯಸಿದರೆ ಅಂತಹವರಿಗೆ ಸಂಪರ್ಕ ಕಲ್ಪಿಸಿಕೊಡಲಾಗುತ್ತದೆ. ಬಿಪಿಎಲ್ ಕಾರ್ಡುದಾರರಿಗೆ ಸ್ವಚ್ಚ ಭಾರತ ಮಿಷನ್ ವತಿಯಿಂದ ಒಳಚರಂಡಿ ನಿರ್ಮಾಣ ಮಾಡಲು ಸರ್ಕಾರ 5 ಸಾವಿರ ರೂ. ಗಳ ಧನಸಹಾಯ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕರ ಸಂಗ್ರಹ ಶಿಬಿರವು ಜನವರಿ 21 ರಿಂದ 23ರವರೆಗೆ 3 ದಿನಗಳ ಕಾಲ ನಡೆಯಲಿದೆ. ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ತೆರಿಗೆ ಪಾವತಿ ಮಾಡಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನಗರದ ಪಿ ಆ್ಯಂಡ್ ಟಿ ನೀರಿನ ಟ್ಯಾಂಕ್ ಹತ್ತಿರದಲ್ಲಿರುವ ಕೌಂಟರ್‍ಗೆ ಬಂದು ತೆರಿಗೆ ಪಾವತಿಸಬಹುದು. ಇದಲ್ಲದೆ ನಗರದ ಪಿ ಅಂಡ್ ಟಿ ಕಾಲೋನಿ, ರೆಹಮತ್ ನಗರ, ಅಂಬಿಕಾ ನಗರ, ತಾರಫೈಲ್, ಎಸ್.ಬಿ.ಐ ಕಾಲೋನಿ, ಬಿದ್ದಾಪುರ ಕಾಲೋನಿ, ಸಾಯಿನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿಗಳು ಮನೆ ಮನೆ ತೆರಳಿ ತೆರಿಗೆ ಸಂಗ್ರಹಣೆ ಮಾಡಲಿದ್ದಾರೆ ಎಂದು ವಿವರಿಸಿದರು.
ಮೊದಲ ದಿನದ ಕರ ಸಂಗ್ರಹ ವಿವರ : ಇಂದು ಆರಂಭಗೊಂಡ ಕರ ಸಂಗ್ರಹ ಶಿಬರವು ಕೌಂಟರ್ ಹಂತದಲ್ಲಿಯೇ ನೀರಿನ ತೆರಿಗೆ 21,651 ರೂ. ಗಳು, ಒಳಚರಂಡಿ ತೆರಿಗೆ 11,145 ರೂ.ಗಳ ಸಂಗ್ರಹಣೆ ಮಾಡಲಾಗಿದೆ. 5 ಅನಧಿಕೃತ ಒಳಚರಂಡಿಗಳನ್ನು ಅಧಿಕೃತ ಮಾಡಲಾಗಿದೆ. ಒಂದು ಹೊಸ ನಳದ ಸಂಪರ್ಕ ಕಲ್ಪಿಸಲಾಗಿದೆ ಎಂದು ವಿವರ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕಲಬುರಗಿ ಘಟಕದ ಕಾರ್ಯಪಾಲಕ ಅಭಿಯಂತರ ನರಸಿಂಹ ರೆಡ್ಡಿ, ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರ ಚಂದ್ರರೆಡ್ಡಿ, ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಹೆಚ್.ಎನ್.ಸ್ವಾಮಿ, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…