ಬಿಸಿ ಬಿಸಿ ಸುದ್ದಿ

ಬಿಜೆಪಿ ಸುಳ್ಳಿನ ಪಕ್ಷ ನರೇಂದ್ರ ಮೋದಿ ಸುಳ್ಳಿನ ಹೆಡ್‌ಮಾಸ್ಟರ್ ಇದ್ದಂತೆ: ಆರ್.ವಿ.ನಾಯಕ

ಸುರಪುರ: ಬಿಜೆಪಿ ಪಕ್ಷ ಎಂದರೆ ಅದು ಸುಳ್ಳು ಹೇಳುವ ಪಕ್ಷವಿದ್ದಂತೆ,ನರೇಂದ್ರ ಮೋದಿ ಸುಳ್ಳು ಹೇಳುವ ಹೆಡ್‌ಮಾಸ್ಟರ್ ಇದ್ದಂತೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ವ್ಯಂಗ್ಯವಾಡಿದರು.

ತಾಲೂಕಿನ ಮಲ್ಲಿಬಾವಿ ಗ್ರಾಮದಲ್ಲಿ ಪೇಠ ಅಮ್ಮಾಪುರ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ,ನಮ್ಮ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರು ವಿರೋಧ ಪಕ್ಷದವರು ಬಣ್ಣದ ಮಾತಿನಿಂದ ನಿಮ್ಮನ್ನು ಆಮಿಷಗೊಳಿಸಬಹುದು ಇದಕ್ಕೆ ಯಾರೂ ಬಲಿಗಾದಂತೆ ಕಿವಿ ಮಾತು ಹೇಳಿದರು.

ಅಲ್ಲದೆ ತಾವೆಲ್ಲರು ಪ್ರಾಮಾಣಿಕವಾಗಿ ಜನರ ಸೇವೆಯನ್ನು ಮಾಡಿ,ಯಾವುದೇ ಹಣ ಮತ್ತೊಂದಕ್ಕೆ ಆಸೆ ಪಡದೆ ಗ್ರಾಮದ ಸಮಸ್ಯೆಗಳ ನಿವಾರಣಗೆ ಕೆಲಸ ಮಾಡಿದಲ್ಲಿ ಮುಂದೆ ಉತ್ತಮ ಭವಿಷ್ಯ ದೊರೆಯಲಿದೆ,ಅಲ್ಲದೆ ಗ್ರಾಮಗಳ ಜನರಿಗೆ ಮನೆ ಮತ್ತೊಂದು ಮಾಡಿ ಕೊಡಲು ಜನರಲ್ಲಿ ಹಣ ಪಡೆದಲ್ಲಿ ಅದು ಮುಂದೆ ಎಲ್ಲಾ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ,ಆದ್ದರಿಂದ ಪ್ರಾಮಾಣಿಕವಾಗಿ ಸೇವೆ ಮಾಡುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ನಿಂಗರಾಜ ಬಾಚಿಮಟ್ಟಿ ನಿಂಗಣ್ಣ ಬಾದ್ಯಾಪುರ ದೇವಿಂದ್ರಪ್ಪ ಸಾಹು ಮುದನೂರ (ಡೇವಿಡ್) ಭೀಮಾ ನಾಯ್ಕ್ ಮತ್ತಿತರರು ಮಾತನಾಡಿದರು.

ನಂತರ ಪೇಠ ಅಮ್ಮಾಪುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಾಗಣಗೇರಾ ಪೇಠ ಅಮ್ಮಾಪುರ ಜಾಲಿಬೆಂಚಿ ಮಂಗಳೂರು ಮಾಚಗುಂಡಾಳ ಬೈಚಬಾಳ ಸೇರಿದಂತೆ ಅನೇಕ ಗ್ರಾಮಗಳ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರನ್ನು ಸನ್ಮಾನಿಸಲಾಯಿತು ಹಾಗು ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ ಮಲ್ಲಿಬಾವಿ ಮುಖಂಡ ಯಲ್ಲಪ್ಪ ನಾಯಕ ಭೀಮು ನಾಯಕ ಮತ್ತವರ ಸಹೋದರರಿಂದ ರಾಜಾ ವೆಂಕಟಪ್ಪ ನಾಯಕ ಮತ್ತವರ ಕುಟುಂಬ ಸದಸ್ಯರನ್ನು ಬೃಹತ್ ಗಾತ್ರದ ಹೂಮಾಲೆ ಹಾಕಿ ಸನ್ಮಾನಿಸಲಾಯಿತು.ಇದಕ್ಕು ಮುನ್ನ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತಿತರೆ ಮುಖಂಡರನ್ನು ಸುರಪುರದಿಂದ ಮಲ್ಲಿಬಾವಿ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡ ವಿಠ್ಠಲ್ ಯಾದವ್ ಮಲ್ಲಿಣ್ಣ ಸಾಹು ನರಸಿಂಗಪೇಟ ರಾಜಾ ವೇಣುಗೋಪಾಲ ನಾಯಕ ರಾಜಾ ಸಂತೋಷ ನಾಯಕ ಅಬ್ದುಲ್ ಗಫೂರ ನಗನೂರಿ ರಮೇಶ ದೊರೆ ಆಲ್ದಾಳ ವೆಂಕಟೇಶ ಬೇಟೆಗಾರ ಬೈಲಪ್ಪಗೌಡ ವಾಗಣಗೇರಾ ಬಾಪುಗೌಡ ಕೂಡ್ಲಗಿ ದೇವಿಂದ್ರಪ್ಪ ಪೂಜಾರಿ ರವಿಚಂದ್ರ ಮಾನಪ್ಪ ಸಾಹುಕಾರ ರಾಜಾ ವಿಜಯಕುಮಾರ ನಾಯಕ ರಾಜಾ ಸುಶಾಂತ ನಾಯಕ ಮಾನಪ್ಪ ಸೂಗುರು ಹಣಮಂತ್ರಾಯ ದೊರೆ ಚೌಡೇಶ್ವರಿಹಾಳ ದಾವೂದ್ ಪಠಾಣ್ ಪ್ರಶಾಂತ ಉಗ್ರಂ ಇತರರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago