ಶಹಾಬಾದ:ಕಾನೂನು ಬಾಹಿರ ಚಟುವಟಿಕೆಗಳಿಂದ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಯುವ ಜನರಲ್ಲಿ ಸರಿಯಾದ ಮಾಹಿತಿ ನೀಡುವುದರ ಮೂಲಕ ಅರಿವು ಮೂಡಿಸಿದರೆ ಸಮಾಜದಲ್ಲಿ ಸುಧಾರಣೆ ತರಬಹುದೆಂದು ಡಿವಾಯ್‌ಎಸ್‌ಪಿ ವೆಂಕನಗೌಡ ಪಾಟೀಲ ಹೇಳಿದರು.
ಅವರು ನಗರದ ಪೊಲೀಸ್ ಇಲಾಖೆ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಕುರಿತು ಆಯೋಜಿಸಲಾದ ಜಾಗೃತಿ ಜಾಥಾ ಮತ್ತು ಬೈಕ್ ರ‍್ಯಾಲಿಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದ್ವಿಚಕ್ರ ಸವಾರಿ ಮಾಡುವಾಗ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಲೇಬೇಕು.ಇಲ್ಲವಾದರೆ ದಂಡದ ಜತಗೆ ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ.ನಗರದ ರಸ್ತೆಗಳಲ್ಲಿ ಸಾಗುವಾಗ ,ವಾಹನ ಚಲಾಯಿಸುವ ಸಮಯದಲ್ಲಿ ಮೊಬೈಲ್ ಫೋನ್ ಬಳಕೆ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಆದ್ದರಿಂದ ತಪ್ಪು ಯಾರೇ ಮಾಡಿದರೂ ಅದು ತಪ್ಪೇ.ತಪ್ಪು ಯಾರೇ ಮಾಡಿದರೂ ಬಿಟ್ಟುಬಿಡಲಾಗುವುದಿಲ್ಲ. ಅಲ್ಲದೇ ರಸ್ತೆ ದಾಟುವಾಗ ಹಿಂದೆ ಮುಂದೆ ನೋಡಿಕೊಂಡು ದಾಟಿ.ಅಲ್ಲದೇ ಸಂಚಾರಿ ನಿಯಮವನ್ನು ನಿಮ್ಮ ಮನೆಯ ಹಿರಿಯರಿಗೆ ಪಾಲಿಸಲು ತಿಳಿಸಿ ಹಾಗೂ ತಾವು ಪಾಲಿಸಿ ಎಂದರು.
ಪಿಐ ಬಿ.ಅಮರೇಶ ಮಾತನಾಡಿ, ನಗರದಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತಂದರೆ ಅಪರಾಧಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗುತ್ತದೆ. ಅಲ್ಲದೇ ಪಡ್ಡೆ ಹುಡುಗರು ಬಂದು ಸತಾಯಿಸುತ್ತಿದ್ದರೂ ಪೊಲೀಸ್ ಇಲಾಖೆಗೆ ತಿಳಿಸಿ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.
ಪಿಎಸ್‌ಐ ತಿರುಮಲೇಶ ಮಾತನಾಡಿ,ಮನೆಯಿಂದ ಹೊರಗಡೆ ಹೋಗುವ ಸಮಯದಲ್ಲಿ ಬೆಲೆ ಬಾಳುವ ಒಡವೆಗಳನ್ನು ಕುಟುಂಬದ ಮಹಿಳೆಯರು ಹಾಕಿಕೊಳ್ಳದಂತೆ ಎಚ್ಚರವಹಿಸಬೇಕು.ಒಂದು ವೇಳೆ ಹಾಕಿಕೊಳ್ಳಬೇಕಾದ ಪ್ರಸಂಗ ಬಂದರೆ ನಿಮ್ಮೊಂದಿಗೆ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೋಗಬೇಕು ಎಂದು ಹೇಳಿದರು.
ನಗರ ಪೊಲೀಸ್ ಠಾಣೆಯ ಪಿಎಸ್‌ಐ ಯಲ್ಲಮ್ಮ,ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ನಿಂಗಣ್ಣ ಹುಳಗೋಳಕರ್, ನಗರಸಭೆ ಸದಸ್ಯ ರವಿ ರಾಠೋಡ,ಭಂಕೂರ ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್, ಯಲ್ಲಾಲಿಂಗ ಪೂಜಾರಿ, ಸಿದ್ರಾಮ,ಹುಸೇನ್ ಪಾಷಾ,ವಿಶ್ವನಾಥ ಹೂಗಾರ ಸೇರಿದಂತೆ ಅನೇಕ ಕನರು ಹಾಜರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…