ಕಲಬುರಗಿ: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಠಿಯ ಚಿಂತನೆಗಳು, ವಿಚಾರಧಾರೆಗಳು ಎಲ್ಲ ಕ್ಷೇತ್ರದ ಜನತೆಗೆ ಮಾದರಿಯಾಗಿವೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.
ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯು ಹೋರಾಟಗಾರ ಲಿಂ.ಮಾರುತಿ ಮಾನ್ಪಡೆ ವೇದಿಕೆಯಡಿಯಲ್ಲಿ ನಗರದ ಕಲಾ ಮಂಡಳದಲ್ಲಿ ಶುಕ್ರವಾರ ಏರ್ಪಡಿಸಿದ ‘ಭೀಮ ಸಂಗಮ’ ಡಾ.ಬಿ.ಆರ್.ಅಂಬೇಡ್ಕರವರ ಚಿಂತನಾ ಸಮಾಗಮ’ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಡಾ.ಅಂಬೇಡ್ಕರವರ ಚಿಂತನೆಗಳು ಅಜರಾಮರ ಎಂದು ಹೇಳಿದರು.
ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿದರು. ಸ್ವಾಗತ ಸಮಿತಿ ಸಂಚಾಲಕ ಪ್ರೊ.ಯಶವಂತರಾಯ ಅಷ್ಠಗಿ ಮಾತನಾಡಿ, ಭಾರತದ ಸಂವಿಧಾನ ಅರ್ಥವಾಗಬೇಕಾದರೆ ಅಂಬೇಡ್ಕರ್ ಅವರ ಜೀವನ-ಹೋರಾಟ-ಚಿಂತನೆಗಳು ಅರ್ಥವಾಗಬೇಕಿದೆ ಎಂದರು.
‘ಸಮಾಜ ಸ್ವಾಸ್ಥ್ಯಕ್ಕೆ ಸಂವಿಧಾನದ ಕೊಡುಗೆ’ ಕುರಿತು ಶರಣ ಸಾಹಿತಿ ಪ್ರೊ.ಸಂಜಯ ಮಾಕಲ್ ಮಾತನಾಡಿದರು. ಹಿರಿಯ ಹೋರಾಟಗಾರ ವಿಠ್ಠಲ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ-ಜಿಪಂ ಸದಸ್ಯ ಅರುಣಕುಮಾರ ಎಂ.ಪಾಟೀಲ, ಕಾರ್ಯಾಧ್ಯಕ್ಷ ರವಿ ಮದನಕರ್, ಪ್ರೊ ಯಶವಂತರಾಯ್ ಅಷ್ಠಗಿ ಡಾ.ಸುರೇಶ ಶರ್ಮಾ, ಶರಣಪ್ಪ ಕೊಳ್ಳಿ ಕುರಕುಂಟಾ, ಶಿವರಾಜ ಅಂಡಗಿ, ಶರಣಬಸವ ಜಂಗಿನಮಠ, ಸಬಿಯಾ ಸನೋವರ್, ಧರ್ಮಣ್ಣ ಧನ್ನಿ, ಕಲ್ಯಾಣಕುಮಾರ ಶೀಲವಂತ, ರವೀಂದ್ರ ಭಂಟನಳ್ಳಿ, ಬಿ.ಎಂ.ಪಾಟೀಲ ಕಲ್ಲೂರ, ಎಸ್.ಎಂ.ಪಟ್ಟಣಕರ್, ಹಣಮಂತರಾಯ ಅಟ್ಟೂರ ಇದ್ದರು.
ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅರ್ಜುನ ಭದ್ರೆ. ಲಕ್ಷ್ಮಣ ದಸ್ತಿ, ಡಾ.ರಮೇಶ ಲಂಡನಕರ್, ಮರಿಯಪ್ಪ ಹಳ್ಳಿ, ವಿಜಯಲಕ್ಷ್ಮೀ ಗೊಬ್ಬೂರಕರ್, ಮಲ್ಲಿಕಾರ್ಜುನ ಭೃಂಗಿಮಠ, ಸಿದ್ಧಾರ್ಥ ಚಿಮ್ಮಾಇದಲಾಯಿ ಅವರನ್ನು ‘ಭೀಮ ಜ್ಯೋತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗಮನ ಸೆಳೆದ ಗೋಷ್ಠಿಗಳು: ‘ಮಹಿಳಾ ಸಬಲೀಕರಣಕ್ಕೆ ಬಾಬಾಸಾಹೇಬರ ಚಿಂತನೆ’ ಕುರಿತು ಮಾತನಾಡಿದ ಪ್ರಾಧ್ಯಾಪಕಿ ಡಾ.ಶಾಂತಾ ಅಷ್ಠಿಗೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲಾ ವರ್ಗಗಳ ಉದ್ಧಾರಕ್ಕಾಗಿ ಹೋರಾಟ ನಡೆಸಿದ ಮಹಾನ್ ವ್ಯಕ್ತಿ. ಮಹಿಳೆಯರಿಗೆ ಉದ್ಯೋಗ, ಶಿಕ್ಷಣ, ರಾಜಕೀಯ ಮೀಸಲಾತಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶವನ್ನು ಕಲ್ಪಿಸಿದರು ಎಂದರು. ಸಮಾಜ ಸೇವಕಿ ಜಯಶ್ರೀ ಮತ್ತಿಮೂಡ ಅಧ್ಯಕ್ಷತೆ ವಹಿಸಿದ್ದರು. ಸತೀಶ ಅಳ್ಳೋಳ್ಳಿ, ಸಾವಿತ್ರಿ ಪಾಟೀಲ, ಶ್ರೀಕಾಂತ ಪಾಟೀಲ ತಿಳಗೂಳ ಇದ್ದರು.
‘ಭಾವೈಕ್ಯತೆಗೆ ಭಾರತದ ಸಂವಿಧಾನ’ ಕುರಿತು ಸಾಹಿತಿ ಜಗನ್ನಾಥ ತರನಳ್ಳಿ ಮಾತನಾಡಿ, ಸಂವಿಧಾನದ ಅರಿವಿನ ಕೊರತೆ ಹಲವು ಸಮಸ್ಯೆಗಳನ್ನು ಸೃಷ್ಠಿಸಿದೆ. ಹೀಗಾಗಿ ಭಾರತದ ಭಾವೈಕ್ಯತೆಗೆ ಸಂವಿಧಾನದ ಅರಿವು ಅಗತ್ಯವಾಗಿದೆ ಎಂದರು. ಹಿರಿಯ ಸಾಹಿತಿ ಡಾ.ಹನುಮಂತರಾವ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ದೇವೇಂದ್ರಪ್ಪ ಕಪನೂರ, ಸೋಮಶೇಖರ ಪಾಟೀಲ ತೇಗಲತಿಪ್ಪಿ, ಡಾ.ಕೆ.ಗಿರಿಮಲ್ಲ, ಶ್ರೀಕಾಂತ ಪಾಟೀಲ ದಿಕ್ಸಂಗಿ, ಪ್ರಭುಲಿಂಗ ಮೂಲಗೆ, ಪೂಜಾ ಆಲಗೂಡ, ಮಾಲಾ ಕಣ್ಣಿ, ಮಾಲಾ ದಣ್ಣೂರ, ಮೀನಾಕ್ಷಿ ಕುಂಬಾರ, ಜ್ಯೋತಿ ಕೋಟನೂರ ಇದ್ದರು.
ಮಂಡಲಗಿರಿ ಪ್ರಸನ್ನ ಅಧ್ಯಕ್ಷತೆಯಲ್ಲಿ ನಡೆದ ‘ಸಮಾನತೆ ಕವಿತೆ’ ವಿಶೇಷ ಕವಿಗೋಷ್ಠಿ ಕವಿಗಳಾದ ಧರ್ಮಣ್ಣ ಹೆಚ್.ಧನ್ನಿ, ಶಕುಂತಲಾ ಪಾಟೀಲ ಜಾವಳಿ, ಯಶೋಧಾ ಕಟಕೆ, ಬಿ.ಎಂ.ರಾವ, ನಾಗೇಂದ್ರಪ್ಪ ಮಾಡ್ಯಾಳೆ, ಸಂತೋಷ ಕುಂಬಾರ, ಕವಿತಾ ಕಾವಳೆ, ಪ್ರಮೋದ ಪಂಚಾಳ, ಶಂಕರಲಿಂಗ ಹೆಂಬಾಡಿ, ರಮೇಶ ಯಾಳಗಿ, ಬಿ.ಶಿವಶಂಕರ ಅವರು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ತಮ್ಮ ಸ್ವ ರಚಿತ ಕವನಗಳು ವಾಚಿಸಿ ಪ್ರೇಕ್ಷಕರ ಗಮನ ಸೆಳೆದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…