ಕಲಬುರಗಿ: ಎಲ್ಲ ಸಂಬಂಧಗಳಿಗಿಂತ ಸ್ನೇಹ ಸಂಬಂಧ ಅತ್ಯಂತ ಮಾನವೀಯ ಮೌಲ್ಯಗಳ ಅರ್ಥಪೂರ್ಣ, ಪವಿತ್ರ ಸಂಗಮ. ಈ ಮಾತಿಗೆ ಡಾ. ಈಶ್ವರಯ್ಯ ಮಠ ಉತ್ತಮ ಸಾಕ್ಷಿಯಾಗಿದ್ದಾರೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಅಪ್ಪಾರಾವ ಅಕ್ಕೋಣಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಈಶ್ವರಯ್ಯ ಮಠ ಅವರ 151ನೆಯ ದಿನದ ಪುಣ್ಯಸ್ಮರಣೆ ನೆನಪೇ ನಂದಾದೀಪ ಸಂಸ್ಮರಣ ಸಂಪುಟ ಬಿಡುಗಡೆ ಸಮಾರಂಭ ಉದ್ಘಾಟಿಸಿ ಗ್ರಂಥ ಬಿಡುಗಡೆ ಮಾತನಾಡಿದರು.
ಡಾ. ಈಶ್ವರಯ್ಯ ಮಠ ಅವರು ಕನ್ನಡ ನಾಡು ಕಂಡ ಪ್ರತಿಭಾನ್ವಿತ ಸಾಹಿತಿ, ಬರಹಗಾರ. ಸಮಯಪ್ರಜ್ಞೆ ಕರ್ತವ್ಯನಿಷ್ಠೆ, ನಿರಂತರ ಅಧ್ಯಯನ, ಅಧ್ಯಾಪನಕ್ಕೆ ಹೆಸರುವಾಸಿಯಾಗಿದ್ದರು. ಕೇವಲ ನಾಲ್ಕು ತಿಂಗಳಲ್ಲಿ ಅವರ ಕುರಿತಾಗಿ ಸಂಸ್ಮರಣ ಗ್ರಂಥ ಹೊರ ತಂದಿರುವುದು ಬಹಳ ಸಂತಸದ ಮತ್ತು ಅದ್ಭುತ ಕೆಲಸ ಎಂದು ಅವರು ಹೇಳಿದರು.
ಕೃತಿ ಕುರಿತು ಮಾತನಾಡಿದ ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ, ಅನೇಕ ವ್ಯಕ್ತಿಗಳ ಸಮ್ಮಿಲನವಾಗಿದೆ.ಡಾ. ಈಶ್ವರಯ್ಯ ಅವರು ವಚನ ಸಾಹಿತ್ಯದ ದಾರಿಯಲ್ಲಿ ಗಂಭೀರ ಪಯಣ ಬೆಳೆಸಿದವರು ಎಂಬುದು ಈ ಕೃತಿಯ ಮೂಲಕ ತಿಳಿದು ಬರುತ್ತದೆ. ಇಲ್ಲಿ ಅವರ , ಅವರ ಮಿತ್ರರರು ತಾವು ಕಂಡಂತೆ ಬರೆದಿದ್ದಾರೆ.
ಡಾ. ಈಶ್ವರಯ್ಯ ಅವರ ವ್ಯಕ್ತಿತ್ವ ಹೇಗೆ ರೂಪುಗೊಂಡಿತು ಎಂಬುದನ್ನು ಈ ಕೃತಿ ತಿಳಿಸಿಕೊಡುವುದಲ್ಲದೆ ಅವರ ಪ್ರತಿಭೆ, ಸಾಮಾಜಿಕ ಕಾಳಜಿ ಎಂಥದು ಎಂಬುದನ್ನು ತಿಳಿಸುತ್ತಾರೆ. ಮುಖ್ಯ ಅತಿಥಿಯಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಶ್ರಾಂತ ಜಿಲ್ಲಾ ಅಧಿಕಾರಿ ಮೌನೇಶ ಗೋನಾಲ ತಮ್ಮ ಮತ್ತು ಈಶ್ವರಯ್ಯ ನಡುವಿನ ಒಡನಾಟವನ್ನು ಮೆಲುಕು ಹಾಕಿದರು. ಗುಲ್ಬರ್ಗ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ವಿ.ಜಿ. ಪೂಜಾರ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಟಿ.ಆರ್. ಗುರುಬಸಪ್ಪ, ಗೌರವ ಅತಿಥಿಗಳಾಗಿದ್ದರು. ಕರ್ನಾಟಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಗನ್ನಾಥ ಹೆಬ್ಬಾಳೆ, ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಪ್ರೊ. ಶಿವಾನಂದ ವಿರಕ್ತಮಠ, ಹೈದರಾಬಾದ್ ಉಸ್ಮಾನಿಯಾ ವಿವಿ ಪ್ರಾಧ್ಯಾಪಕ ಪ್ರೊ. ಲಿಂಗಣ್ಣ ಗೋನಾಲ, ಶರಣಯ್ಯ ಸ್ವಾಮಿ ಹಿರೇಮಠ ದೇವರಗೋನಾಲ ಉಪಸ್ಥಿತರಿದ್ದರು.
ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕ ಚೆನ್ನಾರಡ್ಡಿ ಪಾಟೀಲ ಸ್ವಾಗತಿಸಿದರು. ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕಲ್ಯಾಣರಾವ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
ಪ್ರೊ. ಶಾಂತಾ ಭೀಮಸೇನರಾವ, ಪವಿತ್ರಾದೇವಿ ಈ. ಹಿರೇಮಠ, ಅಕ್ಷರ, ವಿಕಾಸ, ಮಲ್ಲಿಕಾರ್ಜುನ ಹಿರೇಮಠ, ಮಹಿಪಾಲರೆಡ್ಡಿ ಮುನ್ನೂರ್, ಡಾ. ಶಿವರಂಜನ್ ಸತ್ಯಂಪೇಟೆ, ಡಾ.ಮಹೇಶ ಗಂವ್ಹಾರ, ಸಿ.ಎಸ್. ಮುಧೋಳ, ಡಾ. ಸೂರ್ಯಕಾಂತ ಪಾಟೀಲ, ಪ್ರೊ. ಎಲ್.ಬಿ. ಇಟ್ಟಿನ್, ಡಾ. ಬಸವ ಪಾಟೀಲ ಜಾವಳಿ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಡಾ. ಶಶಿಶೇಖರರೆಡ್ಡಿ ಸಾಕ್ಷ್ಯ ಚಿತ್ರ ಪ್ರದರ್ಶಿದರು. ಲಕ್ಷ್ಮಿಕಾಂತ ಪಾಂಚಾಳ ನಿರೂಪಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…