ಬಿಸಿ ಬಿಸಿ ಸುದ್ದಿ

ಪ್ರಥಮ ಬಾರಿಗೆ ಕಲಬುರಗಿ, ಬೀದರ-ಯಾದಗಿರಿ ಹಾಲು ಒಕ್ಕೂಟ ಲಾಭದಲ್ಲಿ

ಕಲಬುರಗಿ: ಕಳೆದ 25 ವರ್ಷದ ಹಾಲು ಒಕ್ಕೂಟದ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಬಂದಿರುವ ಲಾಭದಿಂದ ಹಾಲು ಉತ್ಪಾದಿಸುವ ರೈತರಿಗೆ ಪ್ರತಿ ಲೀಟರ್ ಹಸುವಿನ ಹಾಲಿಗೆ 2 ರೂ. ಹಾಗೂ ಎಮ್ಮೆ ಹಾಲಿಗೆ 3 ರೂ. ಗಳಂತೆ ಹೆಚ್ಚುವರಿ ದರವನ್ನು ನೀಡಲಾಗುತ್ತಿದೆ ಎಂದು ಕಲಬುರಗಿ, ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರಪ್ಪ. ಕೆ. ಪಾಟೀಲ್ ತಿಳಿಸಿದರು.

ಸೋಮವಾರ ಹುಮನಾಬಾದ ರಿಂಗ್ ರಸ್ತೆಯಲ್ಲಿರುವ ಕಲಬುರಗಿ, ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟದ ತರಬೇತಿ ಕೇಂದ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ 2019-2020 ನೇ ಸಾಲಿನಲ್ಲಿ ಒಕ್ಕೂಟವು 2 ಕೋಟಿ ರೂ.ಗಳ ಲಾಭಗಳಿಸಿದೆ. ಆಡಳಿತ ಮಂಡಳಿ ತೀರ್ಮಾನದಂತೆ 2021 ರ ಫೆಬ್ರವರಿ 1 ರಿಂದ ಮೇ 31 ರವರೆಗೆ ಹಾಲು ಖರೀದಿಸುವ ದರದಲ್ಲಿ ಹೆಚ್ಚಳ ಮಾಡಲಿದ್ದೇವೆ. ನಂದಿನಿ ಗೋಲ್ಡ್ ಪಶು ಆಹಾರ ಪ್ರತಿ ಟನ್‍ಗೆ 1000 ರೂ.ಗಳ ರಿಯಾಯಿತಿ, ನಂದಿನಿ ಬೈಪಾಸ್ ಪಶು ಆಹಾರದಲ್ಲಿ ಪ್ರತಿ ಟನ್ 1000 ರೂ.ಗಳ ರಿಯಾಯಿತಿ ಹಾಗೂ ನಂದಿನಿ ಖನಿಜ ಮಿಶ್ರಣ ಪ್ರತಿ ಕೆ.ಜಿ.ಗೆ 10 ರೂ.ಗಳ ದರವನ್ನು ಕಡಿತಗೊಳಿಸಿ ರಿಯಾಯಿತಿ ನೀಡಲಾಗುವುದು ಎಂದು ವಿವರಿಸಿದರು.

ಬಂದಿರುವ 2 ಕೋಟಿ ಲಾಭದಲ್ಲಿ ಒಕ್ಕೂಟದ ವತಿಯಿಂದ 1.25 ಕೋಟಿ ಹಣವನ್ನು ಮೂರು ಜಿಲ್ಲೆಗಳ ಒಟ್ಟು 11,200 ಹಾಲು ಉತ್ಪಾದಕ ರೈತರು ಪಡೆಯಲಿದ್ದಾರೆ. ಪ್ರಸ್ತುತ ಒಕ್ಕೂಟವು ಪ್ರತಿದಿನ 51 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಮುಂದಿನ 5 ತಿಂಗಳ ಬೇಸಿಗೆ ಕಾಲವಾಗಿದ್ದರಿಂದ ಮೇವಿನ ಕೊರತೆ ನಿಗಿಸಿಕೊಂಡು ಹಾಲು ಉತ್ಪಾದನಾ ವೆಚ್ಚ ಕಡಿಮೆ ಮಾಡಲು ರೂ. 1000 ಪಶು ಆಹಾರ ದರದಲ್ಲಿ ಕಡಿಮೆ ಮಾಡಲಾಗಿದೆ ಎಂದು ಹೇಳಿದರು.

ರೈತರರು ಹಸಿರು ಮೇವು ಬೆಳೆಯಲು ಮೇವಿನ ಬಿತ್ತನೆ ಕಡ್ಡಿಗಳನ್ನು ಉಚಿತವಾಗಿ ನೀಡಲಾಗುವುದು. ಇದರ ಸದುಪಯೋಗ ಪಡೆದು ರೈತರು ಗುಣಮಟ್ಟದ ಹಾಲು ನೀಡಬೇಕು. ಯಾವುದೇ ಸಮಸ್ಯೆ ಕಂಡುಬಂದಲ್ಲಿ ನಂದಿನಿಯ ಟೋಲ್ ಫ್ರೀ 080-66660000 ನಂಬರಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಆಧುನಿಕ ವಿನ್ಯಾಸದ ನಂದಿನಿ ಪಾರ್ಲರ್‍ಗಳನ್ನು ಕರ್ನಾಟಕ ಹಾಲು ಮಹಾಮಂಡಳಿ ಅನುದಾನದಲ್ಲಿ ಇದುವರೆಗೂ 75 ಲಕ್ಷ ವೆಚ್ಚದಲ್ಲಿ 15 ಪಾರ್ಲರ್‍ಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಒಕ್ಕೂಟದ ವತಿಯಿಂದ 33 ಬಗ್ಗೆಯ ಚಾಕಲೇಟ್‍ಗಳು  ಹಾಗೂ ನಂದಿನಿ ಬ್ರೆಡ್ ತಯಾರಿಸಲಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ, ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ, ನಿರ್ದೇಶಕರುಗಳಾದ ಶ್ರೀಕಾಂತ ದಾನಿ, ದಿವಾಕಾರ ಜಾಗೀದಾರ್, ಭೀಮರಾವ್ ಬಳತೆ, ಈರಣ್ಣ ಝಳಕಿ, ವಿಠ್ಠಲ ರೆಡ್ಡಿ ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶಕುಮಾರ ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago