ಕಲಬುರಗಿ: ವಿಶ್ವವೇ ಮೆಚ್ಚಿರುವ ಭಾರತೀಯ ಸಂವಿಧನವನ್ನು ಕೆಲ ಶಕ್ತಿಗಳು ಬದಲಾವಣೆಗೆ ಹುನ್ನಾರವೂ ನಡೆಸುತ್ತಿದ್ದಾರೆ. ಆದರೆ, ದೇಶದ ಹಿತವನ್ನಡಗಿದ ಸಂವಿಧಾನವನ್ನು ಯಾವ ಕಾಲಕ್ಕೂ ಬದಲಾವಣೆ ಮಾಡಲು ಸಾದ್ಯವಿಲ. ಈ ದಿಸೆಯಲ್ಲಿ ಸಂವಿಧಾನ ರಕ್ಷಣೆಗೆ ಕಾವ್ಯ ಹೊರ ಹೊಮ್ಮಲಿ ಎಂದು ಮಕ್ಕಳ ಹಿರಿಯ ಸಾಹಿತಿ ಎ ಕೆ ರಾಮೇಶ್ವರ ಹೇಳಿದರು.
ನಗರದ ಕಲಾ ಮಂಡಳದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಹಾಗೂ ಅಮರ್ಜಾ ಪ್ರಕಾಶನ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಗಣರಾಜ್ಯೋತ್ಸವ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕವಿಗಳಿಗೆ ಈ ಮಾತು ಹೇಳಿದರು.
ನಮ್ಮದು ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವಗಳ ಮೌಲ್ಯಗಳು ಹೊಂದಿದ್ದು, ಸರ್ವರ ಏಳಿಗೆ ಮತ್ತು ಸಮಗ್ರ ವಿಕಾಸಕ್ಕೆ ರಾಷ್ಟ್ರೀಯ ಗ್ರಂಥವಾಗಿದೆ. ಇಂಥ ಸಂವಿಧಾನ ಬದಲಾಯಿಸಲು ತರೆ ಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಎಲ್ಲರೂ ಎಚ್ಚರಿಕೆಯಿಂದಿದ್ದು ಹೋರಾಟ ನಡೆಸಬೇಕಾಗಿದೆ. ಸಂವಿಧಾನದ ಆಶಯಗಳು ಕೂಡ ಜನ ಸಾಮಾನ್ಯರಿಗೆ ತಲುಪಿಸಲು ಪ್ರಾಮಾಣಿಕ ಯತ್ನಗಳು ನಡೆಯಬೇಕಾಗಿದೆ ಎಂದರು.
ಗುವಿಕ ಸೂಕ್ಷ್ಮ ಜೈವಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ ರಮೇಶ ಎಲ್ ಲಂಡನಕರ್ ಅವರು ಕಾರ್ಯಕ್ರಮ ಉದ್ಘಾಟಿಸಿ, ವರ್ತಮಾನದ ಸತ್ಯಾಸತ್ಯತೆಗಳನ್ನು ಜನರಿಗೆ ತಿಳಿಸಿ ಹೇಳುವ ಕೆಲಸ ಕವಿಗಳು ಮಾಡಬೇಕು. ಮತ್ತು ಡಾ ಅಂಬೇಡ್ಕರವರು ಸಂವಿಧಾನ ರಚಿಸಲು ಎಷ್ಟು ಕಷ್ಟ ಪಟ್ಟರು ಹಾಗೂ ದೇಶದ ಅಖಂಡತೆಗೆ ಹೇಗೆ ಸಂವಿಧಾನ ಗಟ್ಟಿಯಾಗಿ ನಿಂತಿದೆ ಎಂಬುದರ ಬಗ್ಗೆಯೂ ಸಾಹಿತಿಗಳು ಕನ್ನಡಿಯಾಗಿ ನಿಲ್ಲಬೇಕು. ಕಾವ್ಯ ಬದುಕನ್ನು ತಿದ್ದಿ ಹೇಳುವ ಕೆಲಸವಾಗಬೇಕಾಗಿದೆ ಎಂದರು.
ಡಾ ಅಂಬೇಡ್ಕರವರ ಭಾವಚಿತ್ರಕ್ಕೆ ಲೇಖಕಿ ದಾಕ್ಷಾಯಿಣಿ ಬಳಮಟ್ಟಿಮಠ ಅವರು ಪೂಜೆ ನೆರವೇರಿಸಿದರು. ನ್ಯಾಯವಾದಿ ಸುನೀಲ ಒಂಟಿ, ಮುಖಂಡ ಧರ್ಮಣ್ಣ ಪಟ್ಟಣಕರ್ ಮಾತನಾಡಿದರು. ಸಾಹಿತಿ ಧರ್ಮಣ್ಣ ಎಚ್ ಧನ್ನಿ, ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಸಂಜೀವ ಟಿ ಮಾಲೆ, ಅಮೃತರಾವ ನಾಯ್ಕೋಡಿ, ನಂದಕುಮಾರ ತಳಕೇರಿ ಭಾಗವಹಿಸಿದರು. ಎಂ ಎನ್ ಸುಗಂಧಿ ನಿರೂಪಿಸಿದರು. ಈರಣ್ಣ ಜಾನೆ ವಂದಿಸಿದರು.
ಗಮನ ಸೆಳೆದ ಕವಿಗಳು: ಡಾ ಎಚ್, ಎಸ್, ಬೇನಾಳ ಅವರ ’ಮರೆತೇವು ನಾವು’ ಮತ್ತು ಡಾ,ಗಿರಿಮಲ್ಲರ ’ಸಮಾನತೆ ಎದಲ್ಲಿದೆ’ ಹಾಗೂ ಯುವ ಕವಯತ್ರಿ ಸುರೇಖಾ ಜೇವರ್ಗಿ ಅವರ ’ಹೆಮ್ಮಯ ಪುತ’ ಕವನಗಳು ಎಲ್ಲರ ಮನ ಸೆಳೆದ ಕವನಗಳಾಗಿದ್ದವು. ನಾಗೇಂದ್ರ ಮಾಡ್ಯಾಳೆ, ಶಾಂತಾಬಾಯಿ ಮಾಲೆ, ವಿಜಯಲಕ್ಷ್ಮೀ ಗುತ್ತೇದಾರ, ಕಾಶೀನಾಥ ಮುಖರ್ಜಿ, ಎಚ್ ಎಸ್ ಬರಗಾಲಿ, ಬಿಳಲಕರ ಶಿವಶಂಕರ, ಎಂಬಿ ನಿಂಗಪ್ಪ, ಮನೋಹರ ಮರಗುತ್ತಿ, ಹಣಮಂತರಾವ ಕಂಟೇಕರ್ ಸೇರಿ 13 ಜನ ಕವಿಗಳು ಕವನ ಮಾಡಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…